BBMP
Loading ...

Vidhana Soudha

ಬೆಂಗಳೂರು: 2024ರ ಡಿಸೆಂಬರ್​ 17 ರಂದು ಸವೋಚ್ಚ ನ್ಯಾಯಲಯದ ಆದೇಶದನ್ವಯ ರಾಜ್ಯದಾದ್ಯಂತ ಎಲ್ಲಾ ವಿದ್ಯುತ್ ಸರಬರಾಜು ಕಂಪೆನಿಗಳು ದಿನಾಂಕ 04.04.2025 ರಂದು ನೀಡುತ್ತಿರುವ ಸೇವೆಗಳಾದ ತಾತ್ಕಾಲಿಕ / ಶಾಶ್ವತ ಎಲ್.ಟಿ/ ಹೆಚ್.ಟಿ ಸಂಪರ್ಕಗಳಾದ ಬಹುಮಹಡಿ / ವಾಣಿಜ್ಯ, ವಸತಿ /ಕೈಗಾರಿಕಾ, ಕಟ್ಟಡಗಳಿಗೆ ವಿದ್ಯುತ್ ಮಂಜೂರಾತಿಗೊಂಡ ಕಡತಗಳು ಬಾಕಿ ಇರುವ ಹಿನ್ನೆಲೆಯಲ್ಲಿ ರಾಜ್ಯದ ಬಡ / ಮಧ್ಯಮ ವರ್ಗದ ಗ್ರಾಹಕರಿಗೆ ಅನಾನುಕೂಲವಾಗುತ್ತಿರುವುದರಿಂದ ಸ್ಥಗಿತಗೊಳಿಸಿರುವ ಸುಮಾರು 3 ರಿಂದ 4 ಲಕ್ಷದ ಅಧಿಕ ಕಡತಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಇಂಧನ ಇಲಾಖೆಗೆ ನಿರ್ದೇಶನ ನೀಡುವಂತೆ ನ್ಯಾಯಮೂರ್ತಿ ಹೆಚ್​.ಎನ್​. ನಾಗಮೋಹನ ದಾಸ್​ ವಿಚಾರಣಾ ಆಯೋಗ ಶಿಫಾರಸು ಮಾಡಿದೆ.

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿ ಪತ್ರದ ಪ್ರತಿಯನ್ನು ವಿಚಾರಣಾ ಆಯೋಗಕ್ಕೆ ಸಲ್ಲಿಸಿದ್ದರು. ಮನವಿ ಪತ್ರದಲ್ಲಿ ಇರುವಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡಿರುವ ಆದೇಶದ ಅನ್ವಯ ದಿನಾಂಕ:04.04.2025 ರಂದು ಕರ್ನಾಟಕ ಘನ ಸರ್ಕಾರವು ಹೊರಡಿಸಿರುವ ಸುತ್ತೋಲೆಯ ಅನುಸಾರ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ಸ್ವಾಧೀನಾನುಭವ ಪ್ರಮಾಣ ಪತ್ರವಿಲ್ಲದ ಬಹುಮಹಡಿ /ವಾಣಿಜ್ಯ, ವಸತಿ / ಕೈಗಾರಿಕಾ, ಕಟ್ಟಡಗಳಿಗೆ ತಾತ್ಕಾಲಿಕ / ಶಾಶ್ವತ ಎಲ್.ಟಿ/ ಹೆಚ್.ಟಿ ಸಂಪರ್ಕಗಳಾದ ವಿದ್ಯುತ್ ಸಂಪರ್ಕ ಸೇವೆಗಳಿಗೆ ಠೇವಣಿಯನ್ನು 3 ರಿಂದ 4 ಲಕ್ಷ ಸಂಪರ್ಕ ಸೇವೆಗೆ ಪಾವತಿಸಿಕೊಂಡಿದ್ದು, ವಿದ್ಯುತ್ ಸಂಪರ್ಕವನ್ನು ನೀಡುವುದನ್ನು ಸ್ಥಗಿತಗೊಳಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬಡ / ಮಧ್ಯಮ ವರ್ಗದ ಗ್ರಾಹಕರಿಗೆ ಅನಾನುಕೂಲವಾಗುತ್ತಿದ್ದು, ವಿಶೇಷವಾಗಿ ಮಕ್ಕಳ ವಿದ್ಯಾಭ್ಯಾಸ, ಗ್ರಾಮೀಣ ಪ್ರದೇಶದ ಅಭಿವೃದ್ಧಿ, ಸಣ್ಣ ಪುಟ್ಟ ವ್ಯಾಪರಸ್ಥರಿಗೆ ಮತ್ತು ಕೈಗಾರಿಕೋದ್ಯಮಗಳಿಗೆ ಅನಾನುಕೂಲ ಉಂಟಾಗಿರುತ್ತದೆ ಹಾಗೂ ಈ ಸಂಬಂಧವಾಗಿ ಸರ್ಕಾರದ ಮಟ್ಟದಲ್ಲಿ ಹಲವಾರು ಮನವಿಗಳನ್ನು ಸಲ್ಲಿಸಿರುವುದಾಗಿ ಮನವಿ ಪತ್ರದಲ್ಲಿ ತಿಳಿಸಿರುತ್ತಾರೆ. ಸಾರ್ವಜನಿಕರ ಮತ್ತು ರಾಜ್ಯದ ಪ್ರಗತಿಯ ಹಿತದೃಷ್ಟಿಯಿಂದ ಸದರಿ ಮನವಿ ಪತ್ರದ ಮೇಲೆ ಸಂಬಂಧಪಟ್ಟ ಇಲಾಖೆಯು ಜರೂರು ಕ್ರಮ ವಹಿಸಲು ತಾವುಗಳು (ಮುಖ್ಯಮಂತ್ರಿಗಳು) ನಿರ್ದೇಶಿಸಬೇಕೆಂದು ತಮ್ಮನ್ನು ಕೋರಲು ಗೌರವಾನ್ವಿತ ನ್ಯಾಯಮೂರ್ತಿಗಳಿಂದ ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ನಾಗಮೋಹನ ದಾಸ್​ ವಿಚಾರಣಾ ಆಯೋಗ ಶಿಫಾರಸು ಮಾಡಿದೆ.

