BBMP
Loading ...

Mysuru Sandal

ಶ್ರೀಗಂಧದ ಪರಿಮಳವನ್ನು ಸೂಸುವ ಮೈಸೂರು ಸೋಪ್ ತಯಾರಿಕೆಯಲ್ಲಿ ಈಗಾಗಲೇ ಹೆಸರು ಮಾಡಿರುವ ಕೆಎಸ್‌ ಮತ್ತು ಡಿಎಲ್ ಈಗ ದೇಶದ ದುಬಾರಿ ಸೋಪ್ ತಯಾರಿಕೆಗೆ ಪ್ಲಾನ್ ರೂಪಿಸಿದೆ. ಇದಿಷ್ಟೇ ಅಲ್ಲ, ಮೈಸೂರು ಸ್ಯಾಂಡಲ್ ಸೋಪ್‌ ಅನ್ನು ನಕಲು ಮಾಡುವವರಿಗೆ ಚಾಟಿಯೇಟು ಬೀಸಲು ನಯಾ ಯೋಜನೆ ರೂಪಿಸಿದೆ.

ಮೈಸೂರು ಸ್ಯಾಂಡಲ್ ಸೋಪ್ ಈಗಾಗಲೇ ಕರ್ನಾಟಕದಲ್ಲಿ ಎಲ್ಲರ ಫೇವರಿಟ್. ಶ್ರೀಗಂಧದ ಪರಿಮಳದ ಸೋಪ್ ಹೊರ ರಾಜ್ಯ ಹಾಗೂ ವಿದೇಶದಲ್ಲಿಯೂ ಕಮಾಲ್ ಮಾಡಿದೆ. ಈಗ ಕೆಎಸ್‌ ಮತ್ತು ಡಿಎಲ್ ಭಾರತದಲ್ಲಿಯೇ ದುಬಾರಿ ಸೋಪ್ ತಯಾರಿಕೆಯ ಪ್ಲಾನ್ ರೂಪಿಸಿದ್ದು ಇನ್ನೆರಡು ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಶ್ರೀಗಂಧದ ಎಣ್ಣೆಯನ್ನು ಹೆಚ್ಚು ಬಳಸಿ ಉತ್ಕೃಷ್ಟ ಗುಣಮಟ್ಟದ ಮೈಸೂರು ಸ್ಯಾಂಡಲ್ ಸೋಪ್ ಮಾರುಕಟ್ಟೆಗೆ ಬರಲಿದೆ. ಒಂದು ಸೋಪ್ ಬೆಲೆ ಬರೋಬ್ಬರಿ 4 ಸಾವಿರ ರೂಪಾಯಿ ಇದರಲಿದೆ. ಇದನ್ನು ವಿದೇಶಕ್ಕೆ ಕಳಿಸುವ ಉದ್ದೇಶದಿಂದ ಈ ಪ್ಲಾನ್ ರೂಪಿಸಿಲಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ 5 ಸಾಬೂನಿನ ಪ್ಯಾಕೆಟ್​ 4 ಸಾವಿರಕ್ಕೆ ಲಭ್ಯವಿದೆ. ಆದರೆ, ಮುಂದಿನ ದಿನಗಳಲ್ಲಿ 1 ಸಾಬೂನಿಗೆ 4 ಸಾವಿರ ರೂ ಇರಲಿದೆ.

ಮೈಸೂರು ಸ್ಯಾಂಡಲ್ ಸೋಪ್ ಅನ್ನು ನಕಲು ಮಾಡಿ ಮಾರಾಟ ಮಾಡುವ ವ್ಯವಸ್ಥಿತ ಜಾಲವೂ ಹೊರರಾಜ್ಯದಲ್ಲಿ ಹೆಚ್ಚಾಗಿದ್ದು ಇದಕ್ಕೆ ಕಡಿವಾಣ ಹಾಕಲು ನಿಗಮ ಮುಂದಾಗಿದೆ. 15 ದಿನದಲ್ಲಿ ಸೋಪ್‌ಗಳಿಗೆ ವಿಶೇಷವಾಗಿ ಕ್ಯೂಆರ್ ಕೋಡ್ ಜಾರಿಯಾಗಲಿದೆ. ನಕಲಿ ಅಸಲಿ ಪ್ರಾಡೆಕ್ಟ್​​ಗಳ ವಿವರ ಇದರಿಂದ ಗೊತ್ತಾಗಲಿದೆ. ಅಲ್ಲದೇ ಈ ನಕಲಿ ಜಾಲದ ಮೇಲೆ ಕಣ್ಣಿಡಲು ಟೀಮ್ ಕೂಡ ರಚನೆಯಾಗಿದೆ.

ಈ ರೀತಿಯ ನಯಾ ಪ್ಲಾನ್‌ಗಳಿಗೆ ಕೆಎಸ್‌ ಮತ್ತು ಡಿಎಲ್ ಹೆಚ್ಚು ವಹಿವಾಟು ಮಾಡಿ ಲಾಭದ ಹಾದಿಯಲ್ಲಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಟಾರ್ಗೆಟ್ ಮೀರಿ ಲಾಭದಲ್ಲಿದೆ. ಇದರ ಮಧ್ಯೆ ದೇಶದ ದುಬಾರಿ ಸೋಪ್ ತಯಾರಿಕೆಯಿಂದನೂ ಭರ್ಜರಿ ಲಾಭದ ನಿರೀಕ್ಷೆಯಲ್ಲಿರುವುದು ಸುಳ್ಳಲ್ಲ.

ಜಲಮಂಡಳಿ, ಬೆಸ್ಕಾಂ ಕಚೇರಿಗಳಲ್ಲಿ ಲೋಕಾ ಶೋಧದ ವೇಳೆ 7.11 ಲಕ್ಷ ರೂ. ವಶ: ವಿಜಯನಗರ ಜಲಮಂಡಳಿ ಕಚೇರಿಯಲ್ಲಿ 66,800 ರೂ. ಸೀಜ್

Leave a Reply

Your email address will not be published. Required fields are marked *