BBMP
Loading ...

s-29-2025-03-8fdc7e70f116109173fb619524207037

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 2024ನೇ ಸಾಲಿನ “ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ” ಲಭಿಸಿದೆ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಸಗೊಂಡಿದ್ದಾರೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ಕಾರ್ಯದಕ್ಷತೆಗಾಗಿ ಕೇಂದ್ರ ಸರ್ಕಾರದ 2024ನೇ ಸಾಲಿನ “ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ”ಗೆ ರಾಜ್ಯ ಭಾಜನವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ಕರ್ನಾಟಕವು ಪಾರದರ್ಶಕ, ಜನಸ್ನೇಹಿ ಆಡಳಿತಕ್ಕೆ ಇಡೀ ದೇಶಕ್ಕೆ ಮಾದರಿ ರಾಜ್ಯ, ಈ ಪ್ರಶಸ್ತಿಯು ಜನಪರ ಕಾರ್ಯದ ನಮ್ಮ ಉತ್ಸಾಹವನ್ನು ನೂರ್ಮಡಿಗೊಳಿಸಿದೆ ಎಂದು ಟ್ವಿಟ್ ಮಾಡಿದ್ದಾರೆ.

ಏನಿದು ಇ-ಆಡಳಿತ ಪ್ರಶಸ್ತಿ?
ಇ-ಆಡಳಿತ ಉಪಕ್ರಮಗಳ ಅನುಷ್ಠಾನದಲ್ಲಿನ ಶ್ರೇಷ್ಠತೆಯನ್ನು ಗುರುತಿಸಲು ಮತ್ತು ಉತ್ತೇಜಿಸಲು, ಭಾರತ ಸರ್ಕಾರದ ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (DAR&PG) ಪ್ರತಿ ವರ್ಷ ಇ-ಆಡಳಿತದ ರಾಷ್ಟ್ರೀಯ ಸಮ್ಮೇಳನದಲ್ಲಿ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡುತ್ತದೆ.

ಪ್ರಶಸ್ತಿಯ ಉದ್ದೇಶ:-

* ಇ-ಆಡಳಿತ ಕ್ಷೇತ್ರದಲ್ಲಿನ ಸಾಧನೆಗಳನ್ನು ಗುರುತಿಸಿ

* ಸುಸ್ಥಿರ ಇ-ಆಡಳಿತ ಉಪಕ್ರಮಗಳನ್ನು ವಿನ್ಯಾಸಗೊಳಿಸುವ ಮತ್ತು ಅನುಷ್ಠಾನಗೊಳಿಸುವ ಪರಿಣಾಮಕಾರಿ ವಿಧಾನಗಳ ಕುರಿತು ಜ್ಞಾನವನ್ನು ಪ್ರಸಾರ ಮಾಡುವುದು.

* ಯಶಸ್ವಿ ಇ-ಆಡಳಿತ ಪರಿಹಾರಗಳಲ್ಲಿ ಹೆಚ್ಚುತ್ತಿರುವ ನಾವೀನ್ಯತೆಗಳನ್ನು ಪ್ರೋತ್ಸಾಹಿಸಿ.

* ಸಮಸ್ಯೆಗಳನ್ನು ಪರಿಹರಿಸುವುದು, ಅಪಾಯಗಳನ್ನು ತಗ್ಗಿಸುವುದು, ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಯಶಸ್ಸಿಗೆ ಯೋಜಿಸುವಲ್ಲಿ ಅನುಭವಗಳನ್ನು ಉತ್ತೇಜಿಸಿ ಮತ್ತು ವಿನಿಮಯ ಮಾಡಿಕೊಳ್ಳಿ.

ಕರ್ನಾಟಕ ಸರ್ಕಾರವು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು (ಐಸಿಟಿ) ಸದ್ಬಳಕೆ ಮಾಡಿಕೊಂಡು ಉತ್ತಮ ಆಡಳಿತ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಅನುಕರಣೀಯ ಮಾದರಿಯಾಗಿದ್ದು, ರಾಷ್ಟ್ರದಲ್ಲಿ ವಿದ್ಯುನ್ಮಾನ-ಆಡಳಿತದ (ಇ-ಆಡಳಿತ) ಉಪಕ್ರಮಿಕೆಗಳನ್ನು ಅನುಷ್ಟಾನಗೊಳಿಸುವಲ್ಲಿ ಸಕ್ರಿಯವಾಗಿದೆ.

ರಾಜ್ಯದ ಇ-ಆಡಳಿತ ನೀತಿ ಮತ್ತು ತಂತ್ರಗಾರಿಕೆಗಳ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸಲು ಇ-ಆಡಳಿತ ಕೇಂದ್ರವನ್ನು ಸಂಘ-ಸಂಸ್ಥೆಗಳ ನೋಂದಾವಣೆ ಅಧಿನಿಯಮದ ಅಡಿಯಲ್ಲಿ 2003 ರಲ್ಲಿ ಒಂದು ನೋಡಲ್ ಸಂಸ್ಥೆಯಾಗಿ ಸೃಷ್ಟಿಸಲಾಗಿ ಇದು ರಾಜ್ಯದಲ್ ಇ-ಆಡಳಿತ ಮೂಲಸೌಕರ್ಯಗಳ ಮತ್ತು ಮೂಲಭೂತ ಆಡಳಿತ ಸುಧಾರಣೆ ಆಧಾರಿತ ಅನ್ವಯಿಕಗಳನ್ನು ನಿರ್ವಹಿಸುವ ಪಾಲಕ ಸಂಸ್ಥೆಯಾಗಿದೆ. ವಸ್ತುತಃ ಈ ಸಂಸ್ಥೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ– (ಆಡಳಿತ ಸುಧಾರಣೆ – ಇ-ಆಡಳಿತ)) (ಡಿಪಿಎಆರ್- ಆಸು -ಇಆ) ಯ ಅಡಿಯಲ್ಲಿ ಸ್ಥಾಪಿತವಾಗಿದ್ದು, ಅದು ರಾಜ್ಯದ ಮುಖ್ಯಮಂತ್ರಿಗಳಿಗೇ ನೇರವಾಗಿ ಹೊಣೆಯಾಗಿರುವುದು ವಿಶೇಷವಾಗಿದೆ.

Leave a Reply

Your email address will not be published. Required fields are marked *