BBMP
Loading ...

Construction

ಕರ್ನಾಟಕ ಕಾಂಗ್ರೆಸ್‌ ಸರ್ಕಾರವು ಕಳೆದ ಎರಡರಿಂದ ಮೂರು ತಿಂಗಳಿನಿಂದ ಒಂದಿಲ್ಲೊಂದು ಸೇವೆ ಹಾಗೂ ವಸ್ತುಗಳ ಬೆಲೆ ಏರಿಕೆಯನ್ನು ಮಾಡಿಕೊಂಡು ಬಂದಿದ್ದು. ಇದೀಗ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಮನೆಗಳನ್ನು ನಿರ್ಮಾಣ ಮಾಡಬೇಕು ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಸರ್ಕಾರದ ಒಂದು ನಿರ್ಧಾರ ಭಾರೀ ದೊಡ್ಡ ಮಟ್ಟದ ಹೊಡೆತ ಕೊಟ್ಟಿದೆ. ಹೌದು ಕರ್ನಾಟಕ ಸರ್ಕಾರದ ಒಂದು ನಿರ್ದಿಷ್ಟ ವಸ್ತುವಿನ ಬೆಲೆ ಏರಿಕೆಯು ಇದೀಗ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಮಾರಕವಾಗಿ ಪರಿಗಣಿಸಿದೆ. ಅಲ್ಲದೇ ಮನೆ ಕಟ್ಟಬೇಕು ಎಂದುಕೊಂಡವರು ಇಲ್ಲವೇ ಈಗಾಗಲೇ ಮನೆ ಕಟ್ಟುತ್ತಿರುವವರಿಗೆ ದೊಡ್ಡ ಶಾಕ್‌ ಎದುರಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಕರ್ನಾಟಕ ಸರ್ಕಾರವು ಮೆಟ್ರೋ ಬೆಲೆಯಿಂದ ಇದೀಗ ಡೀಸೆಲ್ ವರೆಗೆ 8ಕ್ಕೂ ಹೆಚ್ಚು ಸೇವೆ / ವಸ್ತುಗಳ ಬೆಲೆ ಏರಿಕೆಯನ್ನು ಮಾಡಿದೆ. ದಿನೇ ದಿನೇ ಆಗುತ್ತಿರುವ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಹೈರಾಣಾಗಿದ್ದಾರೆ. ಕೇವಲ ರಾಜ್ಯ ಸರ್ಕಾರ ಮಾತ್ರವಲ್ಲ ಅತ್ತ ಕೇಂದ್ರ ಸರ್ಕಾರವೂ ಸದ್ದಿಲ್ಲದೆ ಬೆಲೆ ಏರಿಕೆಯನ್ನು ಮಾಡುತ್ತಿದೆ. ಈ ಬೆಲೆ ಏರಿಕೆಯ ಪರ್ವದಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರು ಸುಸ್ತಾಗಿದ್ದಾರೆ. ಇದರ ನಡುವೆ ಈಗಾಗಲೇ ಕೆಳಗೆ ಇಳಿಯುತ್ತಿರುವ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಪೆಟ್ಟುಕೊಡುವ ನಿರ್ಧಾರವೊಂದನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಈ ನಿರ್ಧಾರದಿಂದ ಕರ್ನಾಟಕದಲ್ಲಿ ಮನೆಗಳನ್ನು ಕಟ್ಟುವುದಕ್ಕೆ ಆಗುವ ವೆಚ್ಚವು ಶೇ 15ರಿಂದ 20% ಹೆಚ್ಚಾಗುವ ಸಾಧ್ಯತೆ ಇದೆ.

