BBMP
Loading ...

ಬೆಂಗಳೂರು : ಹಾಸನದ ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಪ್ರಕರಣದ ಆರೋಪಿ ಕಾರ್ತಿಕ್ ಗೌಡನನ್ನು ಎಸ್ ಐ ಟಿ ಬಂಧಿಸಿದೆ. ಅಶ್ಲೀಲ ವಿಡಿಯೋ ತುಂಬಿದ್ದ ಪೆನ್ ಡ್ರೈ ವ್ ನ್ನು ವಕೀಲ ದೇವರಾಜೇಗೌಡಗೆ ನೀಡಿದ ಆರೋಪದಲ್ಲಿ ಕಾರ್ತಿಕ್ ಗೌಡನನ್ನು ಬಂಧಿಸಲಾಗಿದೆ.

ಸದ್ಯ, ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಎಸ್ ಐ ಟಿ ತೀವ್ರ ವಿಚಾರಣೆಗೆ ಒಳಪಡಿಸಿದೆ.

ಇಂದು ಹಾಸನದ ಹೊಳೆನರಸೀಪುರಕ್ಕೆ ಪ್ರಜ್ವಲ್​ ರೇವಣ್ಣ ಅವರನ್ನು ಕರೆತಂದಿರುವ ಎಸ್ಐಟಿ ಸ್ಥಳ ಮಹಜರು ನಡೆಸಿದೆ. ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣರನ್ನು ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಕಳೆದ ವಾರ ಬಂಧಿಸಿ ಎಸ್‌ಐಟಿ ಕಚೇರಿಗೆ ಕರೆತರಲಾಗಿತ್ತು. ಸದ್ಯ, ಜೂ.10 ರವರೆಗೆ ಪ್ರಜ್ವಲ್ ರನ್ನು ಎಸ್ ಐಟಿ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

ಚಿಕ್ಕಬಳ್ಳಾಪುರದಲ್ಲಿ ಕಾಲುವೆಗೆ ಉರುಳಿದ ಕಾರು; ಮೂವರು ಬೆಸ್ಕಾಂ ಸಿಬ್ಬಂದಿ ಸಾವು

Leave a Reply

Your email address will not be published. Required fields are marked *