BBMP
Loading ...

Auto

ಬೆಂಗಳೂರು : ಬೆಂಗಳೂರಿನ ಜನತೆಗೆ ಮತ್ತೊಂದು ಶಾಕ್, ಬಸ್, ಮೆಟ್ರೋ ರೈಲು ಪ್ರಯಾಣ ದರದ ನಂತರ ಇದೀಗ ನಗರದಲ್ಲಿ ಆಟೋ ಪ್ರಯಾಣ ದರವನ್ನು ಆಗಸ್ಟ್ 1ರಿಂದ ಅನ್ವಯವಾಗುವಂತೆ ಹೆಚ್ಚಳವಾಗಲಿದೆ.

ಹೌದು, ಮೊದಲ 2 ಕಿ.ಮೀ.ಗೆ (ಕನಿಷ್ಠ ದರ) 30 ರು. ಇದ್ದ ಪ್ರಯಾಣ ದರವನ್ನು 36 ರು.ಗೆ ಹೆಚ್ಚಿಸಲಾಗಿದೆ. ಉಳಿದಂತೆ ನಂತರದ ಪ್ರತಿ ಕಿ.ಮೀ. ದರವನ್ನು 15 ರು.ನಿಂದ 18 ರು.ಗೆ ಏರಿಸಲಾಗಿದೆ.ಆಗಸ್ಟ್ 1 ರಿಂದ ಅನ್ವಯವಾಗುವಂತೆ ಆಟೋ ಪ್ರಯಾಣ ದರ ಹೆಚ್ಚಳ ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ನಗರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಕಾಯುವಿಕೆ ದರವನ್ನು ಮೊದಲ ಐದು ನಿಮಿಷಕ್ಕೆ ಉಚಿತ, ಐದು ನಿಮಿಷದ ನಂತರದ ಪ್ರತಿ 15 ನಿಮಿಷದ ದರವನ್ನು 5 ರೂ.ನಿಂದ 10 ರೂ.ಗೆ ಹೆಚ್ಚಳ ಮಾಡಲಾಗಿದೆ.ಪ್ರಯಾಣಿಕರು 20 ಕೆಜಿ ಲಗೇಜ್ ಉಚಿತವಾಗಿ ತೆಗೆದುಕೊಂಡು ಹೋಗಬಹುದು. 20 ರಿಂದ 50 ಕೆಜಿಗೆ ಪ್ರತಿ ಕೆಜಿ ಲಗೇಜಿಗೆ 10 ರೂ. ನಂತೆ ಪಾವತಿಸಬೇಕು.

ಪರಿಷ್ಕೃತ ದರದ ಮೂಲ ಪಟ್ಟಿಯ ಪ್ರತಿಯನ್ನು ಎಲ್ಲಾ ಆಟೋಗಳಲ್ಲಿ ಪ್ರದರ್ಶಿಸಬೇಕು ಅಕ್ಟೋಬರ್ 10ರೊಳಗೆ ಮೀಟರ್ ಅನ್ನು ಪರಿಷ್ಕೃತ ದರಕ್ಕೆ ನಿಗದಿ ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

1) ಕನಿಷ್ಠ ದರ ಮೊದಲ 2.00 ಕಿ.ಮೀ.ಗೆ ದರ : ರೂ.36/- (ರೂ.ಮುವತ್ತಾರು ಮಾತ್ರ ಮೂರು ಜನ ಪ್ರಯಾಣಿಕರು

2) ನಂತರದ ಪ್ರತಿ ಕಿಲೋಮೀಟರ್ ದರ : ರೂ.18/- (ರೂ.ಹದಿನೆಂಟು ಮಾತ್ರ ಮೂರು ಜನ ಪ್ರಯಾಣಿಕರು

3) ಕಾಯುವಿಕೆ ದರ

ಅ) ಮೊದಲ ಐದು ನಿಮಿಷ: ಉಚಿತ

ಆ) ಮೊದಲ ಐದು ನಿಮಿಷದ ನಂತರ : ಪ್ರತಿ ಹದಿನೈದು ನಿಮಿಷ ಅಥವಾ ಅದರ ಭಾಗಕ್ಕೆ- 10 rs.

ಪ್ರಯಾಣಿಕರ ಲಗೇಜು ದರ

ಅ) ಮೊದಲ 20 ಕೆ.ಜಿ.ಗೆ : ಉಚಿತ

ಆ) ಮೊದಲ 20ಕೆ.ಜಿ.ಯಿಂದ ನಂತರ

ಪ್ರತಿ 20 ಕೆ.ಜಿ.ಗೆ ಅಥವಾ ಅದರ ಭಾಗಕ್ಕೆ 10 rs.

ಇ) ಗರಿಷ್ಠ ಪ್ರಯಾಣಿಕರ ಲಗೇಜುಗಳು 50 ಕೆ.ಜಿ.ಗೆ

ರಾತ್ರಿ ವೇಳೆ ದರ
ಸಾಮಾನ್ಯ ದರ+ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು (ರಾತ್ರಿ 10-00 ರಿಂದ ಬೆಳಗಿನ ಜಾವ 5-00 ಘಂಟೆವರೆಗೆ)

ಸೂಚನೆ : ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟಿರುವ ನಿಗದಿತ ಪರಿಷ್ಕೃತ ದರದ ಮೂಲ ಪಟ್ಟಿಯನ್ನು ಪ್ರತಿಯೊಂದು ಆಟೋರಿಕ್ಷಾದಲ್ಲಿ ಪ್ರಮುಖ ಸ್ಥಾನದಲ್ಲಿ ಪ್ರದರ್ಶಿಸಬೇಕು.

ಪರಿಷ್ಕೃತ ದರಗಳ ಮೀಟರಿನಲ್ಲಿ ಪ್ರದರ್ಶನವಾಗುವಂತೆ ಮೀಟರ್ಗಳನ್ನು ದಿನಾಂಕ: 31-10-2025 (90 ದಿನಗಳು) ರೊಳಗಾಗಿ ಪುನಃ ಸತ್ಯಾಪನೆ ಮಾಡಿ ಮುದ್ರೆ ಹಾಕಿಸಿಕೊಳ್ಳುವುದು.

ಇ-ಸ್ವತ್ತು ಮಾಡಿಕೊಡಲು 3000 ರೂಪಾಯಿ ಲಂಚ ಕೇಳಿದ್ದ ಗ್ರಾಪಂ ಕಾರ್ಯದರ್ಶಿ ಲೋಕಾ ಬಲೆಗೆ

Leave a Reply

Your email address will not be published. Required fields are marked *