ಹೌದು ಕರ್ನಾಟಕ ಸರ್ಕಾರವು ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿದ್ದು ಇದರಿಂದ ಮನೆ ಕಟ್ಟಬೇಕು ಎಂದು ಕನಸು ಕಾಣುತ್ತಿರುವವರಿಗೆ ಹಾಗೂ ರಿಯಲ್‌ ಎಸ್ಟೇಟ್‌ಗೆ ಪೆಟ್ಟುಕೊಟ್ಟಿದೆ. ಈಗಾಗಲೇ ವಿವಿಧ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸ್ವಂತ ಮನೆ ಕಟ್ಟಬೇಕು ಎನ್ನುವವರಿಗೆ ಶಾಕ್‌ ಎದುರಾಗಿದೆ. ಇದೀಗ ಡೀಸೆಲ್ ಬೆಲೆ 2 ರೂಪಾಯಿ ಹೆಚ್ಚಳವಾಗಿರುವುದರಿಂದ ಮರಳು, ಜಲ್ಲಿಕಲ್ಲು ಹಾಗೂ ಸಿಮೆಂಟ್ ಸಾಗಾಣಿಕೆ ಬೆಲೆ ಭರ್ಜರಿ ಹೆಚ್ಚಳವಾಗಲಿದೆ.

ಡೀಸೆಲ್ ಬೆಲೆ ಹೆಚ್ಚಳವಾಗಿರುವುದರಿಂದ ಮನೆ ಕಟ್ಟಲು ಅವಶ್ಯವಾಗಿರುವ ಮರಳು, ಜಲ್ಲಿಕಲ್ಲು ಹಾಗೂ ಸಿಮೆಂಟ್‌ಗಳ ಸಾಗಾಣಿಕೆಯ ಬೆಲೆಯೂ ಹೆಚ್ಚಳವಾಗಲಿದೆ. ಇದರಿಂದ ಮನೆಕಟ್ಟುವವರಿಗೆ ವೆಚ್ಚ ಹೆಚ್ಚಳವಾಗಲಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ!
ಕರ್ನಾಟಕ ಸರ್ಕಾರವು ರಾತ್ರೋರಾತ್ರಿ ಡೀಸೆಲ್‌ ಬೆಲೆಯನ್ನು (ತೆರಿಗೆ) 2 ರೂಪಾಯಿ ಹೆಚ್ಚಳ ಮಾಡಿದೆ. ಇದರಿಂದ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಅಲ್ಲದೇ ರಾಜ್ಯದಲ್ಲಿ ಹಣದುಬ್ಬರವೂ ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ. ಡೀಸೆಲ್ ಬೆಲೆ ಹೆಚ್ಚಳವಾದರೆ ದಿನಸಿ, ಧಾನ್ಯ ಹಾಗೂ ತರಕಾರಿ ಸೇರಿದಂತೆ ಎಲ್ಲಾ ಸಾಗಾಣಿಕೆ ವೆಚ್ಚವೂ ಹೆಚ್ಚಳವಾಗಲಿದೆ ಇದರಿಂದ ಆ ವೆಚ್ಚವನ್ನು ಖರೀದಿದಾರರ ಮೇಲೆ ವರ್ಗಾಯಿಸಲಾಗುತ್ತದೆ.

ಉದ್ಯೋಗ ಕಡಿತದಿಂದ ಸಂಕಷ್ಟ: ಈಗಾಗಲೇ ಕರ್ನಾಟಕದಲ್ಲಿ ವಿವಿಧ ಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿನ ಉದ್ಯೋಗವನ್ನು ಕಡಿತ ಮಾಡುತ್ತಿದ್ದು ಇದರಿಂದ ಈಗಾಗಲೇ ರಿಯಲ್‌ ಎಸ್ಟೇಟ್‌ಗೆ ಪೆಟ್ಟು ಬಿದ್ದಿದೆ. ಇದೀಗ ಡೀಸೆಲ್‌ ಬೆಲೆ ಹೆಚ್ಚಳವೂ ಅದಕ್ಕೆ ಪೂರಕವಾಗಿ ರಿಯಲ್‌ ಎಸ್ಟೇಟ್‌ ಇನ್ನಷ್ಟು ಕುಸಿಯುವುದಕ್ಕೆ ಕಾರಣವಾಗುತ್ತಿದೆ.

ನಾಳೆಯಿಂದ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ಆರಂಭ

Leave a Reply

Your email address will not be published. Required fields are marked *