BBMP
Loading ...

CP Radhakrishna

Greater Bengaluru News9: ಮಾಜಿ ಉಪರಾಷ್ಟ್ರಪತಿ ಜಗದೀಪ್​ ಧನಕರ್​ ಅವರ ರಾಜೀನಾಮೆಯಿಂದ ತೆರುವಾಗಿದ್ದ ಉಪ-ರಾಷ್ಟ್ರಪತಿ ಹುದ್ದೆಗೆ ಇಂದು(ಸೆ.9) ಬೆಳಿಗ್ಗೆ ಮತದಾನ ನಡೆದಿದ್ದು, ಎನ್​ಡಿಎ ಮೈತ್ರಿಕೂಟದ ಅಭ್ಯರ್ಥಿ ಸಿ.ಪಿ.ರಾಧಕೃಷ್ಣನ್​ ಗೆಲುವು ಸಾಧಿಸಿದ್ದಾರೆ. ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ನ್ಯಾ.ಸುದರ್ಶನ ರೆಡ್ಡಿ ಕಣಕ್ಕಿಳಿದಿದ್ದರು.

ಇಂದು ಸಂಜೆ 5 ಗಂಟೆಗೆ ಉಪರಾಷ್ಟ್ರಪತಿ ಚುನಾವಣೆಯ ಮತದಾನ ಮುಗಿದಿದ್ದು, ಸಂಜೆ 6 ಗಂಟೆಗೆ ಎಣಿಕೆ ಆರಂಭವಾಯಿತು. ಎನ್​ಡಿಎ ಮೈತ್ರಿಕೂಟದಿಂದ ರಾಧಾಕೃಷ್ಣನ್ ಮತ್ತು ಇಂಡಿಯಾ ಮೈತ್ರಿಕೂಟದಿಂದ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅಖಾಡದಲ್ಲಿದ್ದರು. ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಖರ್ ರಾಜೀನಾಮೆ ಕೊಟ್ಟ ಕಾರಣ ಈ ಚುನಾವಣೆ ಅನಿವಾರ್ಯವಾಯಿತು.

ದೆಹಲಿಯ ಹೊಸ ಸಂಸತ್ ಕಟ್ಟಡದಲ್ಲಿ ಸ್ಥಾಪಿಸಲಾದ ‘ಎಫ್-101 ವಸುಧಾ’ ಮತಗಟ್ಟೆಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಮತದಾನ ಪ್ರಾರಂಭವಾಯಿತು. ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ನಂತರದಲ್ಲಿ ಸಂಸತ್ತಿನ ಉಭಯ ಸದನಗಳ ಸದಸ್ಯರು ಮತ ಹಾಕಿದರು.

Leave a Reply

Your email address will not be published. Required fields are marked *