BBMP
Loading ...

Police (2)

Greater Bengaluru News9 : ಗಂಡನನ್ನು ಅರೆಸ್ಟ್‌ ಮಾಡಿ ನನ್ನನ್ನು ಮಂಚಕ್ಕೆ ಕರೆಯುತ್ತಾರೆ ಎಂದು ಮೂಡಬಿದರೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಂದೇಶ್ ಪಿ.ಜಿ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ಗೃಹಸಚಿವರ ಹೆಸರು ಹೇಳಿ ಹೆದರಿಸುತ್ತಾನೆ. ಮಾತು ಕೆಳದಿದ್ರೆ ಹೊಡೆಯುತ್ತಾನೆ. ದುಡ್ಡು ಕೊಡದಿದ್ರೆ ರೌಡಿಶೀಟರ್ ತೆರೆಯುವ ಬೆದರಿಕೆ ಹಾಕುತ್ತಾರೆ. ನನ್ನ ಜೊತೆ ಮಲಗು, ಮಲಗು ಎಂದು ಪೀಡಿಸುತ್ತಿದ್ದ. ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ದೂರು ಕೊಟ್ಟರು ಏನೂ ಪ್ರಯೋಜನ ಆಗಿಲ್ಲ ಎಂದು ಮಹಿಳೆ ದೂರಿದ್ದಾರೆ. ನೊಂದ ಮಹಿಳೆ ಡಿಜಿಪಿ, ಗೃಹ ಸಚಿವರು ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ.

ಸಂದೇಶ್ ಪಿ.ಜಿ, ಮಹಿಳೆಯರ ಮನೆ ಗೇಟ್ ಹಾರುತ್ತಾರೆ. ಮಹಿಳೆಯರ ಕೈ ಹಿಡಿದು ಡ್ಯಾನ್ಸ್ ಮಾಡ್ತಾರೆ. ಕಿರುಕುಳಕ್ಕೆ ಒಳಗಾದ್ರೂ ಮಹಿಳೆಯರು ಮೌನಕ್ಕೆ ಶರಣಾಗಿದ್ದಾರೆ. ಮೂಡಬಿದರೆಯ 20ಕ್ಕೂ ಹೆಚ್ಚು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ.

ಎಸಿಪಿ ಶ್ರೀಕಾಂತ್ ಇಲಾಖೆಯಲ್ಲಿ ಹೆಣ್ಣಮಕ್ಕಳನ್ನು ಮಂಚಕ್ಕೆ ಕರಿಯೋದು ಕಾಮನ್ ಅಂತಾರೆ ಎಂದು ನೊಂದ ಮಹಿಳೆಯರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *