BBMP
Loading ...

Okkaliga (2)

Greater Bengaluru News9: ಕರ್ನಾಟಕ ಹಿಂದುಳಿದ ವರ್ಗದ ಜಾತಿ ಜನಗಣತಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮುಂದೂಡುವಂತೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಿಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಆಗ್ರಹಿಸಿದೆ.

ಕರ್ನಾಟಕ ರಾಜ್ಯದಲ್ಲಿ ಕಾಂತರಾಜ್ ಆಯೋಗದ ವರದಿಯನ್ನು ಹಿಂದಕ್ಕೆ ಪಡೆದಿರುವುದಕ್ಕೆ, ಲೋಕಸಭೆಯ ವಿರೋಧಪಕ್ಷದ ನಾಯಕರದ ಮಾನ್ಯ ಶ್ರೀ ರಾಹುಲ್ ಗಾಂಧಿಯವರ ಆದೇಶದ ಪ್ರಕಾರ ಮರು ಜನಗಣತಿ ಸಮೀಕ್ಷೆಯನ್ನು ಮಾಡಲು ತೀರ್ಮಾನಿಸಿರೋದಕ್ಕೆ ತಮಗೆಲ್ಲರಿಗೂ ಅಭಿನಂದನೆಗಳು. ಜಾತಿಗಣತಿಯ ಸಮೀಕ್ಷೆಯನ್ನು ಮಾಡಲು ಕಾಲಾವಕಾಶ ಬೇಕಾಗಿರುತ್ತದೆ. ಆದ್ದರಿಂದ ಈ ಕೆಳಕಂಡ ನ್ಯೂನತೆಗಳನ್ನು ಸರಿಪಡಿಸಿಕೊಂಡು ಸಮೀಕ್ಷೆ ಮಾಡುವುದರಿಂದ ಸರ್ಕಾರಕ್ಕೆ ಮತ್ತು ಪಕ್ಷಕ್ಕೂ ಕೂಡ ಒಳ್ಳೆಯ ಹೆಸರನ್ನು ತಂದು ಕೊಟ್ಟಂತಾಗುತ್ತದೆ ಎಂದು ಒಕ್ಕಲಿಗರ ಸಮಿತಿ ಸಲಹೆ ನೀಡಿದೆ.

ಈ ಕೆಳಕಂಡ ನ್ಯೂನತೆಗಳು ಸರಿಪಡಿಸಬೇಕಾಗುತ್ತದೆ.

  1. ಎಲ್ಲಾ ಜಾತಿಗಳ ಜೊತೆಗೆ ಉಪ ಪಂಗಡಗಳನ್ನು ಕೂಡ 1561 ಸೇರಿಸಲಾಗಿದೆ. ಆದರೆ ಪ್ರಮುಖ ಜಾತಿಯನ್ನು ನಮೂದಿಸಿ ಉಪಪಂಗಡಗಳನ್ನು ಆಯಾ ಜಾತಿಯ ಕೆಳಭಾಗದಲ್ಲಿ ನಮೂದಿಸುವುದರಿಂದ ಯಾವುದೇ ತೊಂದರೆಗಳು ಆಗುವುದಿಲ್ಲ.

ಉದಾಹರಣೆ ೩. ಲಿಂಗಾಯತ: ಸುಮಾರು 150ಕ್ಕೂ ಹೆಚ್ಚು ಉಪ ಪಂಗಡಗಳನ್ನು ನಮೂದಿಸಲಾಗಿದೆ.

b. ಒಕ್ಕಲಿಗ:- ಸುಮಾರು 110 ಉಪಪಂಗಡಗಳನ್ನು ನಮೂದಿಸಲಾಗಿದೆ.

c. ಮುಸಲ್ಮಾನರ:- ಸುಮಾರು 50ಕ್ಕೂ ಹೆಚ್ಚು ಉಪಪಂಗಡಗಳನ್ನು ನಮೂದಿಸಲಾಗಿದೆ.

d. ಕುರುಬರ:- ಸುಮಾರು 5 ರಿಂದ 10 ಉಪಪಂಗಡಗಳು ನಮೂದಿಸಲಾಗಿದೆ

e. ಯಾದವರ:- ಸುಮಾರು 10ಕ್ಕೂ ಹೆಚ್ಚು ಉಪಪುಂಗಡಗಳನ್ನು ನಮೂದಿಸಲಾಗಿದೆ.

f. ಕುಂಬಾರ : ಸುಮಾರು 15ಕ್ಕೂ ಹೆಚ್ಚು ಉಪಪುಂಗಡಗಳನ್ನು ನಮೂದಿಸಲಾಗಿದೆ.

ಇದೇ ರೀತಿ ಪ್ರಮುಖ ಮತ್ತು ಸಣ್ಣ ಸಮಾಜದಲ್ಲೂ ಕೂಡ ಉಪಕಂಪಂಗಡಗಳನ್ನು ಜಾತಿ ಎಂದು ಗುರುತಿಸಿ ಕೋಡ್ ಅನ್ನು ನೀಡಲಾಗಿದೆ.

