Greater Bengaluru News9 : ರಾಜ್ಯ ವಿಧಾನಮಂಡಲ ಮಳೆಗಾಲದ ಅಧಿವೇಶನಕ್ಕೆ ರಾಜ್ಯಪಾಲರು ದಿನಾಂಕ ನಿಗದಿ ಮಾಡಿದ್ದು, ಆಗಸ್ಟ್ 13 ರಿಂದ 27ರವರೆಗೆ ಹತ್ತು ದಿನಗಳ ಕಾಲ ಕಾರ್ಯಕಲಾಪಗಳು ನಡೆಯಲಿದೆ.
13, 20 ಮತ್ತು 27ರಂದು ಖಾಸಗಿ ಸರ್ಕಾರಿ ಕಾರ್ಯಕಲಾಪಗಳಿದ್ದು, ಉಳಿದಂತೆ ಏಳು ದಿನ ಸರ್ಕಾರಿ ಕಾರ್ಯಕಲಾಪಗಳಿಗೆ ದಿನ ನಿಗದಿ ಮಾಡಲಾಗಿದೆ. ಇನ್ನೂ 15ಕ್ಕೆ ಸ್ವಾತಂತ್ರ್ಯ ದಿನಾಚರಣೆ, ಭಾನುವಾರ ಸೇರಿ ಐದು ದಿನ ಸಾರ್ವತ್ರಿಕ ರಜಾದಿನಗಳು ಇರಲಿವೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಇದು ಮೊದಲ ಅಧಿವೇಶನ. ಇನ್ನೂ ಸಿದ್ದರಾಮಯ್ಯ ಸಿಎಂ ಅವಧಿಯಲ್ಲಿ ಸಂಪುಟದಲ್ಲಿ ಇದ್ದ ಕೆಲವರು ಅದೇ ಖಾತೆಯಲ್ಲಿ ಮುಂದುವರಿದಿದ್ದಾರೆ. ಈ ಅಧಿವೇಶನದಲ್ಲಿ ಸಭಾಪತಿ, ಉಪಸಭಾಪತಿ ಮತ್ತು ಸ್ಪೀಕರ್, ಉಪ ಸಭಾಧ್ಯಕ್ಷ, ಎರಡೂ ಸದನದ ಸರ್ಕಾರದ ಮುಖ್ಯ ಸಚೇತಕರು ಬದಲಾಗುವ ಸಾಧ್ಯತೆಗಳು ಇವೆ.
ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸ್ಆ್ಯಪ್ ಗ್ರೂಪ್ಗೆ ಜಾಯಿನ್ ಆಗಿ: ಬಿಬಿಎಂಪಿ ನ್ಯೂಸ್9
ಇನ್ನು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ೋಷಣೆ ಮಾಡದ ಕೆಲ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದಕ್ಕೆ ಬೇಕಾದ ಖರ್ಚು-ವೆಚ್ಚಕ್ಕೆ ಪೂರಕ ಅಂದಾಜು ಹಣಕಾಸು ಬಿಲ್‌ನ್ನು ಮಂಡಿಸಿ ಒಪ್ಪಿಗೆ ಪಡೆಯಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಮುಂದಾಳತ್ವವನ್ನು ಡಿ.ಕೆ.ಶಿವಕುಮಾರ್ ವಹಿಸಿಕೊಂಡಿದ್ದು, ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಶಾಸಕರನ್ನು ಯಾವ ರೀತಿ ಎದುರಿಸಲಿದ್ದಾರೆ ಎಂಬುದು ಎಲ್ಲರಿಗೂ ಕುತೂಲಹ ಕೆರಳಿಸಿದೆ.


