BBMP
Loading ...

BESCOM

ಬೆಂಗಳೂರು: ವಿಜಯನಗರ ಉಪಕೇಂದ್ರದಲ್ಲಿ ಫೆ.12 ರಂದು ನಡೆಯಬೇಕಿದ್ದ ವಿದ್ಯುತ್​ ನಿರ್ವವಣೆ ಕಾಮಗಾರಿ ಕೆಲಸವನ್ನು ಕಾರಣಾಂತರಗಳಿಂದ ಮುಂದೂಡುಲಾಗಿದೆ.

ವಿಜಯನಗರ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸದ ಹಿನ್ನೆಲೆಯಲ್ಲಿ ಫೆ.12ರಂದು ಬೆಳಗ್ಗೆ 10ರಿಂದ 5ರವರೆಗೆ ವಿಜಯನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ಬಿ.ನಾರಾಯಣಸ್ವಾಮಿ ತಿಳಿಸಿದ್ದರು. ಆದರೆ ಇದೀಗ ಕಾರಣಾಂತರಗಳಿಂದ ವಿದ್ಯುತ್​ ದುರಸ್ತಿ ಕೆಲಸವನ್ನು ಮುಂದೂಡಲಾಗಿದ್ದು, ಎಂದಿನಂತೆ ನಾಳೆಯೂ ವಿದ್ಯುತ್​ ಇರಲಿದೆ.

ಬಸವೇಶ್ವರ ನಗರ, ವಿಜಯನಗರ, ಗೋವಿಂದರಾಜನಗರ, ಕಾಮಾಕ್ಷಿಪಾಳ್ಯ, ಆರ್‌ಪಿಸಿ ಲೇಔಟ್, ಮಾರೇನಹಳ್ಳಿ, ಬಿನ್ನಿ ಲೇಔಟ್, ಪ್ರಶಾಂತ ‘ನಗರ, ಎಂ.ಸಿ.ಲೇಔಟ್, ಹೊಸಹಳ್ಳಿ, ತಿಮ್ಮೇನಹಳ್ಳಿ, ವಿನಾಯಕ ಲೇಔಟ್, ಕಾವೇರಿಪುರ, ರಂಗನಾಥಪುರ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ನಾಗರಬಾವಿ, ಸಿದ್ದಯ್ಯ ಪುರಾಣಿಕ್ ರೋಡ್, ಕೆಎಚ್‌ ಬಿ ಕಾಲೋನಿ, ಮಾಗಡಿ ಮುಖ್ಯ ರಸ್ತೆ, ಎಚ್‌ವಿಆರ್ ಲೇಔಟ್, ಅಗ್ರಹಾರ ದಾಸರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನಾಳೆ ವಿದ್ಯುತ್​ ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ.

ಆಸ್ತಿ ಹರಾಜಿಗೆ ಮುಂದೆ ಬಾರದ ಬಿಡ್ಡುದಾರರು! ರಾಜರಾಜೇಶ್ವರಿನಗರದಲ್ಲಿ ನಡೆದ ಹರಾಜಿನಲ್ಲಿ ಯಾರೂ ಭಾಗವಹಿಸಲಿಲ್ಲ

Leave a Reply

Your email address will not be published. Required fields are marked *