ಗುತ್ತಿಗೆದಾರರ ಸಂಘದ ಮನವಿ ಪತ್ರದಲ್ಲಿ ಏನಿತ್ತು?
ಮಾನ್ಯ ಸರ್ವೋಚ್ಚ ನ್ಯಾಯಾಲದ ಆದೇಶದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದವರ ಆದೇಶದಂತೆ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ದಿನಾಂಕ 04.04.2025 ರಂದು ಸರ್ಕಾರ ಸುತ್ತೋಲೆ ಹೊರಡಿಸಿರುವುದರಿಂದ ಸರ್ವೋಚ್ಚ ನ್ಯಾಯಾಲಯದ ಆದೇಶ ಬರುವುದಕ್ಕಿಂತ ಹಿಂದೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣದ ನಿಯಮಾಗಳ ಅನುಸಾರವಾಗಿ ಗ್ರಾಹಕರು ವಿದ್ಯುತ್ ಸಂಪರ್ಕ ಸೇವೆಗಳಾದ ತಾತ್ಕಾಲಿಕ/ಶಾಶ್ವಾಸ, ಎಲ್.ಟಿ/ಹೆಚ್.ಟಿ. ಹಾಗೂ ಬಹುಮಹಡಿ/ವಾಣಿಜ್ಯ/ವಸತಿ/ಕೈಗಾರಿಕೆ ಕಟ್ಟಡಗಳಿಗೆ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸಂಭಂದಿಸಿದ ಎಲ್ಲಾ ವಿಭಾಗಗಳಲ್ಲಿ ಮತ್ತು ಉಪವಿಭಾಗದಲ್ಲಿ ಸುಮಾರು 3 ರಿಂದ 4 ಲಕ್ಷಗ್ರಾಹಕರು ಅರ್ಜಿಗಳನ್ನು ನೊಂದಣಿ ಮಾಡಿ ವಿದ್ಯುತ್ ಮಂಜೂರಾತಿಯನ್ನು ಪಡೆದಿರುವುದಲ್ಲದೆ ಮಂಜೂರಾತಿ ಪತ್ರದಲ್ಲಿ ಸೂಚಿಸಿರುವುಂತೆ ಠೇವಣಿಗಳನ್ನು ಪಾವತಿಸಿಕೊಂಡು ಕಾರ್ಯದೇಶಗಳನ್ನು ಪಡೆದು ಹಲವಾರ ಗ್ರಾಹಕರು ಕಟ್ಟಡಕ್ಕೆ ಅವರ ವಿದ್ಯುತ್ ಮಂಜೂರಾತಿ ಲೋಡ್ ನ ಅನುಗುಣವಾಗಿ ಕಟ್ಟಡಗಳ ಆವರಣದ ಒಳಗಡೆ ಸ್ವ-ಕಾರ್ಯಯೋಜನೆಯಡಿಯಲ್ಲಿ ವಿದ್ಯುತ್ ಪರಿವರ್ತಕಗಳು ಅಗತ್ಯವಿರುವ ವಿದ್ಯುಧಿಕರಣ ಮಾಡಿ ವಿದ್ಯುತ್ ಸಂಪರ್ಕವಿಲ್ಲದ ಸಂಕಷ್ಟದಲ್ಲಿರುವದಲ್ಲದೆ ಬ್ಯಾಂಕುಗಳಿಂದ ಸಾಲ ಪಡೆದು ಸಾಲ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಬೇರೆ-ಬೇರೆ ಜಿಲ್ಲೆಗಳು/ತಾಲ್ಲೂಕುಗಳು/ಗ್ರಾಮಗಳು/ಹಳ್ಳಿಗಳಿಂದ ಮಧ್ಯಮ/ಬಡವರು/ನಿರ್ಗತಿಕರು ತಮ್ಮ ಸ್ವಂತ ಊರುಗಳಲ್ಲಿ ಕೆಲಸಗಳಿಲ್ಲದೆ ದುಡಿಮೆಗಳನ್ನು ಅವಲಂಬಿಸಿ ನಗರಕ್ಕೆ ಬಂದಿರುವ ಕುಟುಂಬಗಳು ದುಡಿದಿರುವ ಹಣದಲ್ಲಿ ಕಡಿಮೆ ದರದಲ್ಲಿ ನಿವೇಶನ ಪಡೆದು