Greater Bengaluru News9 : ರಾಜ್ಯ ಸರ್ಕಾರದಿಂದ ಮುಂಬರುವ ಹಬ್ಬ, ಜಯಂತಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜೊತೆ ಜೊತೆಗೆ ಈ ಹಬ್ಬಗಳ ಸಂದರ್ಭದಲ್ಲಿ ಅನುಸರಿಸಬೇಕಾದಂತ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ ಮಾಡಲಾಗಿದೆ.

ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2026ನೇ ಸಾಲಿನ ಜಯಂತಿಗಳನ್ನು ಆಚರಣೆ ಮಾಡುವ ಕುರಿತಂತೆ ಪಟ್ಟಿ, ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.
ಜಯಂತಿಗಳ ಆಚರಣೆ ಮಾರ್ಗ ಸೂಚಿಗಳು
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜಯಂತಿಗಳನ್ನು ಅರ್ಥ ಪೂರ್ಣವಾಗಿ ಆಚರಿಸುವುದು.
- ಜಿಲ್ಲಾಧಿಕಾರಿಗಳು ಅಥವಾ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯಾ ಜಯಂತಿಗೆ ಸಂಬಂಧಿಸಿದಂತೆ ಎಲ್ಲಾ ಸಮಾಜಗಳ ಮುಖಂಡರು ಮತ್ತು ಸಂಘ ಸಂಸ್ಥೆಯ ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸಿ ಪೂರ್ವ ಸಿದ್ಧತ ಮಾಡಿಕೊಳ್ಳವುದು.
- ಆಹ್ವಾನ ಪತ್ರಿಕ, ಕರಪತ್ರ, ಬ್ಯಾನರ್, ವೇದಿಕೆ ವಿನ್ಯಾಸ, ಭಾವಚಿತ್ರದ ವ್ಯವಸ್ಥೆ, ಹೂವಿನ ಹಾರ, ಪೂಜಾ ವ್ಯವಸ್ಥೆ, ಫೋಟೋ, ವೇದಿಕೆಗೆ ಸಂಬಂಧಿಸಿದ ಇತರ ವ್ಯವಸ್ಥೆಯನ್ನು ಜಯಂತಿಯ ಅನುದಾನದಿಂದ ಭರಿಸುವುದು. ಸ್ವಯಂ ಪ್ರೇರಿತರಾಗಿ ಪ್ರಾಯೋಜಕರು ಮುಂದೆ ಬಂದಲ್ಲಿ ಸದರಿಯವರ ಸೇವೆಯನ್ನು ಪಡೆಯಬಹುದಾಗಿದೆ.
- ವೇದಿಕ ಕಾರ್ಯಕ್ರಮದಲ್ಲಿ ಆಯಾ ಜಯಂತಿಯ ಮಹನೀಯರ ಜೀವನ ಸಾಧನೆ ಕುರಿತು ವಿಶೇಷ ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮ ಏರ್ಪಡಿಸುವುದು.
- ವೇದಿಕೆಯ ಗಣ್ಯರಿಗೆ ಹೂಗುಚ್ಛದ ಬದಲಿಗೆ ಅಯಾ ಜಯಂತಿ ಮಹನೀಯರ ಕುರಿತ ಪುಸ್ತಕಗಳನ್ನು ನೀಡುವುದು ಸೂಕ್ತವಾಗಿರುತ್ತದೆ.
- ಆಯಾ ಜಯಂತಿಯ ಆಹ್ವಾನ ಪತ್ರಿಕೆಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಜಯಂತಿ/ಉತ್ಸವ ಸಮಿತಿ ಅವರ ಸೂಚನೆ ಅನ್ವಯ ಶಿಷ್ಠಾಚಾರಕ್ಕೆ ಅನುಗುಣವಾಗಿ ಅತ್ತಿಥಿ ಗಣ್ಯರನ್ನು ಆಹ್ವಾನಿಸುವುದು.
- ಜಯಂತಿಯ ಆಚರಣೆಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳಿಂದ (ಮಹಾನಗರಪಾಲಿಕೆಗಳು, ನಗರಸಭೆ, ಪಟ್ಟಣ, ಪಂಚಾಯತಿಗಳಲ್ಲಿ) ಎಲ್ಲಾ ಸಮಾಜಗಳ ಮುಖಂಡರು ಮತ್ತು ಸಂಘ ಸಂಸ್ಥೆಯ ಸಹಕಾರ ಪಡೆಯುವುದು.
