BBMP
Loading ...

Shalini Rajanees

ಬೆಂಗಳೂರು: ವಿದ್ಯುತ್​ ಸಂಪರ್ಕ ಸಂಬಂಧ ಸುಪ್ರೀಂಕೋರ್ಟ್​ 17/04/2024ರಂದು ನೀಡಿರುವ ಆದೇಶದ ನಿರ್ದೇಶನಗಳನ್ನು ಪಾಲಿಸಲು ಕ್ರಮ ವಹಿಸುವ ಕುರಿತು ಮೇ 13ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್​ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು.

ಸಭೆಯ ಮುಖ್ಯಾಂಶಗಳು ಇಲ್ಲಿವೆ….
ಮಾನ್ಯ ಸರ್ವೋಚ್ಚ ನ್ಯಾಯಾಲಯದ 17/04/2024ರ ಆದೇಶದ ನಂತರ ರಾಜ್ಯದಲ್ಲಿ 87,801 ನಗರ ಮತ್ತು 83,782 ಗ್ರಾಮೀಣ ಪ್ರದೇಶ ಸೇರಿದಂತೆ ಒಟ್ಟು 1,71,583 ಅರ್ಜಿಗಳಿಗೆ ವಿದ್ಯುತ್​ ಸಂಪರ್ಕ ನೀಡಲು ಬಾಕಿ ಇದ್ದು, ಈ ಪೈಕಿ ಅತಿ ಹೆಚ್ಚು ಸಂಖ್ಯೆ 85,844 ಅರ್ಜಿಗಳು ಬೆಂಗಳೂರು ನಗರಕ್ಕೆ ಸಂಬಂಧಿಸಿವೆ. ಆದರೆ, ಸಭೆಯಲ್ಲಿ ಓಸಿ/ಸಿಸಿ ನೀಡಲು BBMPಗೆ ಸಂಬಂಧಿಸಿದಂತೆ Building Plan Approval Software (BPAS) ನಲ್ಲಿ ಕೇವಲ 38 ಅರ್ಜಿಗಳು ಬಾಕಿ ಇರುವುದಾಗಿ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಹಾಗೂ ಪಂಚತಂತ್ರ ಪೋರ್ಟಲ್‌ನಲ್ಲಿ ಕೇವಲ 44 ಅರ್ಜಿಗಳು ಬಾಕಿ ಇರುವುದಾಗಿ ಆಯುಕ್ತರು, ತಿಳಿಸಿರುತ್ತಾರೆ. ಆದುದರಿಂದ ವಿದ್ಯುತ್ ಸಂಪರ್ಕ ನೀಡಲು ಬಾಕಿ ಇರುವ ಅರ್ಜಿಗಳ ಡೇಟಾಬೇಸ್‌ನ್ನು ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗಳಿಗೆ ಎ.ಪಿ.ಐ. ಮೂಲಕ ದಿನಾಂಕ: 14.05.2025 ರೊಳಗೆ ಒದಗಿಸಲು ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ ಇವರಿಗೆ ಸೂಚಿಸಲಾಯಿತು.

ನಿರಂತರವಾಗಿ ಇಂಧನ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ತಂತ್ರಾಂಶಗಳನ್ನು ಸಿ.ಆ.ಸು.ಇ. (ಇ-ಆಡಳಿತ) ಇವರು ULMS ಪೋರ್ಟಲ್‌ನಲ್ಲಿ ಸಂಯೋಜಿಸುವಂತೆ ಸೂಚಿಸಲಾಯಿತು. ಇಂಧನ ಇಲಾಖೆ ನೀಡಿರುವ ಮಾಹಿತಿಯಂತೆ ಉಳಿದ ಇಲಾಖೆಗಳು ಸಂಬಂಧಪಟ್ಟ ಅರ್ಜಿದಾರರಿಂದ ಆನ್‌ಲೈನ್ ಪೋರ್ಟಲ್ ಮೂಲಕ ಸೆಕ್ಷನ್ 240 ಮತ್ತು 248(ಎ) ಅಡಿಯಲ್ಲಿ ಕಟ್ಟಡ ನಕ್ಷೆಯೊಂದಿಗೆ ಅವರ ಅರ್ಜಿಯನ್ನು ಮುಂದಿನ 15 ದಿನಗಳಲ್ಲಿ ಸಂಗ್ರಹಿಸತಕ್ಕದ್ದು. ಅದೇ ರೀತಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸಂಬಂಧಿಸಿದಂತೆ ಅರ್ಜಿದಾರರ ಅರ್ಜಿಯನ್ನು ಪಡೆಯಲು ಸ್ವಯಂ ಪ್ರೇರಣೆಯಿಂದ ಸ್ಥಳೀಯ ಅಧಿಕಾರಿಗಳನ್ನು ನೇಮಿಸಿ ಕಾನೂನಿನಂತೆ ಅರ್ಜಿಗಳನ್ನು ಪಡೆಯುವುದು