ಸ್ವಂತ ಮನೆಯನ್ನು ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸ ಮಾಡುವುದು ಕಷ್ಟಕರವಾಗಿದೆ ಮತ್ತು ಬದುಕು ದುಸ್ಥರವಾಗಿದೆ. ಮುಂದುವರೆದು ರಾಜ್ಯದ ವಿವಿಧ ಜಿಲ್ಲೆಗಳು/ಪಟ್ಟಣಗಳಲ್ಲಿ ಹೊಸದಾಗಿ ಪ್ರಾರಂಭಿಸುವ ಸಣ್ಣ ಮತ್ತು ಮಧ್ಯಮದ ಕೈಗಾರಿಕೆಗಳಿಗೂ ವಿದ್ಯುತ್ ಸಂಪರ್ಕಗಳಿಲ್ಲದೆ ತೊಂದರೆ ಅನುಭವಿಸುವದಲ್ಲದೆ ಸಾವಿರಾರು ಕಾರ್ಮಿಕರಿಗೆ ಕೆಲಸವಿಲ್ಲದ ಕುಟುಂಬಗಳು ಬೀದಿಗೆ ಬರುವಂತಾಗಿದೆ. ರೈತರು ಜಮೀನುಗಳಲ್ಲಿ ಮನೆ ನಿರ್ಮಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಬೆವಿಕಂ ಕಛೇರಿಗಳಿಗೆ ಆರ್ಜಿ ಸಲ್ಲಿಸಿದರೆ ಸಂಬಂಧಿಸಿದ ಗ್ರಾಮಾ ಪಂಚಯಿತಿಗಳಿಂದ ಸ್ವಾಧೀನಾನುಭವ ಪ್ರಮಾಣ ಪತ್ರ ಲಗತ್ತಿಸಿದರೆ ಮಾತ್ರ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂಬುದಾಗಿ ಸಂಬಂಧಿಸಿದ ಅಧಿಕಾರಿಗಳು ಅರ್ಜಿಗಳನ್ನು ತಿರಸ್ಕೃತಗೊಳಿಸುತ್ತಿರುವುದರಿಂದ ವಿದ್ಯುತ್ ಸಂಪರ್ಕವಿಲ್ಲದೆ ಗ್ರಾಮೀಣ ಮತ್ತು ಹಳ್ಳಿಗಳಲ್ಲಿ ರೈತರ ಮಕ್ಕಳು ವಿದ್ಯಾಭ್ಯಾಸವಿಲ್ಲದೆ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಯಿಂದ ರಾಜ್ಯದ ಎಲ್ಲಾ ಸಾರ್ವಜನಿಕರಿಗೂ ಕಟ್ಟಡ ಸಾಮಾಗ್ರಿಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಗೂ, ವಿದ್ಯುತ್ ಸರಬರಾಜು ಕಂಪನಿಗಳಿಗೂ ಹಾಗೂ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಅನುಭವಿಸುವಂತಾಗಿದೆ. ಈಗಾಗಲೇ ಇದರ ಸಂಬಂಧವಾಗಿ ಸರ್ಕಾರದ ಮಾನ್ಯ ಉಪಮುಖ್ಯಂತ್ರಿಗಳಾದ ಶ್ರೀಯುತ ಡಿ ಕೆ ಶಿವಕುಮಾರ್ ರವರಿಗೂ ಮತ್ತು ಸರ್ಕಾರದ ಇಂಧನ ಸಚಿವರಾದ ಕೆ.