BBMP
Loading ...

State budget

ಬೆಂಗಳೂರು: ಇಂದು (ಮಾ.07) ಬಹುನಿರೀಕ್ಷಿತ ರಾಜ್ಯ ಬಜೆಟ್​ (2025-26) ಆಯವ್ಯಯವನ್ನು ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜಕೀಯ ಇತಿಹಾಸದಲ್ಲಿ 16ನೇ ಬಾರಿ ಬಜೆಟ್ ಮಂಡಿಸುವ ಮೂಲಕ ದಾಖಲೆಯನ್ನು ಬರೆದಿದ್ದಾರೆ. 4.08 ಲಕ್ಷ ಕೋಟಿ ರೂ. ಬಜೆಟ್​ ಗಾತ್ರದಲ್ಲಿ ಬಜೆಟ್​ ಮಂಡಿಸಿದ ಸಿಎಂ, ರಾಜ್ಯದ ಹಲವು ಜಿಲ್ಲೆಗಳು, ವಿಭಾಗಗಳಿಗೆ ವಿಶೇಷ ಅನುದಾನ, ಬಂಪರ್​ ಕೊಡುಗೆ ಹಾಗೂ ಪ್ರಮುಖ ಯೋಜನೆಗಳನ್ನು ಘೋಷಿಸಿದ್ದಾರೆ.

ರಾಜ್ಯದ ಸರ್ಕಾರಿ ಹಾಗೂ ಫ್ರೌಡ ಶಾಲೆಗಳ ಅತಿಥಿ ಶಿಕ್ಷಕರಿಗೆ ಮಾಸಿಕ 2000 ರೂ. ಗೌರವ ಧನವನ್ನು ನೀಡಿದರೆ, ಬಿಸಿಯೂಟ ಕಾರ್ಯಕರ್ತೆಯರಿಗೆ ಮಾಸಿಕ 1000 ರೂ. ಘೋಷಿಸುವ ಮೂಲಕ ಬಜೆಟ್​ ಪ್ರಾರಂಭಿಸಿದರು. ಮೀನುಗಾರಿಕೆ, ಚಿತ್ರೋದ್ಯಮ, ಶಿಕ್ಷಣ ಇಲಾಖೆ, ಸಣ್ಣ ಕೈಗಾರಿಕೆ, ಇಂಧನ ಇಲಾಖೆ, ರೈತರು, ನೀರಾವರಿ ಇಲಾಖೆ, ಸಾರಿಗೆ ಇಲಾಖೆ, ಬೆಂಗಳೂರು ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಗುತ್ತಿಗೆ ಕಾಮಗಾರಿ ಸೇರಿದಂತೆ ಇಲಾಖಾವಾರು ಅನುದಾನ ಹಂಚಿಕೆ ಮಾಡಲಾಯಿತು.

ರಾಜ್ಯ ಬಜೆಟ್​ನ ಪ್ರಮುಖ ಘೋಷಣೆಗಳಿವು
* ರಾಜ್ಯ ನಾಗರಿಕ ಸೇವೆಗಳಲ್ಲಿ 13 ಬುಡಕಟ್ಟು ಸಮುದಾಯಗಳಿಗೆ ನೇರ ಉದ್ಯೋಗಾವಕಾಶ
* ಬಾದಾಮಿ ಮತ್ತು ಚಿತ್ರದುರ್ಗದಲ್ಲಿ ಹೊಸ ಟ್ರಾಮಾ ಕೇರ್ ಕೇಂದ್ರ ಸ್ಥಾಪನೆ
* ಮಂಡ್ಯದಲ್ಲಿ ಹೊಸ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ
* ಈ ವರ್ಷದ ಒಟ್ಟು ಸಾಲ 1.16 ಲಕ್ಷ ಕೋಟಿ ರೂ.
* ತುಮಕೂರಿನಲ್ಲಿ ಜಪಾನೀಸ್ ಕೈಗಾರಿಕಾ ಉದ್ಯಾನವನ ಅಭಿವೃದ್ಧಿ
* ಸಾವಯವ ಮತ್ತು ರಾಗಿ ಕೃಷಿಗೆ 20 ಕೋಟಿ ರೂ. ಬೆಂಬಲ
* ನೇಕಾರರಿಗೆ 100 ಕೋಟಿ ರೂ. ನೆರವು
* 20 ಎಚ್‌ಪಿ (10 ಎಚ್‌ಪಿಯಿಂದ ಹೆಚ್ಚಳ) ವರೆಗೆ ಸೆಟಪ್ ಹೊಂದಿರುವ ಪವರ್‌ಲೂಮ್ ನೇಕಾರರು ಈಗ ಸಬ್ಸಿಡಿ ಮತ್ತು ಬೆಂಬಲಕ್ಕೆ ಅರ್ಹ ಉದ್ಯಮಶೀಲತಾ ಯೋಜನೆಯಡಿಯಲ್ಲಿ SC ಯುವಕರಿಗೆ ಫಾಸ್ಟ್ ಫುಡ್ ಟ್ರಕ್‌ಗಳ ಸಹಾಯ
* ಕಾರ್ಕಳ, ರಾಣೆಬೆನ್ನೂರು, ರಾಯಚೂರು, ಕಡೂರು ಮತ್ತು ಚಿಕ್ಕಮಗಳೂರಿನಲ್ಲಿ ಹೊಸ ಜವಳಿ ಉದ್ಯಾನವನಗಳ ಸ್ಥಾಪನೆ
* 120 ಕೋಟಿ ರೂ.ಗಳ ಯೋಜನೆಯಡಿ 47,859 ಬುಡಕಟ್ಟು ಕುಟುಂಬಗಳಿಗೆ ಪೌಷ್ಟಿಕ ಆಹಾರ ಕಿಟ್‌ಗಳ ಪೂರೈಕೆ
* ಅಜೀಂ ಪ್ರೇಮ್‌ಜೀ ಫೌಂಡೇಷನ್ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ, ಬಾಳೆಹಣ್ಣು ವಿತರಣೆ. ಇದಕ್ಕಾಗಿ 1,500 ಕೋಟಿ ರೂ. ಮೀಸಲು
* 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅನ್ನ ಸುವಿಧಾ ಯೋಜನೆ
* ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಡಲಕೊರೆತ ತಪ್ಪಿಸಲು 200 ಕೋಟಿ ಅನುದಾನ
* ಎತ್ತಿನಹೊಳೆ ಯೋಜನೆಗೆ 553 ಕೋಟಿ ರೂ. ಅನುದಾನ ಮೀಸಲು
* ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ 94,000 ಕೋಟಿ ಮೀಸಲು

ಬೆಂಗಳೂರಲ್ಲಿ ಮತ್ತೊಂದು ಸೂಸೈಡ್ : ಪೋಲೀಸರ ಕಿರುಕುಳಕ್ಕೆ ಬೇಸತ್ತು ಕಾಮಾಕ್ಷಿಪಾಳ್ಯದ ವ್ಯಕ್ತಿ ನೇಣಿಗೆ ಶರಣು

Leave a Reply

Your email address will not be published. Required fields are marked *