BBMP
Loading ...

BNG Poice

Greater Bengaluru News9 : ಎಂತೆಂಥ ಕಳ್ಳರಿದ್ದಾರೆ ನೋಡಿ, ಸಿಐಡಿ ಪೊಲೀಸ್ ಜೀಪ್‌ನಲ್ಲಿ ಬಂದು, ಪೊಲೀಸ್​ ಐಡಿ ಕಾರ್ಡ್ ತೋರಿಸಿ 20 ಲಕ್ಷ ದರೋಡೆ ಮಾಡಿರೋ ಘಟನೆ ಬೆಂಗಳೂರಿನ ಮಡಿವಾಳದ ಖಾಸಗಿ ಹೋಟೆಲ್ ಬಳಿ ನಡೆದಿದೆ. ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಈ ಇಡೀ ದರೋಡೆಯ ಮಾಸ್ಟರ್ ಮೈಂಡ್ ಎನ್ನಲಾಗ್ತಿದೆ. ಪೊಲೀಸರೇ ಬಿಟ್ಟು ದರೋಡೆ ಮಾಡಿಸಿದ್ರಾ? ಬೆಂಗಳೂರು ಕಮಿಷನರ್ ಹೇಳಿದ್ದೇನೆ.

ಪೊಲೀಸ್ ಐಡಿ ಕಾರ್ಡ್ ತೋರಿಸಿ ಕೇರಳ ಮೂಲದ ಯುವಕರಿಂದ 20 ಲಕ್ಷ ರಾಬರಿ ಮಾಡಿರೋ ಘಟನೆ ಮಡಿವಾಳದ ಖಾಸಗಿ ಹೋಟೆಲ್ ಬಳಿ ನಡೆದಿದೆ. ಮನಿ ಟ್ರೇಡಿಂಗ್ ಮಾಡಲಿಕ್ಕೆ ಹಣ ತಂದಿದ್ದೀರಾ ಅಂತ ಖಾಸಗಿ ವ್ಯಕ್ತಿಗಳಿಂದ ಧಮ್ಕಿ ಹಾಕಿದ್ದು, ನಾವು ಪೊಲೀಸರು ಅಂತ ಪೊಲೀಸ್ ಐಡಿ ಕಾರ್ಡ್ ತೋರಿಸಿ ಹಣ ರಾಬರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರೆಂದು ಹಣ ಕೊಟ್ಟಿದ್ದ‌ ಕೇರಳ ಮೂಲದ ಯುವಕರು ನಂತರ ಮಡಿವಾಳ ಠಾಣೆಗೆ ದೂರು ನೀಡಿದ್ದಾರೆ. ಸಿಐಡಿಗೆ ಸೇರಿದ್ದ ಅಸಲಿ ಪೊಲೀಸ್ ಜೀಪ್​​ನಲ್ಲಿ ಬಂದ ಖಾಸಗಿ ವ್ಯಕ್ತಿಗಳು ಹಣ ಕಿತ್ತುಕೊಂಡಿದ್ದಾರೆ. ಈ ಹಣ ಕೊಟ್ಟವರುಈ ವೇಳೆ ವಿಡಿಯೋ ಮಾಡ್ಕೊಂಡಿದ್ದರು.

ಕೇಸ್ ದಾಖಲಿಸಿ ತನಿಖೆಗಿಳಿದಿದ್ದ ಡಿಸಿಪಿ ಮೊಹಮ್ಮದ್ ಸಜೀತ, ಹಣ ರಾಬರಿ ಮಾಡಿದ್ದ ಓರ್ವ ಖಾಸಗಿ ವ್ಯಕ್ತಿಯನ್ನ ಬಂಧಿಸಿದ್ದಾರೆ. ಈ ವೇಳೆ ಸಿಐಡಿ ಇನ್ಸ್​ಪೆಕ್ಟರ್ ಸಹ ಜೀಪ್ ನಲ್ಲಿದ್ರು. ನಾವು ಮಾತ್ರ ಹೋಟೆಲ್ ಗೆ ಹೋಗಿ ಹಣಪಡೆದು ಅನ್ನೋ ಮಾಹಿತಿ ಹೊರಬಂದಿದೆ.

