BBMP
Loading ...

ಬೆಂಗಳೂರು: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಬೆಂಗಳೂರು ನಗರ ಜಿಲ್ಲಾ ಸಮಿತಿಯಿಂದ ಸಂಘದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅಣ್ಣಮ್ಮ ದೇವಿ ಪ್ರತಿಷ್ಠಾಪನೆ, ರಕ್ತದಾನ ಶಿಬಿರ, ಸನ್ಮಾನ ಕಾರ್ಯಕ್ರಮ ಹಾಗೂ ಕ್ರೀಡಾಕೂಟ ಸೇರಿದಂತೆ 3 ದಿನಗಳ ಕಾಲ ಐತಿಹಾಸಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.

ಬೆಂಗಳೂರು ನಗರ ಜಿಲ್ಲಾ ಸಮಿತಿ ಅಧ್ಯಕ್ಷರಾದ ಎಂ. ಗೋವಿಂದರಾಜು ರವರ ಅಧ್ಯಕ್ಷತೆಯಲ್ಲಿ ನಮ್ಮನೆಚ್ಚಿನ ಗೌರವ ರಾಜ್ಯಾಧ್ಯಕ್ಷರಾದ ಶ್ರೀ ರಮೇಶಣ್ಣರವರು ನೇತೃತ್ವದಲ್ಲಿ ಇತಿಹಾಸ ಪ್ರಸಿದ್ಧ ಬೆಂಗಳೂರು ನಗರ ನಾಡದೇವತೆ ಶ್ರೀ ಅಣ್ಣಮ್ಮ ತಾಯಿಯ ಪ್ರತಿಷ್ಟಾಪನೆ ಕಾರ್ಯಕ್ರಮ, ರಕ್ತದಾನ ಶಿಬಿರ ಹಾಗೂ ಹಿರಿಯ ಗುತ್ತಿಗೆದಾರ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ, ಯಶಸ್ವೀಯಾಗಿ ನೆರವೇರಿಸಿಕೊಟ್ಟರು.

ಈ ಒಂದು ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಧ್ಯಕ್ಷರಾದ ಶ್ರೀ ಶ್ಯಾಮಸುಂದರ್, ರಾಜ್ಯ ಹಿರಿಯ ಉಪಾಧ್ಯಕ್ಷರಾದ ಶ್ರೀ ಉಮೇಶ್ ಶೆಣೈ, ಶ್ರೀ ಉರ್ಬೇನ್ ಪಿಂಟೋ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ H. V. ಚಂದ್ರಬಾಬು, ರಾಜ್ಯ ಕೋಶಧ್ಯಕ್ಷರಾದ ಶ್ರೀ K. ಚಂದ್ರಬಾಬು, ಅನ್ವರ್ ಮಿಯ್ಯಾ ಹಾಗೂ ಶಿವಾನಂದ ಬಾಳಪ್ಪ ಅವರುಗಳ ಉಪಸ್ಥಿತಿಯಲ್ಲಿ, ವಿಶೇಷವಾಗಿ ನಮ್ಮಬೆಂಗಳೂರು ನಗರ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳ ಸಮ್ಮುಖದಲ್ಲಿ ಈ ಒಂದು ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಈ ಒಂದು ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಪದಾಧಿಕಾರಿಗಳು, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರುಗಳು, ವಿವಿಧ ಸಮಿತಿ ಛೇರ್ಮನ್​ಗಳು, ರಾಜ್ಯದ ವಿವಿಧ ಜಿಲ್ಲಾ ಸಮಿತಿ, ತಾಲೂಕು ಸಮಿತಿ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಬೆಂಗಳೂರು ನಗರ ಜಿಲ್ಲಾ ಸಮಿತಿಯ ಎಲ್ಲ ಪದಾಧಿಕಾರಿಗಳು, ಜಿಲ್ಲಾ ಸಮಿತಿ ಕಾರ್ಯಕಾರಿ ಸಮಿತಿಯಾ ಸದಸ್ಯರುಗಳಿಗೂ ಹಾಗೂ 3 ದಿನದ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಮ್ಮ ಸಂಘದ ಎಲ್ಲ ಗೌರವಾನ್ವಿತ ಸದಸ್ಯರುಗಳಿಗೂ, ಕೇಂದ್ರ ಸಮಿತಿ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. ವಿದ್ಯುತ್​ ಗುತ್ತಿಗೆದಾರ ಸಂಘದ ರಾಜ್ಯ ಪ್ರಚಾರ ಸಮಿತಿ ಛೇರ್ಮನ್ R. ಶಿವಕುಮಾರ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಕರಾಅಪವಿಗು ಸಂಘದ ಬೆಂಗಳೂರು ನಗರ ಜಿಲ್ಲಾ ಸಮಿತಿಯಿಂದ ಕ್ರಿಕೆಟ್​ ಪಂದ್ಯಾವಳಿ: N9 ಉಪ ಸಮಿತಿಗೆ ಮೊದಲ ಬಹುಮಾನ

Leave a Reply

Your email address will not be published. Required fields are marked *