BBMP
Loading ...

BNG

Greater Bengaluru News9 : ಅಸ್ತಿತ್ವದಲ್ಲಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿರುವವರಿಗೆ ನಿಯಮಗಳನ್ನು ಸಡಿಲಿಸಿ, ಒಂದು ಬಾರಿಯ ಕ್ರಮವಾಗಿ (One Time Relaxation) ಅಸ್ತಿತ್ವದಲ್ಲಿರುವ ನಿಯಮಗಳಂತೆ ಗುರುತಿನ ಚೀಟಿ ಮತ್ತು ಮಾಲೀಕತ್ವದ ಪುರಾವೆಗಳನ್ನು ಪರಿಗಣಿಸಿ, (ನಿವೇಶನ ಅಥವಾ ಕಟ್ಟಡದ ವಿಸ್ತೀರ್ಣವನ್ನು ಪರಿಗಣಿಸದ) ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಅನುವು ಮಾಡಿಕೊಡಲಾಗಿದೆ.

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕೇಂದ್ರ ಸಂಘದ ವತಿಯಿಂದ ವಿದ್ಯುತ್ ಗುತ್ತಿಗೆದಾರರ ನಡೆ ಶಾಸಕರ ಕಡೆ ಎಂಬ ಶೀರ್ಷಿಕೆ ಅಡಿಯಲ್ಲಿ ಬೆಂಗಳೂರು ನಗರ ಜಿಲ್ಲಾ ಸಮಿತಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ,ತಾಲ್ಲೂಕು, ಉಪಸಮಿತಿಗಳ ವತಿಯಿಂದ ಸುಮಾರು 184 ಶಾಸಕರುಗಳನ್ನು ಭೇಟಿ ಮಾಡಿ ವಿದ್ಯುತ್ ಸಂಪರ್ಕಕ್ಕೆ ಅಡ್ಡಿಯಾಗಿರುವ ವಾಸದೃಢೀಕರಣ ಪತ್ರದ ವಿಷಯದಲ್ಲಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ, ವಿಧಾನಸೌಧದ ಎರಡು ಸದನಗಳಲ್ಲಿ ಚರ್ಚೆಯಾಗಿರುವುದು ಮತ್ತು ಉಪಮುಖ್ಯಮಂತ್ರಿ ಸನ್ಮಾನ್ಯ ಡಿ, ಕೆ, ಶಿವಕುಮಾರ್ ಅವರರನ್ನು ನಮ್ಮ ಸಂಘದ ವತಿಯಿಂದ ಎರಡು ಬಾರಿ ನೇರವಾಗಿ ಬೇಟಿ ಮಾಡಿ ಮನವಿ ಮಾಡಿದ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದು ಕಡತದಲ್ಲಿ ದಾಖಲಾಗಿದೆ. ಇದು ಒಂದು ಸಂಘದ ಇತಿಹಾಸದಲ್ಲೇ ಒಂದು ದಾಖಲೆಯೇ ಸರಿ.

ತದನಂತರ ಸನ್ಮಾನ್ಯ ಶ್ರೀ ಡಿ ಸಿ ಎಂ ರವರಿಗೆ ಅವರ ಆಪ್ತರು ಮತ್ತು ಕುಟುಂಬ ವರ್ಗದವರಿಂದ ಪ್ರಸ್ತುತ ರಾಜ್ಯದಲ್ಲಿ ಸಾರ್ವಜನಿಕರ ಅಭಿಪ್ರಾಯ ಹೇಗಿದೆ ಎಂಬುದನ್ನು ಮನವರಿಕೆ ಮಾಡಿಕೊಡುವಲ್ಲಿ ನಾವೂಗಳು ಯಶಸ್ವಿಯಾದ, ಪರಿಣಾಮ ಇಂದಿನ ಸಂಪುಟ ಸಭೆಯಲ್ಲಿ ಒಂದು ಬಾರಿ ವಿನಾಯಿತಿ ನೀಡುವ ಸಲುವಾಗಿ ದಂಡ ಶುಲ್ಕದ ಬಗ್ಗೆ ವಿಷಯ ಪ್ರಸ್ತಾಪಕ್ಕೆ ಬರುತ್ತಿದೆ.

ಇಂದಿನ ಅಂದರೆ ದಿನಾಂಕ 25-09-2025 ರ ಸಂಪುಟ ಸಭೆಯಲ್ಲಿ ಚರ್ಚೆಯಾಗಿ ಈಗಾಗಲೇ ಎಸ್ಕೌಂಗಳಲ್ಲಿ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ನೊಂದಣಿ ಆಗಿ, ವಿದ್ಯುತ್ ಮಂಜೂರಾತಿ, ಕಾರ್ಯಾದೇಶ ಸೇರಿದಂತೆ ಬಾಕಿ ಇರುವ ಅರ್ಜಿ / ಕಟ್ಟಡಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಒಂದು ಬಾರಿ ದಂಡ ದೊಂದಿಗೆ ವಿನಾಯಿತಿ ನೀಡುವ ನಿರ್ಣಯ ಕೈಗೊಳ್ಳುವುದಾಗಿ ಮಾಹಿತಿ ಬಂದಿರುತ್ತದೆ.

ಸದರಿ ವಿನಾಯಿತಿ ವಿಷಯವಾಗಿ ಮುಂದಿನ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ದಂಡದ ಮೊತ್ತ, ರೂಪ, ಇತ್ಯಾದಿಗಳನ್ನು ಒಳಗೊಂಡ ಕಾನೊನು ರೂಪಿಸಿ, ಜಾರಿಗೆ ಬಂದ ನಂತರ, ಗ್ರಾಹಕರು ನಿಗದಿತ ದಂಡವನ್ನು ಸ್ಥಳೀಯ ಸಂಸ್ಥೆಗಳಿಗೆ, ಪ್ರಾಧಿಕಾರಗಳಿಗೆ ಪಾವತಿಸಿ ವಾಸದೃಡಿಕರಣ ಪತ್ರ ಪಡೆದು ಎಸ್ಕೌಂಗಳಿಗೆ ಸಲ್ಲಿಸಿ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯ ಬಹುದಾಗಿದೆ.

Leave a Reply

Your email address will not be published. Required fields are marked *