ಬೆಂಗಳೂರು: ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆವರೆಗೆ ಗುಡುಗು ಆರ್ಭಟದಿಂದಾಗಿ ರಾಜಧಾನಿ ಜನರು ಬೆಚ್ಚಿದ್ದಾರೆ.
ಗುಡುಗು ಶಬ್ದಕ್ಕೆ ನಿದ್ದೆಯ ಮಂಪರಿನಲ್ಲಿದ್ದ ಗರ್ಭಿಣಿ ಮಹಿಳೆಯರು, ಚಿಕ್ಕ ಮಕ್ಕಳು, ಬಾಣಂತಿಯರು, ಹಿರಿಯರು ಆತಂಕಗೊಂಡರು. ನಿರಂತರವಾಗಿ ಗುಡುಗು ಶಬ್ದಕ್ಕೆ ಗಾಬರಿಯಾದ ಜನರು ಹೊರಗಡೆ ಯುದ್ಧ ನಡೆಯುತ್ತಿರುವಂತೆ ಭಾಸವಾಗುತ್ತಿತ್ತು.
ತಡರಾತ್ರಿಯಿಂದ ಮುಂಜಾನೆವರೆಗೆ ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ವಾಯವಿಹಾರಿಗಳಿಗೆ ತೊಂದರೆಯಾಯಿತು. ಕೆ.ಆರ್.ಮಾರುಕಟ್ಟೆ ಸೇರಿ ನಗರದ ಇತರೆ ಮಾರುಕಟ್ಟೆಗಳ ಹೂವಿನ ವ್ಯಾಪಾರಿಗಳ ವ್ಯಾಪಾರಕ್ಕೂ ಅಡಚಣೆಯಾಯಿತು.
ತಗ್ಗು ಪ್ರದೇಶದ ನಿವಾಸಿಗಳು ರಾತ್ರಿಯಿಡಿ ಜಾಗರಣೆ ಮಾಡುವಂತಾಯಿತು. ಕೆಂಪೇಗೌಡ ಬಸ್ ನಿಲ್ದಾಣ, ಚಾಮರಾಜಪೇಟೆ, ವಿದ್ಯಾಪೀಠ, ಮೈಸೂರು ರಸ್ತೆ, ವಿ.ವಿ.ಪುರ, ಬಸವನಗುಡಿ, ಜೆ.ಪಿ.ನಗರ, ಬನಶಂಕರಿ, ಗಿರಿನಗರ, ಯಶವಂತಪುರ, ನಾಯಂಡಹಳ್ಳಿ, ಕೆಂಗೇರಿ ಸೇರಿ ನಗರದ ವಿವಿಧೆಡೆ ಜೋರು ವರ್ಷಧಾರೆಯಾಯಿತು. ಇನ್ನೂ 4 ದಿನ ನಗರದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಸ್ತೆಗಳ ನಾಮಫಲಕ ಸೇರಿ ವಿವಿಧೆಡೆ ಕನ್ನಡ ಕಡೆಗಣನೆ: ಬಿಬಿಎಂಪಿ ನಡೆಗೆ ಆಕ್ಷೇಪ


