BBMP
Loading ...

Earthqake

ಮ್ಯಾನ್ಮಾರ್‌ನಲ್ಲಿ ಶುಕ್ರವಾರ ನಡೆದ 7.7 ತೀವ್ರತೆಯ ಭೂಕಂಪದ ನಂತರ ಅಲ್ಲಿ ಪಾರುಗಾಣಿಕಾ ಪ್ರಯತ್ನಗಳು ಮುಂದುವರಿದೆ. ಸಾವಿನ ಸಂಖ್ಯೆ 1,644 ಕ್ಕೆ ಏರಿಕೆಯಾಗಿದೆ. ಗಾಯಗೊಂಡವರ ಸಂಖ್ಯೆ 3,408 ಕ್ಕೆ ಏರಿಕೆಯಾಗಿದೆ. ಕನಿಷ್ಠ 139 ಇತರರು ಕಾಣೆಯಾಗಿದ್ದು, ಅವರ ಶೋಧ ನಡೆದಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ನಡುವೆ, ಮ್ಯಾನ್ಮಾರ್‌ನ ಸೇನಾಡಳಿತದ ಜತೆಗೆ ಸಂಘರ್ಷ ನಡೆಸುತ್ತಿದ್ದ ನ್ಯಾಷನಲ್ ಯೂನಿಟಿ ಗವರ್ನಮೆಂಟ್‌ ಶನಿವಾರ ಏಕಪಕ್ಷೀಯ ಕದನ ವಿರಾಮ ಘೋಷಿಸಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾಗುವುದಾಗಿ ತಿಳಿಸಿದೆ. ಆಂಗ್‌ ಸಾನ್ ಸುಕಿ ಅವರ ಸರಕಾರವನ್ನು ಪದಚ್ಯುತಗೊಳಿಸಿದ ಬಳಿಕ 2021ರ ಫೆಬ್ರವರಿಯಿಂದ ಮ್ಯಾನ್ಮಾರ್ ಸೇನೆಯು ನಾಗರಿಕ ಕ್ರಾಂತಿಯನ್ನು ಎದುರಿಸುತ್ತಿದೆ. ಪೀಪಲ್ಸ್ ಡಿಫೆನ್ಸ್ ಫೋರ್ಸ್‌ ಮತ್ತು ಜನಾಂಗೀಯ ಸಶಸ್ತ್ರ ಪಡೆಗಳ ವಿರೋಧವನ್ನು ಎದುರಿಸುತ್ತಿದ್ದು ಫೈಟಿಂಗ್ ನಡೆಸುತ್ತ ಬಂದಿದೆ. ಮ್ಯಾನ್ಮಾರ್ ಭೂಕಂಪದ ಬಳಿಕ ಇದುವರೆಗೆ ನಡೆದ ಪ್ರಮುಖ 10 ವಿದ್ಯಮಾನಗಳು ಹೀಗಿವೆ

ಮ್ಯಾನ್ಮಾರ್ ಭೂಕಂಪ ಸಾವು-ನೋವು: ಮ್ಯಾನ್ಮಾರ್‌ನಲ್ಲಿ ಶುಕ್ರವಾರ ಭೂಕಂಪ ಸಂಭವಿಸಿದ ಬಳಿಕ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಸಾವಿನ ಸಂಖ್ಯೆ 1,644ಕ್ಕೆ ಏರಿಕೆಯಾಗಿದೆ. ಗಾಯಗೊಂಡವರ ಸಂಖ್ಯೆ 2,408ಕ್ಕೆ ಏರಿದ್ದು, ಕನಿಷ್ಠ 139 ಜನ ನಾಪತ್ತೆಯಾಗಿರುವ ಶಂಕೆ ಇದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಥೈಲ್ಯಾಂಡ್‌ನಲ್ಲಿ ಭೂಕಂಪ ಪರಿಣಾಮ: ಮ್ಯಾನ್ಮಾರ್‌ನಂತೆಯೇ ಥೈಲ್ಯಾಂಡ್‌ನಲ್ಲಿ ಕೂಡ ಭೂಕಂಪ ಸಂಭವಿಸಿದೆ. ಅಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. 1.7 ಕೋಟಿ ಜನಸಂಖ್ಯೆ ಇರುವ ಬ್ಯಾಂಕಾಕ್‌ ಪ್ರದೇಶದಲ್ಲಿ ಭೂಕಂಪ ಹಾನಿ ಉಂಟುಮಾಡಿತು. ಚತುಚಕ್‌ ಮಾರುಕಟ್ಟೆ ಸಮೀಪ ನಿರ್ಮಾಣ ಹಂತದ ಕಟ್ಟಡ ಕುಸಿದು ಕನಿಷ್ಠ 9 ಜನ ಮೃತಪಟ್ಟರು. 78 ಜನ ನಾಪತ್ತೆಯಾಗಿದ್ದಾರೆ.

