BBMP
Loading ...

Nirmala

Greater Bengaluru News9 : ತರಾತುರಿಯಲ್ಲಿ ಜಾತಿ ಗಣತಿಗೆ ಒಕ್ಕಲಿಗರ ವಿರೋಧ ವ್ಯಕ್ತವಾಗಿದ್ದು, ಇಂದು ನಿರ್ಮಲಾನಾಂದನಾಥ ಶ್ರೀ ನೇತೃತ್ವದಲ್ಲಿ ಜಾಗೃತಿ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ನಿರ್ಮಲಾನಾಂದನಾಥ ಶ್ರೀ, ರಾಜ್ಯ ಸರ್ಕಾರದ ಸಮೀಕ್ಷೆಯ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. 15 ದಿನಗಳಲ್ಲಿ 9 ದಿನ ಎಲ್ಲರೂ ನವರಾತ್ರಿ ಆಚರಣೆಯಲ್ಲಿ ಭಾಗಿಯಾಗುತ್ತಾರೆ.

ನವರಾತ್ರಿಯ ಸಂಭ್ರಮದಲ್ಲಿ ಸಮೀಕ್ಷೆ ಮಾಡಲು ಹೊರಟರೆ ಪೂರ್ಣ ಫಲಿತಾಂಶ ಸಿಗಲು ಸಾಧ್ಯವಿಲ್ಲ. ಹೆಚ್ಚಿನವರು ಈ ರಜೆಯ ಸಂದರ್ಭದಲ್ಲಿ ಪ್ರವಾಸ ಹೋಗುತ್ತಾರೆ. ಈ ಹಿಂದಿನ ರೀತಿ ಆದರೆ ಸಮೀಕ್ಷೆ ಮತ್ತೊಂದು ಮಜಲಿಗೆ ಹೋಗಬಹುದು. ಹೀಗಾಗಿ ಸಮೀಕ್ಷೆಯನ್ನು 45 ದಿನಗಳ ಕಾಲ ಮುಂದೂಡಬೇಕು. 60 ದಿನಗಳ ಕಾಲ ಸಮೀಕ್ಷೆ ನಡೆಸಬೇಕು. ಪ್ರಜ್ಞಾವಂತ ಸರ್ಕಾರ ಇದನ್ನು ಪರಿಗಣಿಸಿ ಸಮೀಕ್ಷೆ ಮುಂದೂಡಬೇಕು ” ಎಂದು ಹೇಳಿದ್ದಾರೆ.

ನಮ್ಮ ಸಮುದಾಯದ 90% ಗಿಂತ ಹೆಚ್ಚು ಜನರು ತಮ್ಮ ಉಪಜಾತಿಯನ್ನು ಬರೆಸಲು ಸಿದ್ಧರಿಲ್ಲ. ಉಪ ಪಂಗಡಗಳ ಅವಶ್ಯಕತೆಯನ್ನು ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗಷ್ಟೇ ಬಳಸಿಕೊಳ್ಳುತ್ತೇವೆ. ಸಮೀಕ್ಷೆ ಮುಂದೂಡಬೇಕು ಎಂಬುದು ನಮ್ಮ ನಿಲುವು ಮತ್ತು ಆಸೆ. ಇದರ ಮಧ್ಯೆ ಕೆಲಸ ಮಾಡಬೇಕಾದವರು ಸಮುದಾಯದ ನಾಯಕರು. ನಾವು ಅವರಿಗೆ ಏನು ನಿರ್ದೇಶನ ಕೊಟ್ಟಿದ್ದೇವೆ ಎಂಬುದು ಮುಂದೆ ಕ್ರಮದಲ್ಲಿ ಗೊತ್ತಾಗುತ್ತದೆ.

ಸಮುದಾಯದ ಜೊತೆಗೆ ಧರ್ಮವನ್ನು ಸೇರಿಸಿರುವುದು ಸರಿಯಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದು ಸರಿಪಡಿಸುತ್ತದೆ ಎಂಬ ಮಾಹಿತಿ ಇದೆ. ಹೀಗೇ ಆದರೆ ಮುಂದೆ ಒಕ್ಕಲಿಗ ಮುಸ್ಲಿಂ, ಹಿಂದು ಮುಸ್ಲಿಂ, ಹಿಂದೂ ಕ್ರಿಶ್ಚಿಯನ್ ಎಂದು ಆಗಬಹುದೇನೋ. ಪ್ರಜಾಪ್ರಭುತ್ವದಲ್ಲಿ ನಾಸ್ತಿಕ, ಆಸ್ತಿಕ ಎಂದು ಹೇಗೆ ಬೇಕಾದರೂ ಹೇಳಿಕೊಳ್ಳಬಹುದು. ಸಮೀಕ್ಷೆ ಹೆಚ್ಚು ಪಾರದರ್ಶಕ ಆಗಿರಬೇಕು ಎಂಬುದು ನಮ್ಮ ಬಯಕೆ. ಮಾಹಿತಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಬಗ್ಗೆ ಸರ್ಕಾರ, ಆಯೋಗ ಏನು ನಿರ್ಧಾರ ಕೈಗೊಂಡಿದೆ ಗೊತ್ತಿಲ್ಲ ಎಂದರು.

Leave a Reply

Your email address will not be published. Required fields are marked *