ಸದ್ಯ ಸಿಐಡಿ ಇನ್ಸ್​ಪೆಕ್ಟರ್​ಗೆ ಸೇರಿದ ಪೊಲೀಸ್ ಜೀಪ್ ಸೀಜ್ ಮಾಡಲಾಗಿದೆ. ಪ್ರಕರಣ ದಾಖಲಾಗ್ತಿದ್ದಂತೆ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಇನ್ಸ್​​ಪೆಕ್ಟರ್ ಎಸ್ಕೇಪ್ ಆಗಿದ್ದಾರೆ. ಸಿಐಡಿ ಇನ್ಸ್​​ಪೆಕ್ಟರ್ ಮಹೇಶ್ ಕನಕಗಿರಿಗಾಗಿ ಇದೀಗ ಶೋಧ ಕಾರ್ಯ ನಡೆದಿದೆ. ಸದ್ಯ ಹಣ ಸೀಜ್ ಮಾಡಿದ್ದು, ಮಡಿವಾಳ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆದಿದೆ. ಇನ್ಸ್ ಪೆಕ್ಟರ್ ಮೇಲೆ ಗಂಭೀರ ಆರೋಪವಿದ್ದು, ಜೀಪ್ ನಲ್ಲಿ ಇನ್ಸ್ ಪೆಕ್ಟರ್ ಇದ್ರಾ? ಇಲ್ವಾ? ಎಂಬುದರ ಕುರಿತು ತನಿಖೆ ನಡೆಸಲಾಗ್ತಿದೆ.

ಪ್ರಕರಣ ಸಂಬಂಧ ಮಾತಾಡಿದ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಅವ್ರು, ನಿನ್ನೆ ತಡರಾತ್ರಿ ಮಡಿವಾಳ ಪೊಲೀಸ್ ಠಾಣೆಗೆ ದೂರು ಬಂದಿದೆ. ಇಬ್ಬರು ವ್ಯಕ್ತಿಗಳು ಹೋಟೆಲ್ ನಲ್ಲಿ ಹಣ ಇಟ್ಟುಕೊಂಡು ಇದ್ರು‌‌. ಪೊಲೀಸರು ಅಂತ ಹೇಳಿ ಹೋಟೆಲ್ ಗೆ ಒಳಗೆ ನುಗ್ಗಿದ ಇಬ್ಬರು ತೆಗೆದುಕೊಂಡು ಹೋಗಿದ್ದಾರೆ ಎಂದ್ರು.

ದೂರುದಾರ ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಇನ್ಸ್‌ಪೆಕ್ಟರ್ ಒಬ್ಬರ ಪಾತ್ರ ಬಗ್ಗೆ ಮಾಹಿತಿ ಬಂದಿದೆ. ಅದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಹಣವನ್ನು ರಿಕವರಿ ಮಾಡಲಾಗಿದೆ ಕೃತ್ಯಕ್ಕೆ ಪೊಲೀಸ್ ಇಲಾಖೆಯ ವಾಹನ ಬಳಕೆ ಆಗಿದೆ ಅದನ್ನ ವಶಕ್ಕೆ ಪಡೆಯಲಾಗಿದ್ದು, ದೂರುದಾರರ ಹಿನ್ನಲೆಯನ್ನ ಸಹ ಪರಿಶೀಲನೆ ಮಾಡಲಾಗುತ್ತಿದೆ. ಸದ್ಯ ಇನ್ಸ್‌ಪೆಕ್ಟರ್ ಪರಾರಿಯಾಗಿದ್ದು ಅವರಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಕಮಿಷನರ್​ ಹೇಳದ್ದಾರೆ.

Leave a Reply

Your email address will not be published. Required fields are marked *