ಪ್ರಸ್ತುತ ಕಟ್ಟಡ ನಕ್ಷೆಗೆ ಅನುಮೋದನೆಯನ್ನು ಪಡೆಯಲು ಸಲ್ಲಿಸಬೇಕಾದ ಅರ್ಜಿ ನಮೂನೆಯಲ್ಲಿ ಅರ್ಜಿದಾರರ ಹೆಸರು, ಸಂಪರ್ಕ ಸಂಖ್ಯೆ, ವಿಳಾಸ, ಕಟ್ಟಡ ವಿಸ್ತೀರ್ಣ, ಆರ್ಕಿಟೆಕ್ಟ್ನಿಂದ ಅಧಿಕೃತ ನಕ್ಷೆಯನ್ನು ಒದಗಿಸತಕ್ಕದ್ದು. ಜನ ಸಾಮಾನ್ಯರಿಗೆ ಪ್ರಸ್ತುತ ನಿಯಮ, ಅಧಿನಿಯಮಗಳ ಬಗ್ಗೆ ಸರಳವಾಗಿ ಮತ್ತು ವ್ಯಾಪಕವಾಗಿ ಅರಿವು ಮೂಡಿಸಲು ಸೂಚಿಸಲಾಯಿತು.

ಅತಿ ಸಣ್ಣ ಕಟ್ಟಡಗಳಿಗೆ (50ಚ.ಮೀ.) ಸದರಿ ನಿಯಮಗಳಿಂದ ಓಸಿ ಮತ್ತು ಸಿ.ಸಿ ಯಿಂದ ವಿನಾಯಿತಿ ನೀಡುವ ಬಗ್ಗೆ ಪ್ರಚಾರ ಮಾಡತಕ್ಕದ್ದು. ಬಿಬಿಎಂಪಿ ಕಾಯ್ದೆಯಂತೆ G+3 ಕಟ್ಟಡಗಳ ನಕ್ಷೆಯ ಅನುಮೋದನೆಯನ್ನು ವಲಯ ಆಯುಕ್ತರುಗಳು ಮತ್ತು ಹೆಚ್ಚಿನ ಮಹಡಿಯುಳ್ಳ ಕಟ್ಟಡಗಳನ್ನು ಅಪರ ನಿರ್ದೇಶಕರು, ನಗರ ಯೋಜನೆ ಇಲಾಖೆ ಇವರಿಗೆ ಜವಾಬ್ದಾರಿ ನೀಡಲಾಯಿತು.

50×80 ವಿಸ್ತೀರ್ಣಕ್ಕಿಂತ ಕಡಿಮೆ ಇರುವ ಅಧಿಕೃತ ನಿವೇಶನಗಳಿಗೆ ಬಿಬಿಎಂಪಿ ಯಿಂದ ತಯಾರಿಸಿದ ‘ನಂಬಿಕೆ ನಕ್ಷೆ’ಯನ್ನು ಸಾರ್ವಜನಿಕರು ಉಪಯೋಗಿಸಬಹುದಾಗಿದೆ. ‘ಎ’ ಖಾತಾ ಹೊಂದಿರುವ ಅರ್ಜಿದಾರರಿಗೆ ತಕ್ಷಣ ಓಸಿ/ಸಿಸಿ ಗಳನ್ನು ಒದಗಿಸುವುದು. ಖಾತಾ ಹೊಂದಿರುವ ಅರ್ಜಿದಾರರಿಗೆ ಪ್ರತ್ಯೇಕವಾಗಿ ಅರ್ಜಿಗಳ ಸಂಗ್ರಹಣೆಯನ್ನು ಮಾಡಿ ಕ್ರೋಢೀಕರಿಸಿ, ಸರ್ಕಾರದ ಆದೇಶವನ್ನು ಪಾಲಿಸುವುದು.

ಗ್ರೇಟರ್ ಬೆಂಗಳೂರು ಪಾಲಿಕೆಗಳು ಮೂರೋ ಅಥವಾ ಐದೋ? ವರ್ಷಾಂತ್ಯದೊಳಗೆ ಚುನಾವಣೆ!

Leave a Reply

Your email address will not be published. Required fields are marked *