BBMP
Loading ...

Sun BNG

Greater Bengaluru News9 : ಬೆಂಗಳೂರಿನಲ್ಲಿ ಮಿತಿ ಮೀರಿದ ಬಿಸಿಲಿನ ಹಿನ್ನೆಲೆಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಒಂದಷ್ಟು ಮಾರ್ಗಸೂಚಿ ನೀಡಿದೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ಸಲಹೆಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

ಕಳೆದ ಒಂದು ವಾರದಿಂದ ನಗರದಲ್ಲಿ 35 ರಿಂದ 36 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗುತ್ತಿದ್ದು, ಬಿಸಿಲಿನ ಬೇಗೆಗೆ ಜನರು ಹೊರಬಾರಲಾಗದ ಸ್ಥಿತಿ ನಿರ್ಮಾಣವಾಗಿದೆ. ನಗರ ಪ್ರದೇಶದಲ್ಲಿ ಕಾಂಕ್ರೀಟ್‌ ಕಟ್ಟಡಗಳು ಹಗಲಿನ ವೇಳೆ ಬಿಸಿಲಿನ ತಾಪಮಾನವನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುವುದರಿಂದ ರಾತ್ರಿ ವೇಳೆ ಕೂಡ ತಾಪಮಾನದ ಏರಿಕೆ, ಸೆಕೆಯ ಅನುಭವ ಹೆಚ್ಚಾಗುತ್ತಿದೆ. ಬಿಸಿಗಾಳಿ, ಸೆಕೆಯಿಂದ ವಾತಾವರಣ ಬದಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಾರ್ಗಸೂಚಿಯಲ್ಲಿ ಏನಿದೆ?

  • ಮಧ್ಯಾಹ್ನ 12 ರಿಂದ 3 ಗಂಟೆ ಅವಧಿಯಲ್ಲಿಬಿಸಿಲಿನಲ್ಲಿಓಡಾಡಬೇಡಿ
  • ಸಾಧ್ಯವಾದಷ್ಟು ತೆಳುವಾದ ಹತ್ತಿಯ ಬಟ್ಟೆಗಳನ್ನು ಧರಿಸಿ
  • ಹೆಚ್ಚಿನ ಪ್ರಮಾಣದಲ್ಲಿ ನೀರು, ಹಣ್ಣಿನ ರಸ ಸೇವಿಸಿ
  • ಕಾಫಿ, ಟೀ, ಮದ್ಯಪಾನದಿಂದ ಅಂತರ ಕಾಯ್ದುಕೊಳ್ಳಿ
  • ಬಿಸಿಲಿನಲ್ಲಿ ನಿಲ್ಲಿಸಿದ ಕಾರಿನ ಒಳಗೆ ಮಕ್ಕಳು, ಸಾಕು ಪ್ರಾಣಿಗಳನ್ನು ಬಿಡಬೇಡಿ
  • ಅತಿಯಾದ ದೈಹಿಕ ಶ್ರಮದ ಕೆಲಸ ಮಾಡಬೇಡಿ,

ಬಿಸಿಲಿನ ಶಾಖಕ್ಕೆ ಕರಗಿದ ಕ್ರೆಯಾನ್ಸ್‌ ಹಿಡಿದು ನಗರದ ಬದಲಾದ ವಾತಾವರಣದ ಬಗ್ಗೆ ಮಹಿಳೆಯೊಬ್ಬರು ಕಳವಳ ವ್ಯಕ್ತಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಸದ್ದು ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿಗೀತಾ ನಾಗರಾಜ್‌ ಎಂಬುವವರು ಈ ಬಗ್ಗೆ ವಿಡಿಯೊ ಹಂಚಿಕೊಂಡಿದ್ದಾರೆ. ಮನೆ ಮುಂದಿನ ಟೇಬಲ್‌ ಮೇಲಿಟ್ಟಿದ್ದ ಕ್ರೆಯಾನ್ಸ್‌ ಬಿಸಿಲಿಗೆ ಕರಗಿ ಹೋಗಿರುವುದದನ್ನು ವಿಡಿಯೊದಲ್ಲಿಚಿತ್ರೀಕರಿಸಿದ್ದಾರೆ. ”ಹಿಂದೆಂದೂ ಇಂತಹ ಬಿಸಿಲು ನೋಡಿಲ್ಲ. ಬಿಸಿಲಿನ ತೀವ್ರತೆ ಹೇಗಿದೆ ಎಂದರೆ ಟೇಬಲ್‌ ಮೇಲೆ ಆಮ್ಲೆಟ್‌ ಮಾಡಬಹುದು,” ಎಂದು ಅವರು ವಿವರಿಸಿದ್ದಾರೆ.

