BBMP
Loading ...

ನವದೆಹಲಿ: ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ 3ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದೇವರ ಸಾಕ್ಷಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ದ್ರೌಪದಿ ಮುರ್ಮು ಅವರಿಗೆ ಪ್ರಮಾಣ ವಚನ ಬೋಧಿಸಿದರು. ದೇಶದ ಪ್ರಧಾನಿಯಾಗಿ ಸತತವಾಗಿ 3ನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ದೇಶದ 2ನೇ ಪ್ರಧಾನ ಮಂತ್ರಿ ಎನಿಸಿಕೊಂಡಿದ್ದಾರೆ. ಜವಾಹರ್​ ಲಾಲ್ ನೆಹರೂ ಮಾತ್ರ ಸತತ ಮೂರು ಬಾರಿ ​ಪ್ರಮಾಣ ವಚನ ಸ್ವೀಕರಿಸಿದ್ದರು.

ಮೋದಿ ಹೊರೆತು ಪಡಿಸಿ ಇಂದು ಒಟ್ಟು 72 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರಲ್ಲಿ 61 ಮಂದಿ ಬಿಜೆಪಿ ಹಾಗೂ 11 ಎನ್​ಡಿಎ ಒಕ್ಕೂಟ ಸಂಸದರಿದ್ದಾರೆ. 72 ಸಂಸದರಲ್ಲಿ 30 ಸಂಪುಟ ಹಾಗೂ 36 ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

24 ರಾಜ್ಯಗಳ ಸಂಸದರಿಗೆ ಸಚಿವ ಪಟ್ಟ
ಮೋದಿ ಸಂಪುಟದಲ್ಲಿ ದೇಶದ 24 ರಾಜ್ಯಗಳಿಗೆ ಮಾನ್ಯತೆ ನೀಡಲಾಗಿದೆ. ಜೊತೆಗೆ ಎಲ್ಲಾ ಸಾಮಾಜಿಕ ವರ್ಗಗಳ ನಾಯಕತ್ವವನ್ನು ಸೇರಿಸಲಾಗಿದೆ. ಇದರಲ್ಲಿ 27 ಇತರೆ ಹಿಂದುಳಿದ ವರ್ಗಗಳು (OBC), 10 ಪರಿಶಿಷ್ಟ ಜಾತಿಗಳು (SC), 5 ಪರಿಶಿಷ್ಟ ಪಂಗಡಗಳು (ST), 5 ಅಲ್ಪಸಂಖ್ಯಾತರು ಸೇರಿದ್ದಾರೆ. ಅಲ್ಲದೆ, 18 ಹಿರಿಯ ಸಚಿವರು ಸಚಿವಾಲಯಗಳನ್ನು ಮುನ್ನಡೆಸಲಿದ್ದಾರೆ.

ಮೋದಿ 3.0 ಸಂಪುಟದಲ್ಲಿರುವ ಬಿಜೆಪಿಯ ಮಿತ್ರ ಮತ್ತು ಮೈತ್ರಿಕೂಟದ ಎನ್‌ಡಿಎ 11 ಸಚಿವರನ್ನು ಅವರ ಅನುಭವ ಮತ್ತು ಪರಿಣತಿಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. 72 ಸಚಿವರಲ್ಲಿ 43 ಸಚಿವರು ಸಂಸತ್ತಿನಲ್ಲಿ ಮೂರು ಅವಧಿಗೆ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿದವರಾಗಿದ್ದಾರೆ. ಅದೇ ಸಮಯದಲ್ಲಿ, ಮೋದಿ 2.0 ನಲ್ಲಿಯೂ 39 ಮಂತ್ರಿಗಳು ಭಾರತ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ. ಮೋದಿ 3.0 ಸಂಪುಟದಲ್ಲಿ ಹೆಚ್​ಡಿ ಕುಮಾರಸ್ವಾಮಿ, ಶಿವರಾಜ್​ ಸಿಂಗ್ ಚೌಹಾಣ್ ಸೇರಿ ಹಲವು ಮಾಜಿ ಮುಖ್ಯಮಂತ್ರಿಗಳು ಸೇರ್ಪಡೆಗೊಂಡಿದ್ದಾರೆ. ರಾಜ್ಯದ ಅನುಭವದೊಂದಿಗೆ ಅವರು ಕೇಂದ್ರ ಸರ್ಕಾರದ ಭಾಗವಾಗಲಿದ್ದಾರೆ. 34 ಮಂದಿ ರಾಜ್ಯಗಳ ವಿಧಾನಸಭೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು 23 ಮಂದಿ ರಾಜ್ಯಗಳಲ್ಲಿ ಸಚಿವರಾಗಿ ಕೆಲಸ ಮಾಡಿದವರಾಗಿದ್ದಾರೆ.

ಮೆ ನರೇಂದ್ರ ದಾಮೋದರ್ ದಾಸ್ ಮೋದಿ: ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ ಸ್ವೀಕಾರ

Leave a Reply

Your email address will not be published. Required fields are marked *