ಬೆಂಗಳೂರು: ಸಿಂಡಿಕೇಟ್ ಬ್ಯಾಂಕ್ ಕಾಲೋನಿಯ ಶ್ರೀ ಶಿರಡಿ ಸಾಯಿ ರಿಲೀಜಿಯಸ್ ಟ್ರಸ್ಟ್ (ರಿ.) ವತಿಯಿಂದ 21ನೇ ವಾರ್ಷಿಕೋತ್ಸವ ಅದ್ಧೂರಿಯಾಗಿ ಜರುಗಿತು.
ಜೂನ್ 21ರ ಶನಿವಾರದಂದು ಪಲ್ಲಕ್ಕಿ ಉತ್ಸವ ನೆರವೇರಿತು. ಜೂನ್ 22ರ ಭಾನುವಾರದಂದು ಬೆಳಗ್ಗೆ 05.15 ಕ್ಕೆ ಕಾಕಡ ಆರತಿ, ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಪುಣ್ಯಾಹ, ನಾಂದಿ, ನವಗ್ರಹ ಶಾಂತಿ ಕ್ಷೇತ್ರಪಾಲಕ ಬಲಿ, ಕಲಶಸ್ಥಾಪನೆ & ಆವಾಹನಾ ಪೂಜಾ, ಗಣಹೋಮ, ಶ್ರೀ ಶಿರಡಿ ಸಾಯಿಹೋಮ ಪೂರ್ಣಾಹುತಿ, ಕಲಶೋದಕಾಭಿಷೇಕ ಹಾಗೂ ಪುಷ್ಪಾಭಿಷೇಕ ನಡೆಯಿತು.
ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶಿರಡಿ ಸಾಯಿ ಬಾಬನ ಕೃಪೆಗೆ ಪಾತ್ರರಾದರು. ಭಜನೆ, ಪ್ರಾರ್ಥನೆಗಳನ್ನು ಸಲ್ಲಿಸಿದರು. ಸಾಯಿಬಾಬನ ಮೂರ್ತಿಯನ್ನು ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು.
ಬೆಳಗ್ಗೆ 10 ಗಂಟೆಗೆ ಮಹಾಮಂಗಳಾರತಿ, ಮಧ್ಯಾಹ್ನ 12 ಗಂಟೆಗೆ ಮಧ್ಯಾಹ್ನದ ಮಹಾಮಂಗಳಾರತಿ ನಡೆಯಿತು. ಮಧ್ಯಾಹ್ನ 12.30ರಿಂದ 3 ಗಂಟೆಯವರೆಗೆ ಅನ್ನದಾನ, ಸಂಜೆ 3 ಗಂಟೆಯಿಂದ 5 ಗಂಟೆಯವರೆಗೆ ಸತ್ಸಂಗ, ಭಜನೆ ಹಾಗು ಸಾಯಿನಾಮಜಪ, ಸಂಜೆ 5.15 ರಿಂದ 6.05ರವರೆಗೆ ಧೂಪಾರತಿ, ಸಂಜೆ 6 ರಿಂದ 7.45ರವರೆಗೆ ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ ಹಾಗೂ ರಾತ್ರಿ 8 ಗಂಟೆಗೆ ಶೇಜಾರತಿ ನಡೆಯಲಿದೆ.
ಇನ್ನಿತರ ಕಾರ್ಯಕ್ರಮಗಳು
ಶ್ರೀ ಶಿರಡಿ ಸಾಯಿ ಚಾರಿಟೇಬಲ್ ಟ್ರಸ್ಟಿನ ಶ್ರೀ ಶಿರಡಿ ಸಾಯಿ ಸಾಂಸ್ಕೃತಿಕ ಕೇಂದ್ರದಿಂದ ಜೂನ್ 22ರಂದು ಈ ಕೆಳಗಿನ ಚಟುವಟಿಕೆಗಳು ನಡೆಯುತ್ತಿವೆ.
* ಉಚಿತ ವೈದ್ಯಕೀಯ ಸಮಾಲೋಚನೆ
* ನಿಯಮಿತ ಉಚಿತ ವೈದ್ಯಕೀಯ ಶಿಬಿರ
* ನಿಯಮಿತ ರಕ್ತದಾನ ಶಿಬಿರ
* ಸಾಯಿ ವಿದ್ಯಾ ನಿಧಿ – ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ
* ಉಚಿತ ಕಣ್ಣಿನ ತಪಾಸಣಾ ಶಿಬಿರ
* ಬಿಪಿಎಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
* ದೃಷ್ಟಿ ವಿಕಲಚೇತನರಿಗೆ ಬ್ರೈಲ್ ಪುಸ್ತಕಗಳು
* ಜ್ಞಾನಜ್ಯೋತಿ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್ ಸಹಾಯದಿಂದ ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ ಪೋಷಕತ್ವ
* ಉಚಿತ ಪತಂಜಲಿ ಯೋಗ ತರಗತಿಗಳು
ಬೆಂಗಳೂರು ಸುತ್ತೋಣ ಬನ್ನಿ: 6 ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸದ ಪ್ಯಾಕೇಜ್ ಘೋಷಿಸಿದ ಬಿಎಂಟಿಸಿ
ಬೆಂಗಳೂರಿನ 75 ಜಂಕ್ಷನ್‌ಗಳಿಗೆ 100 ಕೋಟಿ ರೂ ವೆಚ್ಚದಲ್ಲಿ ಹೊಸ ರೂಪ: ಯಾವ್ಯಾವ ಜಂಕ್ಷನ್ ಇಲ್ಲಿದೆ ಸಂಪೂರ್ಣ ಮಾಹಿತಿ