- ಪೂರ್ವಭಾವಿ ಸಭೆಗಳಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯಕ್ರಮವನ್ನು ರೂಪಿಸುವುದು. 9. ಪೂರ್ವಭಾವಿ ಸಭೆಗಳಲ್ಲಿ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾಗುವ ನಿರ್ಣಯದಂತ ಜಯಂತಿಯನ್ನು ಮಹನೀಯರ ಸಂದೇಶವನ್ನು ಸಮಾಜಕ್ಕೆ ತಲುಪಿಸುವಂತ ಆಚರಿಸುವುದು.
- ಜಯಂತಿಗಳನ್ನು ಜಿಲ್ಲಾ ಮತ್ತು ತಾಲೂಕು ಹಂತಗಳಲ್ಲಿ ಅರ್ಥಪೂರ್ಣವಾಗಿ ಆಚರಿಸುವುದು ಜಿಲ್ಲಾಡಳಿತದ ಪೂರ್ಣ ಜವಾಬ್ದಾರಿಯಾಗಿರುತ್ತದೆ.
- ಜಿಲ್ಲಾ ಮಟ್ಟದಲ್ಲಿ ಜಯಂತಿ ಆಚರಣೆ ಸಂದರ್ಭದಲ್ಲಿ ಸಾರ್ವತ್ರಿಕವಾಗಿ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಪ್ರಚುರ
ಪಡಿಸಬೇಕು. - ಪ್ರತಿ ಜಯಂತಿಯ ಸಂದರ್ಭದಲ್ಲಿ ವಿಶೇಷವಾಗಿ ಆ ಮಹಾಪುರುಷರ ವಿಶೇಷತೆಗಳನ್ನು ತಿಳಿಪಡಿಸುವಂತೆ ಅನುರೂಪವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು.
- ಪ್ರತಿ ಆಚರಣೆ ಮುಗಿದ ಒಂದು ತಿಂಗಳ ಒಳಗಾಗಿ ಕಾರ್ಯಕ್ರಮದ ವರದಿ ಮತ್ತು ದಾಖಲೆಗಳನ್ನು ಕೇಂದ್ರ ಕಚೇರಿಗೆ ಸಲ್ಲಿಸಬೇಕು.
- ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರನ್ನು ಅಹ್ವಾನಿಸುವ ಸಂದರ್ಭದಲ್ಲಿ ಎಲ್ಲಾ ಕಲಾವಿದರಿಗೂ ಅವಕಾಶ ದೊರೆಯುವಂತ ಆವರ್ತನ ಪದ್ಧತಿಯಲ್ಲಿ ಕಲಾ ತಂಡಗಳನ್ನು ಗುರುತಿಸಿ ಅವಕಾಶ ನೀಡುವುದು.
- ಕಾರ್ಯಕ್ರಮದ ಆಹ್ವಾನ ಪತ್ರಿಕೆ, ವೇದಿಕೆ ಮತ್ತು ಇತರ ಪ್ರಚಾರ ಸಾಮಾಗ್ರಿಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರನ್ನು ಕಡ್ಡಾಯವಾಗಿ ಪ್ರಕಟಿಸಲು ಕ್ರಮ ಕೈಗೊಳ್ಳುವುದು.
- ಜಯಂತಿಗಳಿಗೆ ಮಂಜೂರಾಗಿ ಬಿಡುಗಡೆಯಾದ ಹಣವನ್ನು ಅದೇ ಉದ್ದೇಶಕ್ಕಾಗಿಯೇ ಬಳಸತಕ್ಕದ್ದು. ಹಾಗೆ ಆಯಾ ಆರ್ಥಿಕ ವರ್ಷದಲ್ಲಿ ಬಳಸದೆ ಉಳಿದ ಹಣವನ್ನು ಸರ್ಕಾರಕ್ಕೆ ಅಧ್ಯರ್ಪಣೆ ಮಾಡಿ ಸಹಾಯಕ ನಿರ್ದೇಶಕರು ಕೇಂದ್ರ ಕಚೇರಿಗೆ ವರದಿ ಸಲ್ಲಿಸುವುದು.


