BBMP
Loading ...

ಬೆಂಗಳೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳಲಿದ್ದು, ಡಿ.ಕೆ.ಶಿವಕುಮಾರ್‌ ಅವರು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಯಾದಗಿರಿ ಜಿಲ್ಲೆ ಗೋನಾಳ ಗ್ರಾಮದ ಗಡೇ ದುರ್ಗಾದೇವಿ ದೇಗುಲದ ಅರ್ಚಕ ಮಹಾದೇವಪ್ಪ ಪೂಜಾರಿ ಭವಿಷ್ಯ ನುಡಿದಿದ್ದಾರೆ.

ಸಿಎಂ ಆಗ್ತಾರೆ ಡಿಸಿಎಂ ಡಿ.ಕೆ.ಶಿವಕುಮಾರ್..? ಡಿಕೆಶಿ ಆರಾಧ್ಯ ದೈವದಿಂದ ಹೊರಬಿದ್ದ ಕಾರ್ಣಿಕ ನುಡಿ.. ಗಡೇ ದುರ್ಗಾದೇವಿ ಪೂಜಾರಿ ಕನಸು ವಾಣಿ ನಿಜವಾಗುತ್ತಾ..? ಗಡೇ ದುರ್ಗಾದೇವಿ ಪೂಜಾರಿ ಕನಸಿನಲ್ಲಿ ಡಿ.ಕೆ.ಶಿವಕುಮಾರ್ ರಾಜ್ಯದ ಸಿಎಂ ಆಗುವ ವಾಣಿ..! ಶಕ್ತಿ ದೇವತೆ ಗಡೇ ದುರ್ಗಾದೇವಿಯ ಪರಮ ಭಕ್ತನಾಗಿರುವ ಡಿಸಿಎಂ ಡಿಕೆಶಿಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿ ದೇವಸ್ಥಾನ.

ಗಡೇ ದುರ್ಗಾದೇವಿಯ ಆಶೀರ್ವಾದದಿಂದ ಡಿಕೆಶಿಗೆ ಒಲಿಯುತ್ತಾ ಸಿಎಂ ಸ್ಥಾನ..? ಐಟಿ, ಇಡಿ ಕೇಸ್ ನಲ್ಲಿ ಸಂಕಷ್ಟಕೀಡಾದಾಗ ಗಡೇ ದುರ್ಗಾದೇವಿ ಮೊರೆ ಹೋಗಿದ್ದ ಡಿಕೆಶಿ.. 29 ಜನವರಿ 2020 ರಂದು ಗಡೇ ದುರ್ಗಾದೇವಿ ಜಾತ್ರೆಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ ದೇವಸ್ಥಾನದ ಅರ್ಚಕ ಮಾಹಾದೇವಪ್ಪ ಪೂಜಾರಿಯಿಂದ ಅಚ್ಛರಿ ವಾಣಿ ಸಂಕಷ್ಟದಿಂದ ಪಾರು ಮಾಡಿ, ರಾಜಕೀಯದಲ್ಲಿ ಉನ್ನತ ಸ್ಥಾನ ದೊರೆಯುವಂತೆ ಪತ್ರ ಬರೆದು ಪೂಜೆ ಸಲ್ಲಿಸಿದ್ದ ಡಿಕೆಶಿ.

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಇಬ್ಬರಿಗೆ ಸಿಎಂ ಸ್ಥಾನ ಎಂದು ಭವಿಷ್ಯ ನುಡಿದಿದ್ದ ಪೂಜಾರಿ..! ಮೊದಲನೇ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗ್ತಾರೆ ಎರಡನೇ ಅವಧಿಗೆ ಡಿಕೆ ಶಿವಕುಮಾರ್ ಸಿಎಂ ಎಂದು ಭವಿಷ್ಯ ನುಡಿದಿದ್ದ ಮಹಾದೇವಪ್ಪ ಪೂಜಾರಿ ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಚರ್ಚೆ ನಡುವೆ ಡಿಕೆಶಿ ಸಿಎಂ ಆಗುವ ಭವಿಷ್ಯ ವಾಣಿ.

ಡಿಕೆ ಶಿವಕುಮಾರ ಅವ್ರ ಬೆನ್ನಿಗೆ ನಿಂತ ಶಕ್ತಿ ದೇವತೆ ಗಡೆ ದುರ್ಗಮ್ಮದೇವಿ. ಹಲವು ಭಾರಿ ದೇವಸ್ಥಾನಕ್ಕೆ ಬೇಟಿ ನೀಡಿ ಆರ್ಶಿವಾದ ಪಡೆದು ಉನ್ನತ ಸ್ಥಾನ ಪಡೆದ ಡಿಕೆಶಿ. ಗಿರಿನಾಡಿನ ಶಕ್ತಿದೇವತೆಯ ಡಿಕೆಶಿ ಅಪಾರ ಭಕ್ತಿ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಶೀಘ್ರವೇ ನಟ ದರ್ಶನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ : ಬಿ.ದಯಾನಂದ್

Leave a Reply

Your email address will not be published. Required fields are marked *