BBMP
Loading ...

Swamiji

ತುಮಕೂರು: ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಶ್ರೀ ಗುರುಗುಂಡ ಬ್ರಹ್ಮಶ್ವರಸ್ವಾಮಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಶಿಕ್ಷಣಕ್ಕೆ ದಾಖಲಾತಿ ಪ್ರಾರಂಭವಾಗಿದೆ.

5ನೇ ತರಗತಿಯಿಂದ ಪಿ.ಯು.ಸಿ ವರೆಗೆ ಸಂಪೂರ್ಣ ಉಚಿತ ಶಿಕ್ಷಣ ದೊರೆಯಲಿದೆ.

* ಪ್ರತಿ ತರಗತಿಗೆ 25 ಮಕ್ಕಳಿಗೆ ಮಾತ್ರ ಅವಕಾಶ (ಮೊದಲು ಬಂದವರಿಗೆ ಆದ್ಯತೆ)
* ಗಂಡು ಮಕ್ಕಳಿಗೆ ಮಾತ್ರ ವಸತಿ ಸಹಿತ ಪ್ರವೇಶದ ಅವಕಾಶವಿದೆ.
* ಗುಣಮಟ್ಟದ ಕಂಪ್ಯೂಟರ್ ಶಿಕ್ಷಣದ ವ್ಯವಸ್ಥೆ ಇದೆ.
* ವಿದ್ಯಾರ್ಥಿಗಳು ಉಳಿದುಕೊಳ್ಳಲು ಗುಣಮಟ್ಟದ ವಸತಿ ಸಹಿತ ವ್ಯವಸ್ಥೆ ಇದೆ.
* ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ಹಾಗೂ ಸ್ನಾನಕ್ಕೆ ಬೇಕಾದ ಬಿಸಿನೀರಿನ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ.
* ನುರಿತ ಶಿಕ್ಷಕರಿಂದ ಬೋಧನೆಯನ್ನು ಮಾಡಿಸಲಾಗುತ್ತದೆ.
* ಮಕ್ಕಳಿಗೆ ರಾತ್ರಿವೇಳೆ ಟ್ಯೂಷನ್ ವ್ಯವಸ್ಥೆಯು ಸಹ ಇರುತ್ತದೆ.
* ವಿದ್ಯಾರ್ಥಿಯಲ್ಲಿ ಶಿಸ್ತು, ನಡತೆ, ವರ್ತನೆ ಹಾಗೂ ನಿರಂತರ ಕಲಿಕೆಯ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು.
* ವಿಭಿನ್ನ ಕಲಿಕೆಯ ಶೈಲಿಗಳನ್ನು ಕಲಿಸಲು ಪ್ರತಿ ಮಗುವಿಗೆ ವೈಯಕ್ತಿಕ ಗಮನ.
* ಸುರಕ್ಷಿತ ಮತ್ತು ಆರೋಗ್ಯಕರ ಕ್ಯಾಂಪಸ್.

ದಾಖಲಾತಿಗೆ ಬೇಕಾದ ದಾಖಲೆಗಳು

* ವಿದ್ಯಾರ್ಥಿಯ ಆಧಾರ್ ಕಾರ್ಡ್​ ಜೆರಾಕ್ಸ್ (2 ಪ್ರತಿ)​
* ತಂದೆ ತಾಯಿ ಆಧಾರ್ ಜೆರಾಕ್ಸ್ (ಪ್ರತಿ 02)
* ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಐದು ವರ್ಷ ಮೀರಿರಬಾರದು)
* ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ – 03 (ಪಾಸ್‌ಪೋರ್ಟ್ ಸೈಜ್)
* ವಿದ್ಯಾರ್ಥಿಯು ಹಿಂದೆ ಓದುತ್ತಿದ್ದ ಶಾಲೆಯ ಬಿ.ಸಿ. (TC) ಮತ್ತು ಮಾರ್ಕ್ಸ್ ಕಾರ್ಡ್, ಹೆಲ್ತ್ಕಾರ್ಡ್ ಕಡ್ಡಾಯ
* ವಿದ್ಯಾರ್ಥಿಯು ಹಿಂದೆ ಓದುತ್ತಿದ್ದ ಶಾಲೆಯ ವಿಳಾಸ ಮತ್ತು ಮುಖ್ಯ ಶಿಕ್ಷಕರ ದೂರವಾಣಿ ಸಂಖ್ಯೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8197655540, 9448136371

ಉಚಿತ ವಿದ್ಯುತ್ ಯಾರು ಕೇಳಿದ್ರು?: ಸ್ಮಾರ್ಟ್ ಮೀಟರ್​ಗೆ ಹೈಕೋರ್ಟ್​ ತಡೆ, ಬೆಸ್ಕಾಂಗೆ ಫುಲ್ ಕ್ಲಾಸ್​! ಹೋರಾಟಕ್ಕೆ ಸಿಕ್ಕ ಪ್ರತಿಫಲ

Leave a Reply

Your email address will not be published. Required fields are marked *