ಭಾರತದ ಆಪರೇಷನ್‌ ಬ್ರಹ್ಮ: ಭಾರತೀಯ ಸೇನೆಯ ಫೀಲ್ಡ್ ಹಾಸ್ಪಿಟಲ್ ಯುನಿಟ್ 118 ಸದಸ್ಯರು ಎರಡು ಸಿ-17 ವಿಮಾನಗಳಲ್ಲಿ ಮ್ಯಾನ್ಮಾರ್‌ಗೆ ಹೋಗಿದ್ದಾರೆ. ಈ ವಿಮಾನಗಳಲ್ಲಿ 60 ಟನ್ ಪರಿಹಾರ ಸಾಮಗ್ರಿಗಳನ್ನು ಸಾಗಿಸಲಾಗಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್‌ ಈ ವಿಚಾರ ತಿಳಿಸಿದ್ದು, ಈ ಸೇನಾ ವೈದ್ಯಕೀಯ ಘಟಕವು ಮಹಿಳೆಯರು ಮತ್ತು ಮಕ್ಕಳ ಆರೈಕೆ ಸೇವೆಯ ಸಾಮಗ್ರಿಗಳನ್ನೂ ಒಳಗೊಂಡಿದೆ. ಇದಲ್ಲದೆ, ಸಿ-130 ವಿಮಾನದ ಮೂಲಕ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್‌)ಯ 38 ಸಿಬ್ಬಂದಿ, 10 ಟನ್ ಪರಿಹಾರ ಸಾಮಗ್ರಿಗಳನ್ನು ಕೊಂಡೊಯ್ದಿದೆ. 60 ಪ್ಯಾರಾಫೀಲ್ಡ್ ಅಂಬುಲೆನ್ಸ್‌ಗಳನ್ನೂ ಎರಡು ಸಿ- 17 ವಿಮಾನದ ಮೂಲಕ ಕಳುಹಿಸಲಾಗುತ್ತದೆ ಎಂದು ಹೇಳಿದರು.

ಬ್ರಿಟನ್‌ನಿಂದ 10 ದಶಲಕ್ಷ ಪೌಂಡ್ ನೆರವು: ಯುನೈಟೆಡ್ ಕಿಂಗ್ಡಂ ಶನಿವಾರ ಮಾನವೀಯ ನೆರವು ಎಂದು 10 ದಶಲಕ್ಷ ಪೌಂಡ್ (110.71 ಕೋಟಿ ರೂ) ನೆರವು ಪ್ರಕಟಿಸಿದೆ. ಭೂಕಂಪ ಪೀಡಿತ ಪ್ರದೇಶಗಳ ಜನರಿಗೆ ನೆರವು, ಪರಿಹಾರ ಕಾರ್ಯಾಚರಣೆಗೆ ಇನ್ನಷ್ಟು ಬೆಂಬಲ ನೀಡುವುದಾಗಿ ಬ್ರಿಟನ್ ಘೋಷಿಸಿದೆ. ಆಹಾರ, ನೀರು ಪೂರೈಕೆ, ಔಷಧ ಮತ್ತು ಇತರೆ ಸಾಮಗ್ರಿಗಳನ್ನು ಫೂರೈಸುವುದಾಗಿ ಘೋಷಿಸಿದೆ.

ವಿದೇಶಿ ನೆರವು ಹೆಚ್ಚಳ: ಭಾರಿ ಭೂಕಂಪದ ಪರಿಣಾಮ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಮೇಲೆ ಹೆಚ್ಚಾಗಿದೆ. ಪರಿಹಾರ ಕಾರ್ಯಾಚರಣೆಗಾಗಿ ಮತ್ತು ನೆರವಿಗಾಗಿ ಚೀನಾ ಕೂಡ 82 ಜನರ ತಂಡವನ್ನು ಮ್ಯಾನ್ಮಾರ್‌ಗೆ ಕಳುಹಿಸಿದೆ. ತುರ್ತು ಮಾನವೀಯ ನೆರವು ಎಂಬ ನೆಲೆಯಲ್ಲಿ 100 ದಶಲಕ್ಷ ಯುವಾನ್ (117.68 ಕೋಟಿ ರೂ) ನೀಡುವುದಾಗಿ ಬೀಜಿಂಗ್ ಘೋಷಿಸಿದೆ. ಪರಿಹಾರ ಸಾಮಗ್ರಿಗಳನ್ನು ಸೋಮವಾರ ಕಳುಹಿಸುವುದಾಗಿ ಹೇಳಿದೆ. ಹಾಂಕಾಂಗ್ ಕೂಡ 51 ಜನರ ತಂಡವನ್ನು, ಎರಡು ಶೋಧ ನಾಯಿಗಳನ್ನು, 9 ಟನ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ. ಮಲೇಷ್ಯಾ, ಫಿಲಿಪ್ಪೀನ್ಸ್‌, ದಕ್ಷಿಣ ಕೊರಿಯಾ ಕೂಡ ನೆರವು ಕಳುಹಿಸಿವೆ.

ಔಷಧಗಳ ಭಾರಿ ಕೊರತೆ: ಅಗತ್ಯ ತುರ್ತು ಔಷಧೋಪಕರಣಗಳ ಕೊರತೆ ಕಾಡಿದ್ದು, ಅವುಗಳನ್ನು ಸರಬರಾಜುಮಾಡುವುದಕ್ಕೆ ದುಬೈನಲ್ಲಿ ತನ್ನ ಲಾಜಿಸ್ಟಿಕ್ಸ್ ಹಬ್ ಅನ್ನು ಸಜ್ಜುಗೊಳಿಸುತ್ತಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಮತ್ತೊಂದೆಡೆ, ಯುಎನ್ ಹ್ಯುಮಾನಿಟೇರಿಯನ್ ಏಜೆನ್ಸಿ ಓಚಾ, ಆಘಾತ ಕಿಟ್‌ಗಳು, ರಕ್ತದ ಚೀಲಗಳು, ಅರಿವಳಿಕೆ, ಸಹಾಯಕ ಸಾಧನಗಳು, ಅಗತ್ಯ ಔಷಧಿಗಳು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಟೆಂಟ್ ಸೇರಿದಂತೆ ವೈದ್ಯಕೀಯ ಸರಬರಾಜುಗಳ “ತೀವ್ರ ಕೊರತೆ” ನೀಗಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದೆ.

ಅಮೆರಿಕದಿಂದಲೂ ನೆರವು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮ್ಯಾನ್ಮಾರ್ ಭೂಕಂಪ ಭೀಕರ ಎಂದು ಬಣ್ಣಿಸಿದ್ದು, ನೆರವು ನೀಡುವುದಾಗಿ ಹೇಳಿದ್ದಾರೆ. ಯುರೋಪ್ ಒಕ್ಕೂಟ ಕೂಡ 2.5 ದಶಲಕ್ಷ ಯೂರೋಗಳನ್ನು ಆರಂಭಿಕ ನೆರವಾಗಿ ನೀಡುವುದಾಗಿ ಹೇಳಿದೆ. ಐರ್ಲೆಂಡ್ 60 ಲಕ್ಷ ಯೂರೋಗಳ ನೆರವು ನೀಡುವುದಾಗಿ ಹೇಳಿದೆ. ನ್ಯೂಜಿಲ್ಯಾಂಡ್‌ 1.1 ದಶಲಕ್ಷ ಡಾಲರ್‌ ನೆರವುನೀಡುವುದಾಗಿ ಹೇಳಿದೆ.

ಹಾನಿಗೀಡಾದ ರಸ್ತೆ ಕಾರಣ ಕಾರ್ಯಾಚರಣೆಗೆ ಅಡ್ಡಿ: ಮ್ಯಾನ್ಮಾರ್‌ನಲ್ಲಕಿ ರಸ್ತೆಗಳು ಹಾನಿಗೀಡಾಗಿವೆ. ಹೀಗಾಗಿ ಭೂಕಂಪ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವುದಕ್ಕೆ ಹಿನ್ನಡೆ ಉಂಟಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ನೆರವು ವ್ಯವಹಾರ ಸಮನ್ವಯ ಕಚೇರಿ ಹೇಳಿದೆ. ಯಾನ್‌ಗೊನ್‌- ನೇಪಿತಾವ್‌- ಮಂಡಲಾಯ್‌ ಎಕ್ಸ್‌ಪ್ರೆಸ್‌ ವೇಯಲ್ಲಿ ಅಡ್ಡಿ ಉಂಟಾಗಿದ್ದು, ಸಾರಿಗೆ ಸಂಚಾರ ಸ್ಥಗಿತವಾಗಿದೆ. ಮ್ಯಾನ್ಮಾರ್‌ನಲ್ಲಿ ಆಸ್ಪತ್ರೆಗಳು ಭರ್ತಿಯಾಗಿದ್ದು, ವೈದ್ಯೋಪಚಾರಗಳಿಗೂ ಕಷ್ಟವಾಗಿದೆ.

ವಿದ್ಯುತ್‌, ಸಂವಹನ ಸಂಪರ್ಕ ಕಡಿತ: ಭಾರಿ ಭೂಕಂಪದ ಕಾರಣ ಮ್ಯಾನ್ಮಾರ್‌ನಲ್ಲಿ ವಿದ್ಯುತ್ ಕಡಿತ ಉಂಟಾಗಿದೆ. ಸಂವಹನ ಸಂಪರ್ಕವೂ ಕಡಿದು ಹೋಗಿದೆ. ಭಾರಿ ದೊಡ್ಡ ದೊಡ್ಡ ಕಟ್ಟಡಗಳು ಬಿದ್ದು ಹೋಗಿವೆ. ಸುಮಾರು 100 ವರ್ಷಗಳ ಹಿಂದೆ ನಿರ್ಮಿಸಲಾದ ಇರ್ರಾವಾಡಿ ನದಿಗೆ ಅಡ್ಡಲಾಗಿರುವ ಅವಾ ಸೇತುವೆ, ಅದರ ಕೆಳಗಿರುವ ನೀರಿನ ಸುಳಿಗೆ ಸಿಲುಕಿ ಕುಸಿದಿದೆ. ಹಲವಾರು ಸ್ಥಳಗಳಲ್ಲಿ ಹಲವಾರು ವಿದ್ಯುತ್ ನಿಲುಗಡೆಗಳು ವರದಿಯಾಗಿದ್ದು, ಭೂಕಂಪನ ಹಾನಿಯಿಂದಾಗಿ ವಿದ್ಯುತ್ ಯಾಂಗೊನ್‌ನಲ್ಲಿ ನಾಲ್ಕು ಗಂಟೆಗಳವರೆಗೆ ಸೀಮಿತವಾಗಿದೆ.

ಕಟ್ಟಡದ ಅವಶೇಷಗಳೆಡೆ ಬದುಕಿದ್ದ ಮಹಿಳೆ: ಭೂಕಂಪದ ವೇಳೆ ಮ್ಯಾಂಡಲೆಯಲ್ಲಿ ಕುಸಿದ ಅಪಾರ್ಟ್‌ಮೆಂಟ್‌ನ ಅವಶೇಷಗಳ ನಡುವೆ ಸಿಲುಕಿದ್ದ ಮಹಿಳೆಯನ್ನು ಜೀವಂತವಾಗಿ ಹೇಗೆ ರಕ್ಷಿಸಲಾಯಿತು ಎಂಬುದನ್ನು ಎಎಫ್‌ಪಿ ವರದಿ ವಿವರಿಸಿದೆ. 30 ವರ್ಷದ ಮಹಿಳೆಯನ್ನು ಆಸ್ಪತ್ರೆಗೆ ಎಚ್ಚರಿಕೆಯಿಂದ ಕಳುಹಿಸಲಾಗಿದ್ದರೂ, ಸ್ಕೈ ವಿಲ್ಲಾ ಕಾಂಡೋಮಿನಿಯಂನ ಅವಶೇಷಗಳ ಅಡಿಯಲ್ಲಿ 90 ಕ್ಕೂ ಹೆಚ್ಚು ಜನರನ್ನು ಸಿಕ್ಕಿಹಾಕಿಕೊಂಡಿರಬಹುದು ಎಂದು ರೆಡ್ ಕ್ರಾಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.

ಬ್ರಿಟಿಷರ ಕಾಲದ ಟೋಪಿಗೆ ಕೊಕ್​: ಇನ್ಮುಂದೆ ಕರ್ನಾಟಕ ಪೊಲೀಸರಿಗೆ ಸ್ಮಾರ್ಟ್ ಪೀಕ್​ ಹ್ಯಾಟ್

Leave a Reply

Your email address will not be published. Required fields are marked *