  1. ಕರ್ನಾಟಕ ರಾಜ್ಯ ಸರ್ಕಾರದ Gazeete ನಲ್ಲಿ ನಮೂದಾನೆ ಆಗಿರುವ ಜಾತಿಗಳು 886 ಆದರೆ ಸಮೀಕ್ಷೆಯಲ್ಲಿ 1561 ಎಂದು ಗುರುತಿಸಲಾಗಿದೆ. ಮುಂದೆ ಯಾರಾದರೂ ಇದರ ಬಗ್ಗೆ ಪ್ರಶ್ನೆ ಮಾಡಿದರೆ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುತ್ತದೆ.
  2. ಜೈನ ಸಮುದಾಯದಲ್ಲಿ ಪ್ರಮುಖ ಜಾತಿಗಳನ್ನು ಹೆಸರನ್ನು ನಮೂದಿಸಿ. ಜೈನ ಉಪಪಂಗಡಗಳನ್ನಾಗಿ ನಮೂದಿಸಿದ್ದಾರೆ. ಆದರೆ ಜೈನ ಸಮುದಾಯದಲ್ಲಿ ಕೇವಲ ಎರಡು ಅಥವಾ ಮೂರು ಪಂಗಡಗಳು ಮಾತ್ರ ಇರುತ್ತವೆ.
  3. ಸರ್ಕಾರ ಈಗಾಗಲೇ ಮನೆ ನಂಬರನ್ನು ಜಿಪಿಅರ್ಎಸ್ ಮೂಲಕ ಮಾತ್ರ ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಅವರು ಗುರುತಿಸಿರುವ ಪ್ರದೇಶಗಳಲ್ಲಿ ಕೇವಲ 60 ರಿಂದ 70 ಪರ್ಸೆಂಟ್ ಮಾತ್ರ ಮನೆ ನಂಬರಿಗೆ ಎಲೆಕ್ಟ್ರಾನಿಕ್ ಮೀಟರ್ ಗಳ ಮೇಲೆ ಅಂಟಿಸಲಾಗಿದೆ. ಆದರೆ ಸಂಪೂರ್ಣವಾದ ಮನೆ ನಂಬರನ್ನು ಗುರುತಿಸಲಾಗಿಲ್ಲ.
  4. ಹಿಂದುಳಿದ ವರ್ಗದ ಅಯೋಗದ ಸಮೀಕ್ಷೆ ಪಡೆಯುವ ಪ್ರತಿನಿಧಿಗಳಿಗೆ ಮೊಬೈಲ್ ಆಪ್ ಅನ್ನು ಗಣತಿದಾರರಿಗೆ Install ಮಾಡಿರುವುದಿಲ್ಲ ಮತ್ತು ತರಬೇತಿಯನ್ನು ನೀಡಿರುವುದಿಲ್ಲ. ಕೈಪಿಡಿಗಳನ್ನು ಕೂಡ ಎರಡು ದಿನದ ಹಿಂದೆ ಜಿಲ್ಲಾ ಕಛೇರಿ ಗಳಿಗೆ ಮಾತ್ರ ತಲುಪಿಸಲಾಗಿದೆ. ಕೈಪಿಡಿಗಳು ಗ್ರಾಮ ಮಟ್ಟದಲ್ಲಿ ತಲುಪಲು ಇನ್ನೂ ಕೆಲವು ದಿನಗಳು ಬೇಕಾಗುತ್ತದೆ. ಗಣತಿ ಪಡೆಯುವ ಪ್ರತಿನಿಧಿಗಳು ಒಂದು ವಾರಗಳ ಕಾಲ ತರಬೇತಿ ಪಡೆದರೆ ಮಾತ್ರ 60 ಪ್ರಶ್ನೆಗಳಿಗೆ ದತ್ತಾಂಶವನ್ನು ದಾಖಲಿಸಲು ಸಾಧ್ಯವಾಗುತ್ತದೆ.
  5. ತೆಲಂಗಾಣ ಸರ್ಕಾರದಲ್ಲಿ ನಡೆದ ಜಾತಿಗಣತಿಯ ಸಮೀಕ್ಷೆಯಲ್ಲಿ ಸುಮಾರು 45 ದಿನಗಳ ಕಾಲ ಕಾಲಾವಕಾಶವನ್ನು ನೀಡಿತ್ತು. ಆದರೆ ನಮ್ಮ ರಾಜ್ಯದಲ್ಲಿ ಕೇವಲ 15 ದಿನ ಕಾಲಾವಕಾಶವನ್ನು ನೀಡುತ್ತದೆ.

ನಮ್ಮ ರಾಜ್ಯದಲ್ಲಿ ದಸರಾ ಪ್ರಾರಂಭವಾಗಿರುವುದರಿಂದ ದಸರಾ ಹಬ್ಬಕ್ಕೆ ಸುಮಾರು ಎಂಟು ದಿನಗಳ ಕಾಲ ಜನರು ಪೂಜೆಯನ್ನು ಸಲ್ಲಿಸುವುದರಿಂದ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ.

ಈ ಎಲ್ಲಾ ಕಾರಣಗಳಿಂದ ಸುಮಾರು ಮೂರು ತಿಂಗಳ ಕಾಲ ಸಮೀಕ್ಷೆಯನ್ನು ಮುಂದುಡಿ, ಮಾಹಿತಿದಾರರಿಗೆ ಉತ್ತಮ ತರಬೇತಿಯನ್ನು ನೀಡಿ ಜಾತಿ ಜನಗಣತಿಯ ಮಾಹಿತಿಯನ್ನು ಪಡೆಯುವುದರಿಂದ ಸರ್ಕಾರಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಹೆಸರನ್ನು ಪಡೆಯುವುದು ಎಂದು ಈ ಮೂಲಕ ತಮ್ಮಲ್ಲಿ ಕಳಕಳಿಯಿಂದ ಮನವಿ ಮಾಡುತ್ತೇವೆ.

Leave a Reply

Your email address will not be published. Required fields are marked *