Greater Bengaluru News9 : ಇದೇ ಸೋಮವಾರದಿಂದ ಸರ್ಕಾರದ ಆದೇಶದಂತೆ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 1200 ಚದರ ಅಡಿ ನೀವೇಶನಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಹಾಗೂ G+2/stilt+3 ವರೆಗಿನ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಿಸಿರುವ ಕಟ್ಟಡಗಳಿಗೆ ಶಾಶ್ವತ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ನೀಡಲಾಗುತ್ತದೆ.
ದಿನಾಂಕ 14/09/2025 ರಂದು ನೀಡಿದ್ದ ಆದೇಶದ ವಿಚಾರವಾಗಿ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಮಾಲತೀಶ್ ಕೊಡ್ಲಿಯಾರ್ ರವರನ್ನು ವಿದ್ಯುತ್ ಗುತ್ತಿಗೆದಾರರ ಸಂಘ ಭೇಟಿಯಾಗಿ ಚರ್ಚಿಸಿದೆ. ಅದರಂತೆ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 1200 ಚದರ ಅಡಿ ನೀವೇಶನಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಹಾಗೂ G+2/stilt+3 ವರೆಗಿನ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಿಸಿರುವ ಕಟ್ಟಡಗಳಿಗೆ ಶಾಶ್ವತ ಹಾಗೂ ತಾತ್ಕಾಲಿಕ ಸಂಪರ್ಕವನ್ನು ಸೋಮವಾರದಿಂದ ನೀಡಲಾಗುತ್ತದೆ.
ಇನ್ನು ಇಂದು ನಡೆಧ ಸಂಪುಟ ಸಭೆಯಲ್ಲಿ ರಾಜ್ಯ ವ್ಯಾಪಿಯ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಎಲ್ಲ ಗ್ರಾಹಕರಿಗೂ ವಿದ್ಯುತ್ ಸಂಪರ್ಕ ಸಿಗುವ ಕಾಲ ಸನ್ನಿಹಿತವಾಗಿದೆ. ಅದರ ಆದೇಶದಂತೆ ಕೆಲವೇ ದಿನಗಳಲ್ಲಿ ಎಲ್ಲರಿಗೂ ಹೊಸ ಹಾಗೂ ಹಳೆಯ ಕಟ್ಟಡಗಳಿಗೆ ವಿದ್ಯುತ ಸಂಪರ್ಕ ಸಿಗುತ್ತದೆ.


