BBMP
Loading ...

Nandini

ಬೆಂಗಳೂರು : ಬೀದಿಬದಿಯ ವ್ಯಾಪಾರಿಗಳು ಸೇರಿದಂತೆ ಅಂಗಡಿ ಮುಗ್ಗಟ್ಟುಗಳ ಮಾಲೀಕರಿಗೆ ಕಮರ್ಷಿಯಲ್ ಡಿಪಾರ್ಟ್ಮೆಂಟ್ ಇತ್ತೀಚಿಗೆ ಲಕ್ಷಗಟ್ಟಲೆ, ಕೋಟಿಗಟ್ಟಲೆ ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ನೀಡಿತ್ತು. ಇದೀಗ ಬೆಂಗಳೂರಿನ ಉಲ್ಲಾಳದ ನಂದಿನಿ ಬೂತ್ ಮಾಲೀಕರೊಬ್ಬರಿಗೆ ಬರೋಬ್ಬರಿ 1 ಕೋಟಿ 3 ಲಕ್ಷ ರೂ. ತೆರಿಗೆ ಪಾವತಿ ಸಂಬಂಧ ನೋಟಿಸ್ ನೀಡಲಾಗಿದೆ.

ಹೌದು, ಬೆಂಗಳೂರಿನ ಉಲ್ಲಾಳದ ನಂದಿನಿ ಬೂತ್ ಮಾಲೀಕರಾಗಿರುವ ರವಿ ಅವರಿಗೆ ರು. 1 ಕೋಟಿ 3 ಲಕ್ಷ ತೆರಿಗೆ ಪಾವತಿ ಸಂಬಂಧ ನೋಟಿಸ್ ಬಂದಿದೆ. ಇತ್ತೀಚೆಗೆ ಜಿಎಸ್ಟಿ ಸಂಬಂಧಿತ ನೋಟಿಸ್ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಣ್ಣಮಧ್ಯಮ ವ್ಯಾಪಾರಿಗಳು ಆತಂಕಗೊಂಡಿದ್ದಾರೆ.

ತೆರಿಗೆ ಇಲಾಖೆಯ ನೋಟಿಸ್ ಪ್ರಕಾರ, ನಗರದಲ್ಲಿನ ನಂದಿನಿ ಬೂತ್ಗಳನ್ನು ವಾಣಿಜ್ಯ ಪ್ರಸ್ಥಾಪನೆಗಳಾಗಿ ಪರಿಗಣಿಸಿ ಜಿಎಸ್ಟಿ ಸೇರಿದಂತೆ ವಿವಿಧ ತೆರಿಗೆಗಳನ್ನು ವಿಧಿಸಲಾಗಿದೆ. ಬಾರ್ಗಳು ಮತ್ತು ಬೂತ್ಗಳ ಮೇಲೆ ಹೊಸದಾಗಿ ನಿಯಮ ಜಾರಿಗೆ ತಂದ ಹಿನ್ನೆಲೆಯಲ್ಲಿ ಈ ಬಗೆಯ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ವಾಣಿಜ್ಯ ತೆರಿಗೆ ನೋಟಿಸ್ ಗೆ ಬೆಂಗಳೂರಿನ ಕೆರಳಿದ ವರ್ತಕರು, ಸರಕಾರದ ವಿರುದ್ಧ ಹೋರಾಟಕ್ಕೆ ವ್ಯಾಪಾರಿಗಳು ಇದೀಗ ಸಿದ್ಧತೆ ಮಾಡಿಕೊಂಡಿದ್ದಾರೆ. ಜುಲೈ 25ಕ್ಕೆ ಅಂಗಡಿ ಬಂದಿದೆ ವರ್ತಕರು ನಿರ್ಧರಿಸಿದ್ದಾರೆ. ಜುಲೈ 23 24 ಬಂದಿದೆ ಜುಲೈ 25ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಬೆಂಗಳೂರಲ್ಲಿ ಆನ್ಲೈನ್ ಪೇಮೆಂಟ್ ವಿರುದ್ಧ ವ್ಯಾಪಾರಿಗಳು ಇದೀಗ ಸಮರ ಸಾರಿದ್ದು ಫೋನ್ ಪೇ ಮತ್ತು ಗೂಗಲ್ ಪೇ ಯಾವುದು ಬೇಡ ಓನ್ಲಿ ಕ್ಯಾಶ್ ತೆಗೆದುಕೊಂಡು ಬನ್ನಿ, ಡಿಜಿಟಲ್ ವಹಿವಾಟು ಬೇಡ ಅಂತ ವ್ಯಾಪಾರಿಗಳು ಇದೀಗ ಗ್ರಾಹಕರಿಗೆ ತಿಳಿಸಿದ್ದಾರೆ. ನಗದು ವ್ಯವಹಾರದ ವರ್ತಕರು ಮುಖ ಮಾಡುತ್ತಿದ್ದಾರೆ. ಬೇಕರಿ ಟೀ ಶಾಪ್ ಗಳಲ್ಲಿ ಕ್ಯೂ ಆರ್ ಕೋಡ್ ಮಾಯವಾಗಿದ್ದು, ಕರ್ನಾಟಕ ಕಮರ್ಷಿಯಲ್ ಟ್ಯಾಕ್ಸ್ ನೋಟಿಸ್ ಗೆ ವರ್ತಕರು ಇದೀಗ ಸೆಡ್ಡು ಹೊಡೆದಿದ್ದಾರೆ. ಆನ್ಲೈನ್ ವ್ಯವಹಾರಕ್ಕೆ ವ್ಯಾಪಾರಿಗಳು ಗುಡ್ ಬೈ ಸಹ ಹೇಳಿದ್ದಾರೆ.

ಬಿ ರಿಪೋರ್ಟ್ ಸಲ್ಲಿಸಲು 1.25 ಲಕ್ಷ ರೂ. ಹಣ ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಮಹಿಳಾ ಪಿಎಸ್ಐ

Leave a Reply

Your email address will not be published. Required fields are marked *