BBMP
Loading ...

Namma Metro

ಬೆಂಗಳೂರು: ಮೆಟ್ರೋ ಸೇವೆಯನ್ನು ತಾವರೆಕೆರೆಯವರೆಗೂ ವಿಸ್ತರಿಸುವಂತೆ ಮಾಜಿ ಸಚಿವ ಹಾಗೂ ಶಾಸಕ ಎಸ್.ಟಿ. ಸೋಮಶೇಖರ್ ಅವರ ಮನವಿಯನ್ನು ಲಗತ್ತಿಸಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಹೇಳಿದ್ದಾರೆ.

ಬೆಂಗಳೂರು ಮೆಟ್ರೋಗೆ ಸಂಬಂಧಿಸಿದಂತೆ ಹೊಸಹಳ್ಳಿ, ಕಡಬಗೆರೆ, ಮಾಗಡಿ ರಸ್ತೆಗೆ ಹೊಂದಿಕೊಂಡಂತೆ ಸಿಗೇಹಳ್ಳಿ ಗೇಟ್‌ವರೆಗೆ ಚನ್ನೇನಹಳ್ಳಿ ಹಾಗೂ ತಾವರೆಕೆರೆ ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣವನ್ನು ಬೆಳೆಸುತ್ತಿರುವುದರಿಂದ ಸದರಿ ಮಾರ್ಗಕ್ಕೆ ಹೊಸದಾಗಿ 4ನೇ ಹಂತದಲ್ಲಿ ಮೆಟ್ರೋ ರೈಲ್ವೆ ಮಾರ್ಗವನ್ನು ತಾವರೆಕೆರೆವರೆಗೆ ವಿಸ್ತರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುವಂತೆ ಶ್ರೀ ಎಸ್.ಟಿ. ಸೋಮಶೇಖರ್, ಮಾನ್ಯ ಶಾಸಕರು, ಯಶವಂತಪುರ ವಿಧಾನಸಭಾ ಕ್ಷೇತ್ರ ರವರು ಕೋರಿ ಮನವಿ ಸಲ್ಲಿಸಿರುತ್ತಾರೆ. ಸದರಿಯವರ ಮನವಿಯನ್ನು ಲಗತ್ತಿಸಿದೆ.

ಸೋಮಶೇಖರ್​ ಅವರ ಕೋರಿಕೆಯಂತೆ ಮೆಟ್ರೋ ಮಾರ್ಗ ವಿಸ್ತರಣೆ ಬಗ್ಗೆ ಡಿ.ಪಿ.ಆರ್ ಸಿದ್ಧಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಇನ್ಮುಂದೆ ವಿದ್ಯುತ್‌ ಸಂಪರ್ಕ ಪಡೆಯಲು ವಾಸಯೋಗ್ಯ ಪ್ರಮಾಣ ಪತ್ರ ಕಡ್ಡಾಯ

Leave a Reply

Your email address will not be published. Required fields are marked *