BBMP
Loading ...

DKS (2)

Greater Bengaluru News9 : ಸಿಎಂ ಡಿಕೆ ಶಿವಕುಮಾರ್ ಸರ್ಕಾರದ ಎರಡನೇ ಹಂತದ ಕ್ಯಾಬಿನೆಟ್ ರಚನೆಗೆ ಸಿದ್ಧತೆಗಳು ಶುರುವಾಗಿದೆ. 20 ಸಚಿವ ಸ್ಥಾನಗಳು ಬಾಕಿ ಇದ್ದು, 40 ಆಕಾಂಕ್ಷಿಗಳು ಲಾಬಿ ಮಾಡುತ್ತಿದ್ದಾರೆ.

ಮೊದಲ ಹಂತದಲ್ಲಿ ಹಿರಿತನ, ಜಾತಿ ಲೆಕ್ಕಾಚಾರದಲ್ಲಿ ಬ್ಯಾಲೆನ್ಸ್ ಸಂಪುಟ ಮಾಡಿದ್ದ ಹೈಕಮಾಂಡ್ ಎರಡನೇ ಹಂತದಲ್ಲಿ ಏನು ಮಾಡುತ್ತೆ ಎಂಬ ಕುತೂಹಲ ದಟ್ಟವಾಗಿದೆ. ಅಲ್ಲದೆ, ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದು, ಎರಡನೇ ಪಟ್ಟಿಯಲ್ಲಿ ಡಿಕೆಶಿ ಪಟ್ಟಿ ಮೇಲುಗೈ ಸಾಧಿಸುತ್ತಾರಾ? ಎಂಬ ಚರ್ಚೆ ಜೋರಾಗಿದೆ.

ಡಿಕೆ ಸಂಪುಟದಲ್ಲಿ 20 ಸಚಿವ ಸ್ಥಾನಗಳು ಬಾಕಿ ಇದ್ದು, ಯಾರಿಗೆ ಅದೃಷ್ಟ ಒಲಿಯುತ್ತೆ ಎಂಬ ಲೆಕ್ಕಾಚಾರ ಜೋರಾಗಿದೆ. ಸಿದ್ದರಾಮಯ್ಯ, ಸಿಎಂ ಡಿಕೆ ಶಿವಕುಮಾರ್ ಸಂಪುಟಕ್ಕೆ ಸೇರಲು ಸರ್ಕಸ್ ಮಾಡುತ್ತಿದ್ದಾರೆ. ಕಾಂಗ್ರೆಸ್ ವಲಯದಲ್ಲಿ ಎರಡನೇ ಪಟ್ಟಿ ರಾಹುಲ್ ಗಾಂಧಿ ಆಯ್ಕೆಯೇ ಅಂತಿಮ ಅಂತಲೂ ಚರ್ಚೆ ಆಗುತ್ತಿದೆ.

ಶ್ರೀರಂಗ ಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ನಮಗೂ ಸಚಿವ ಸ್ಥಾನ ಕೊಡಿ ಎಂದು ಒತ್ತಾಯಿಸಿದ್ದಾರೆ. ಜಾತಿ ವ್ಯವಸ್ಥೆ ಬಿಟ್ಟು, ಅನುಭವ ಆಧರಿಸಿ ಸಚಿವ ಸ್ಥಾನ ನೀಡಬೇಕು. ನನಗೆ ಸಚಿವನಾಗುವ ಎಲ್ಲಾ ಅರ್ಹತೆಗಳು ಇದೆ, ನಾನು ಫಿಟ್ ಇದೀನಿ ಎಂದಿದ್ದಾರೆ.