ಜೆ. ಜಾರ್ಜ್​ ರವರಿಗೂ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೂ ಇಂಧನ ಇಲಾಖೆ ಅಪರ ಮುಖ್ಯ ಹಾಗೂ ಬೆವಿಕಂ ವ್ಯವಸ್ಥಾಪಕ ಸಮಸ್ಯೆಯನ್ನು ಪರಿಹರಿಸುವಂತೆ ಪತ್ರ ಮುಖೇನ ಮನವಿ ಮಾಡಲಾಗಿದೆ. ನಿರ್ದೇಶಕರಿಗೂ ಮಾನ್ಯ ಜನಪ್ರಿಯ ಮುಖ್ಯಮಂತ್ರಿಗಳು ತಾವುಗಳು ರೈತರ ಕುಟುಂಬದಿಂದ ಬಂದಿರುವುದರಿಂದ ಎಲ್ಲಾ ವರ್ಗದ ಜನಗಳ ಕಷ್ಟಗಳನ್ನು ಬಗೆಹರಿಸಿರುವ ಅನುಭವಿಗಳು ಆಗಿರುತ್ತೀರಿ. ಇತಿಹಾಸದಲ್ಲಿ ರಾಜ್ಯದಲ್ಲಿ ಇದುವರೆಗೂ ಈ ತರಹದ ಕಷ್ಟ ಬಂದಿರಲಿಲ್ಲ. ಈಗಾಗಲೆ ಕಳೆದ ಐದು ತಿಂಗಳಿನಿಂದ ಈ ಸಮಸ್ಯೆಯಿಂದ ವಿದ್ಯುತ್ ಗುತ್ತಿಗೆದಾರರಿಗೆ ಮತ್ತು ಗುತ್ತಿಗೆದಾರರ ಬಳಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಮತ್ತು ಅವರ ಕುಟುಂಬಗಳು ಹಾಗೂ ಕಟ್ಟಡ ಕಾಮಗಾರಿ ನಿರ್ವಹಿಸುವ ಕಾರ್ಮಿಕರು ಮತ್ತು ಅವರ ಕುಟುಂಬಗಳು ಕೆಲಸವಿಲ್ಲದೆ ಬೀದಿಗೆ ಬರವಂತಾಗಿದೆ. ಮಾನ್ಯರಾದ ತಾವುಗಳು ನಮ್ಮಗಳ ಮನವಿಯನ್ನು ಪುರಸ್ಕರಿಸಿ ಈಗಾಗಲೆ ವಿದ್ಯುತ್ ಸಂಪರ್ಕ ನೀಡುವಂತೆ ಕೋರಿರುವ ಅರ್ಜಿಗಳಿಗೂ ಹಾಗೂ ಮಂಜೂರಾತಿಗೊಂಡು ಠೇವಣಿಯನ್ನು ಪಾವತಿಸಿಕೊಂಡಿರುವ ಅರ್ಜಿಗಳ ಕಡತಗಳಿಗೂ ಕಾರ್ಯದೇಶ ಪಡೆದು ಸ್ವ-ಕಾರ್ಯಯೋಜೆನೆಯಡಿಯಲ್ಲಿ ಪರಿವರ್ತಗಳನ್ನು ಅಳವಡಿಸಿ ವಿದ್ಯುಧಿಕರಣ ಮಾಡಿಕೊಂಡಿರುವ ವಿವಿಧ ಹಂತಗಳಲ್ಲಿರುವ ಕಡತಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಸಂಬಂಧಿಸಿದ ಕರ್ನಾಟಕ ವಿದ್ಯುಚ್ಛಕ್ತಿ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೂ ಸೂಕ್ತವಾದ ನಿರ್ಧೇಶನ ನೀಡುವುದರೊಂದಿಗೆ ರಾಜ್ಯದ ಎಲ್ಲಾ ವರ್ಗದ ಜನರಿಗೂ ಮತ್ತು ಗ್ರಾಹಕರಿಗೂ ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಗುತ್ತಿಗೆದಾರರ ಸಂಘ ಸುದೀರ್ಘ ಪತ್ರ ಬರೆದಿದ್ದರು.

ಬಿ-ಖಾತಾ ಆಸ್ತಿದಾರರಿಗೆ ಮತ್ತೊಂದು ಬಿಕ್ಕಟ್ಟು: ಸುಪ್ರೀಂ ತೀರ್ಪಿನಿಂದ ಮೂಲಸೌಲಭ್ಯಗಳಿಗೆ ತಡೆ!

Leave a Reply

Your email address will not be published. Required fields are marked *