ಕೊಪ್ಪಳ ಜಿಲ್ಲಾದ್ಯಂತ ಕಳೆದ ವರ್ಷಕ್ಕಿಂತಲೂ ಈ ವರ್ಷ ಬಿಸಿಲಿನ ಧಗೆ ಹೆಚ್ಚಾಗಿದ್ದು, ಜನ ಅಕ್ಷರಶಃ ಹೈರಾಣಾಗಿದ್ದಾರೆ. ಸಾಮಾನ್ಯವಾಗಿ 28 ರಿಂದ 30 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿರುತ್ತಿದ್ದ ತಾಪಮಾನ ಬೇಸಿಗೆ ದಿನಗಳಲ್ಲಿ38 ರಿಂದ 40 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ41 ಡಿಗ್ರಿ ಸೆಲ್ಸಿಯಸ್‌ ವರೆಗೆ ಬಂದು ತಲುಪಿದೆ. ಬೆಳಗ್ಗೆ 8 ಗಂಟೆ ಆಗುತ್ತಲೇ ಸೂರ್ಯ ತನ್ನ ಪ್ರತಾಪ ತೋರಿಸುತ್ತಿದ್ದು, 10ಗಂಟೆ ಹೊತ್ತಿಗೆ ಬಿಸಿಲು ನೆತ್ತಿ ಸುಡುವಂತೆ ಮಾಡುತ್ತಿದೆ. ರಾತ್ರಿ 9ರ ನಂತರ ಮಾತ್ರ ತಾಪಮಾನ ಸ್ವಲ್ಪ ತಗ್ಗಿರುತ್ತಾದರೂ ಬೆಳಗ್ಗೆಯಿಂದ ಸಂಜೆಯವರೆಗಿನ ಬಿಸಿಲಿನ ಝಳ ಜನರಿಗೆ ರಾತ್ರಿಯಲ್ಲಿ ತಾಗುತ್ತಿರುತ್ತದೆ.

ಮನೆಬಿಟ್ಟು ಹೊರಗಡೆ ಬರಲು ಅಳುಕುವಂತಾಗಿದೆ. ವೃದ್ಧರು, ಮಕ್ಕಳು ಆರೋಗ್ಯದ ಕಡೆ ಲಕ್ಷತ್ರ್ಯ ವಹಿಸಿ, ಬಿಸಿಲಿನಲ್ಲಿಓಡಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ. ಜಿಲ್ಲೆಯಲ್ಲಿ ಹೀಟ್‌ ವೇವ್‌ನಿಂದ ಜನ ಪರದಾಡುತ್ತಿದ್ದಾರೆ. ಬಿಸಿಲಿನ ಪ್ರಖರತೆ ಹಿಂದಿನ ದಿನಗಳಿಗಿಂತ ಹೆಚ್ಚಾಗಿದೆ. ಈ ಶಾಖದ ಅಲೆಯ ಪ್ರಮಾಣ ಮೇ ಮೊದಲ ವಾರದ ತನಕ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಇದು ಮುಂದುವರಿದರೇ ಅಚ್ಚರಿಯಿಲ್ಲ ಎಂಬ ಮಾತು ಕೇಳಿ ಬಂದಿವೆ.

Leave a Reply

Your email address will not be published. Required fields are marked *