BBMP
Loading ...

Money Stole

ಬೆಂಗಳೂರು: ಇದು ಬೇಲಿಯೇ ಎದ್ದು ಹೊಲ ಮೇದಾ ಕಥೆಯಾಗಿದ್ದು ನಗರದ ಪ್ರಸಿದ್ಧ ಗಾಳಿ ಆಂಜನೇಯ ದೇವಾಸ್ಥಾನದಲ್ಲಿ ಕಳ್ಳತನ ನಡೆದಿದ್ದು ದೇವಸ್ಥಾನ ಸಿಬ್ಬಂದಿಯಿಂದಲೇ ಹುಂಡಿ ಹಣಕ್ಕೆ ಉಂಡೇ ನಾಮ ಹಾಕಲಾಗಿದೆ.

ಕಂತೆ ಕಂತೆ ಹಣ ಕದ್ದ ಟ್ರಸ್ಟಿಗಳು ಮತ್ತು ಅರ್ಚಕರು ಹಾಗೆ ಬೆಂಗಳೂರು ನಗರದ ದೇವಸ್ಥಾನ ಹಣಕ್ಕಿಲ್ಲ ಭದ್ರತೆ. ಭಕ್ತರ ಹಣ ಕಳ್ಳರ ಜೇಬು ಸೇರ್ತಿದ್ರೂ ಇಲ್ಲಿ ಕೇಳೋರಿಲ್ಲ. ನೋಡ ನೋಡ್ತಿದ್ದಂತೆ ಟೇಬಲ್ ಮೇಲೆ ಖಾಲಿಯಾಗುತ್ತೆ ಕಂತೆ ಕಂತೆ ಹಣ..

ಹುಂಡಿ ಎಣಿಕೆ ಮಾಡಲು ಚಾಪೆ ಮೇಲೆ ರಾಶಿ ರಾಶಿ ನಾಣ್ಯ ಸುರಿಯಲಾಗಿತ್ತು ಆದ್ರೆ ಈ ಹಣ ಲೆಕ್ಕಚಾರ ಹಾಕಿ ದೇವಸ್ಥಾನಕ್ಕೆ ಬಳಸಬೇಕಿದ್ದವರೆ ಗುಳುಂ ಮಾಡಿದ್ದಾರೆ.

ಸಿಸಿಟಿವಿ ಕಣ್ಗಾವಾಲಿದ್ರು,ಕಂತೆ ಕಂತೆ ಹಣ ಕದ್ದು ಜೇಬಿಗಿಳಿಸಿದ್ದಾರೆ. ಇಂದು ಒಂದೋ ಎರಡೋ ನೋಟು ಇಳಿಸಿದ್ರೆ ಪರವಾಗಿಲ್ಲ. 500 ರೂಪಾಯಿ ನೋಟ್ ಗಳ ಕಂತೆ, ಬಂಡಲ್ ಗಳಲ್ಲೆ ಕದ್ದು ಸಾಗಿಸಿ ಬಿಟ್ಟಿದ್ದಾರೆ.ಹಣ ಕದ್ದರೋ ಯಾರೋ ಕಳ್ಳರಲ್ಲ ಬದಲಿಗೆ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಕೆಲ ಅರ್ಚಕರು ಮತ್ತು ಕೆಲ ಟ್ರಸ್ಟಿಗಳು.

ಹಣ ಕದ್ದು ಸಾಗಿಸಿರೋ ಎಕ್ಸ್ ಕ್ಲೂಸಿವ್ ಸಿಸಿಟಿವಿ ಲಭ್ಯವಾಗಿದು ದೇವರ ಹಣ ಕದ್ದಿರೋ ಕೈಗಳಿ ಕೋಳ ತೊಡಿಸಬೇಕಿದ್ದು, ಈ ಬಗ್ಗೆ ಸರ್ಕಾರ ಕೂಡ ತಲೆಕೆಡಿಸಿಕೊಳ್ಳಬೇಕಿದೆ.ಸದ್ಯ ಇದುವರೆಗೂ ಯಾವುದೇ ದೂರು ಹಾಗೂ ಎಫ್ ಐಆರ್ ದಾಖಲಾಗಿಲ್ಲ ಈ ಹಿಂದೆ ಕೃತ್ಯ ನಡೆದಾಗ ಬ್ಯಾಟರಾಯನಪುರ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು.

12 ವರ್ಷ ಆಸ್ತಿ ಸ್ವಾಧೀನಪಡಿಸಿಕೊಂಡವರಿಗೆ ಮಾಲೀಕತ್ವದ ಹಕ್ಕು : ಸುಪ್ರೀಂ ಕೋರ್ಟ್

Leave a Reply

Your email address will not be published. Required fields are marked *