ಒಕ್ಕಲಿಗರಿಗೆ ಹೆಚ್ಚಿನ ಸಚಿವ ಸ್ಥಾನಕ್ಕೆ ಬೇಡಿಕೆ:
ಇನ್ನು ಒಕ್ಕಲಿಗ ಸಮುದಾಯಕ್ಕೆ ಹೆಚ್ಚಿನ ಸಚಿವ ಸ್ಥಾನ ನೀಡಬೇಕೆಂದು ಬೇಡಿಕೆ ಹೆಚ್ಚಿದೆ. ಮಾಗಡಿ ಬಾಲಕೃಷ್ಣ, ಚೆಲುವರಾಯಸ್ವಾಮಿ ಶರತ್ ಬಚ್ಚೇಗೌಡ ಸೇರಿ ಒಕ್ಕಲಿಗ ಶಾಸಕರ ಪರ ನಂಜಾವಧೂತ ಶ್ರೀಗಳು ಬ್ಯಾಟಿಂಗ್ ಮಾಡಿದ್ದಾರೆ. ಬಾಲಕೃಷ್ಣ, ಚೆಲುವರಾಯಸ್ವಾಮಿ ಯಾರ ಜೊತೆ ಇರ್ತಾರೋ ಅವರು ಮುಖ್ಯಮಂತ್ರಿ ಆಗುತ್ತಾರೆ. ಬೇರೆಯವರನ್ನೆಲ್ಲ ಮುಖ್ಯಮಂತ್ರಿ ಮಾಡಿ ಈಗ ತಾವೇ ಸಚಿವರಾಗಲು ಒದ್ದಾಡುತ್ತಿದ್ದಾರೆ ಎಂದು ನಂಜಾವಧೂತ ಶ್ರೀ ಹೇಳಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಇನ್ನೂ ಕನಿಷ್ಟ 4-5 ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಜಮೀರ್ ಪರ ರಂಗನಾಥ್ ಬ್ಯಾಟಿಂಗ್:
ಸಿಎA ಡಿಕೆ ಶಿವಕುಮಾರ್ ಆಪ್ತೇಷ್ಠ, ಕುಣಿಗಲ್ ಶಾಸಕ ರಂಗನಾಥ್, ಜಮೀರ್ ಅಹಮ್ಮದ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಜಮೀರ್ ರನ್ನು ಸಂಪುಟದ ಸಚಿವನಾಗಿ ನೋಡ್ಲಿಕ್ಕೆ ಆಸೆ ಪಡುತ್ತೇನೆ ಎಂದಿದ್ದಾರೆ. ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ ಎಂದಿದ್ದಾರೆ. ಇನ್ನು ಕೆ.ಎನ್.ರಾಜಣ್ಣ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ರಂಗನಾಥ್, ಹಗುರವಾಗಿ ಮಾತನಾಡುವವರ ವಿರುದ್ಧ ಪಕ್ಷ ಕಠಿಣ ಕ್ರಮ ತೆಗೆದುಕೊಂಡಿದೆ. ಹಾದಿ ಬೀದಿಯಲ್ಲಿ ಎಲ್ಲಾ ಮಾತಾಡುವಂತಹ ವ್ಯಕ್ತಿತ್ವದವರು ಶಾಸಕರು ಆಗಬಾರದು. ನಮ್ಮ ಜವಾಬ್ದಾರಿಯನ್ನ ಮೀರಿ ಹೇಳಿಕೆಗಳು ಕೊಡುವಂತದ್ದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಮಂತ್ರಿಗಿರಿಗಾಗಿ ಹಾವೇರಿಯಲ್ಲಿ ಟಾಕ್‌ಫೈಟ್:
ಹಾವೇರಿಯಲ್ಲಿ ಮಂತ್ರಿಗಿರಿ ಲಾಬಿ ಮುಂದುವರಿದಿದೆ. ಬ್ಯಾಡಗಿ ಶಾಸಕ ಮತ್ತು ಹಾನಗಲ್ ಶಾಸಕರ ನಡುವೆ ಸಚಿವ ಸ್ಥಾನಕ್ಕಾಗಿ ಸಮರ ಏರ್ಪಟ್ಟಿದೆ. ಶ್ರೀನಿವಾಸ್ ಮಾನೆ-ಶಿವಣ್ಣನವರ್ ಮಧ್ಯೆ ಮಂತ್ರಿಗಿರಿ ಪಟ್ಟಕ್ಕಾಗಿ ಫೈಟ್ ನಡೆಯುತ್ತಿದೆ. ಶಿವಣ್ಣನವರಿಗೆ ಮಯಸ್ಸಾಗಿದೆ, ನನಗೆ ಮಂತ್ರಿ ಮಾಡಿ ಎಂಬ ಶ್ರೀನಿವಾಸ್ ಮಾನೆ ಹೇಳಿಕೆಗೆ ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್ ತಿರುಗೇಟು ನೀಡಿದ್ದಾರೆ. ಶ್ರೀನಿವಾಸ್ ಮಾನೆ ಬುದ್ಧಿವಂತ, ಜಾಣ, ಮೇಧಾವಿ. ಅಂತವರಿಗೆ ಸಚಿವ ಸ್ಥಾನ ಕೊಡಲಿ, ನಾವು ದಡ್ಡರು ಎಂದು ವ್ಯಂಗ್ಯವಾಗಿ ಮಾನೆಯನ್ನ ಕುಟುಕಿದ್ದಾರೆ. ಕುರುಬ ಸಮಾಜದಲ್ಲಿ ನನಗೆ ಅಥವಾ ಹಿಟ್ನಾಳ್‌ಗೆ ಕೊಟ್ಟರೆ ಸಂತೋಷ ಎಂದಿದ್ದಾರೆ. ಒಟ್ನಲ್ಲಿ ಹೈಕಮಾಂಡ್ ಯಾರಿಗೆ ಎರಡನೇ ಹಂತದಲ್ಲಿ ವರ ಕೊಡುತ್ತೆ ಎಂಬುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *