Greater Bengaluru News : ಪಟ್ಟನಾಯಕನಹಳ್ಳಿಯ ಸುಪ್ರಸಿದ್ಧ ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನದಲ್ಲಿ ಮಠದ ಭಕ್ತಾದಿಗಳ ಅನುಕೂಲಕ್ಕಾಗಿ ನಿರ್ಮಿಸಲಾದ ಸುಸಜ್ಜಿತ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸ್ವಯಂಚಾಲಿತ ಚಪಾತಿ ತಯಾರಿಕೆ ಯಂತ್ರವನ್ನು ಸೋಮವಾರ (ಏಪ್ರಿಲ್ 20, 2026) ಅದ್ಧೂರಿಯಾಗಿ ಲೋಕಾರ್ಪಣೆ ಮಾಡಲಾಯಿತು.
ನಂಜಾವಧೂತ ಸ್ವಾಮೀಜಿಗಳಿಂದ ಉದ್ಘಾಟನೆ
ಶ್ರೀಕ್ಷೇತ್ರದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಯುಗಯೋಗಿ ಡಾ|| ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿಯವರು ತಮ್ಮ ಅಮೃತ ಹಸ್ತದಿಂದ ಈ ಎರಡೂ ಘಟಕಗಳನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಮಠಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮತ್ತು ದಾಸೋಹ ಭವನದಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಶ್ಲಾಘನೀಯ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಶ್ರೀಮತಿ ಜಯಮ್ಮ, ವೈ.ಕೆ. ಹೊನ್ನಯ್ಯ ಕುಟುಂಬದ ಕೊಡುಗೆ
ಶ್ರೀಮತಿ ಜಯಮ್ಮ ಮತ್ತು ಶ್ರೀ ವೈ.ಕೆ. ಹೊನ್ನಯ್ಯ ಕುಟುಂಬಸ್ಥರು ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಚಪಾತಿ ತಯಾರಿಕೆ ಯಂತ್ರ ಅರ್ಪಿಸಿದರು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರಾದ ವೈ.ಹೆಚ್. ಆನಂದ್, ಬಿಬಿಎಂಪಿ ನ್ಯೂಸ್ 9 ಸಂಪಾದಕರು ಹಾಗೂ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಹೋರಾಟ ಸಮಿತಿ ಚೇರ್ಮನ್ ಹಾಗೂ ವೈ.ಹೆಚ್. ಗೋಪಿ, ಸದ್ಭಾವನಾ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರು, ಶ್ರೀಮತಿ ಆರ್. ಗುಣಶೀಲ ಮತ್ತು ಶ್ರೀ ವೈ.ಹೆಚ್. ಆನಂದ್ ಕುಟುಂಬಸ್ಥರು ಹಾಗೂ ಶ್ರೀಮತಿ ಸಹನಾಗೌಡ ಮತ್ತು ಶ್ರೀ ವೈ.ಹೆಚ್. ಗೋಪಿ ಕುಟುಂಬಸ್ಥರು ಹಾಜರಿದ್ದರು.
ರೂ. 10 ಲಕ್ಷ ವೆಚ್ಚದ ಕೊಡುಗೆ
ಸರಿಸುಮಾರು 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಶುದ್ಧ ಕುಡಿಯುವ ನೀರಿನ ಘಟಕವು ಭಕ್ತರಿಗೆ ಶುಚಿರುಚಿಯಾದ ನೀರು ಒದಗಿಸಿದರೆ, ಸ್ವಯಂಚಾಲಿತ ಚಪಾತಿ ಯಂತ್ರವು ಮಠದ ದಾಸೋಹ ಕಾರ್ಯಕ್ಕೆ ಹೆಚ್ಚಿನ ವೇಗ ನೀಡಲಿದೆ.
ಗಣ್ಯರ ಉಪಸ್ಥಿತಿ ಮತ್ತು ಸೇವಾಕರ್ತರು
ಈ ಕಾರ್ಯಕ್ರಮದಲ್ಲಿ ಮಠದ ಹಿತೈಷಿಗಳು, ಸ್ಥಳೀಯ ಮುಖಂಡರು, ಮಠದ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



