BBMP
Loading ...

Park

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಮಾಕ್ಷಿಪಾಳ್ಯ ವಾರ್ಡ್ ನಂಬರ್​ 101ರಲ್ಲಿ ನೂತನವಾಗಿ ಅಭಿವೃದ್ಧಿಗೊಂಡಿರುವ ಕೆ.ಹೆಚ್.ಬಿ ಕಾಲೋನಿ ಕಿರು ಅರಣ್ಯ ಉದ್ಯಾನವನವನ್ನು ಇದೇ ಏಪ್ರಿಲ್​ 20ರ ಭಾನುವಾರ ಸಂಜೆ 5 ಗಂಟೆಗೆ ಲೋಕಾರ್ಪಣೆಗೊಳಿಸಲಾಗುತ್ತದೆ.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್​. ಸುರೇಶ್​ ಕುಮಾರ್​ ಅವರು ಉದ್ಯಾನವನ್ನು ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದರಾದ ಪಿ.ಸಿ. ಮೋಹನ್​ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಬಸವೇಶ್ವರನಗರದ 5ನೇ ಅಡ್ಡರಸ್ತೆ, 1ನೇ ಹಂತ, ಕೆ.ಹೆಚ್.ಬಿ ಕಾಲೋನಿಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸರ್ವರೂ ಆಗಮಿಸಲು ಮನವಿ ಮಾಡಲಾಗಿದೆ.

ಕಾಮಾಕ್ಷಿಪಾಳ್ಯ ವಾರ್ಡಿನ ಕೆ.ಹೆಚ್.ಬಿ ಕಾಲೋನಿಯಲ್ಲಿ ಬಹಳ ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದ ಬಿ.ಬಿ.ಎಂ.ಪಿ ಯ ಖಾಲಿ ಜಾಗದಲ್ಲಿ ಸ್ಥಳೀಯ ನಾಗರಿಕರ ಒತ್ತಾಸೆಯ ಮೇರೆಗೆ ಹಾಗೂ ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ನೂತನವಾಗಿ ಅಭಿವೃದ್ಧಿಗೊಂಡ ಒಂದು ಸುಂದರವಾದ ಕಿರು ಅರಣ್ಯ ಉದ್ಯಾನವನ ಇದೇ ಏಪ್ರಿಲ್ 20 ರಂದು ಲೋಕಾರ್ಪಣೆಗೊಳ್ಳುತ್ತಿದೆ.

ಸುಮಾರು ಒಂದು ಎಕರೆಗೂ ಹೆಚ್ಚು ವಿಸ್ತೀರ್ಣವಿರುವ ಜಾಗದಲ್ಲಿ 50 ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಇದೀಗ ಈ ಉದ್ಯಾನವನದಲ್ಲಿ ಉತ್ತಮವಾದ ನಡೆಯುವ ಪಥ, ಸುತ್ತಲೂ ಭದ್ರವಾದ ಹಾಗೂ ಸುಂದರವಾದ ಗ್ರಿಲ್ ವ್ಯವಸ್ಥೆ, ಕೂರಲು ಉತ್ತಮವಾದ ಬೇಂಚ್, ಬೋರವೆಲ್, ಕುಡಿಯುವ ನೀರಿನ ವ್ಯವಸ್ಥೆ, ಅಲಂಕಾರಿಕ ದೀಪಗಳ ವ್ಯವಸ್ಥೆ, ಬಯಲು ವ್ಯಾಯಾಮ ಶಾಲೆ, ಮಕ್ಕಳಿಗೆ ಆಟದ ಸಲಕರಣೆಗಳು, ಸಂಗೀತವನ್ನು ಆಲಿಸಲು ಸ್ಪೀಕರ್‌ಗಳು, ಯೋಗ ಹಾಗೂ ಧ್ಯಾನಕೇಂದ್ರ ಮತ್ತು ಭದ್ರತೆಗೆ ಸಿ.ಸಿ ಕ್ಯಾಮೆರಾ, ಶೌಚಾಲಯ ಹೀಗೆ ಹಲವು ಅಂಶಗಳನ್ನು ಅಳವಡಿಸಿಕೊಂಡು ಒಂದು ಸುಂದರವಾದ ಕಿರು ಅರಣ್ಯ ಉದ್ಯಾನವನ ಅಭಿವೃದ್ಧಿಗೊಳಿಸಲಾಗಿದೆ.

ಸಾರ್ವಜನಿಕರು ಈ ಉದ್ಯಾನವನವನ್ನು ಸದುಪಯೋಗಿಸಿಕೊಂಡು, ಉದ್ಯಾನವನ ಇದೇ ರೀತಿ ಸ್ವಚ್ಚವಾಗಿರಲು ಹಾಗೂ ಸುಂದರವಾಗಿರಲು ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.

ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಯಶಸ್ವಿ ಸಂಧಾನ ಸಭೆ; ಲಾರಿ ಮುಷ್ಕರ ವಾಪಸ್

Leave a Reply

Your email address will not be published. Required fields are marked *