ಬೆಂಗಳೂರು: ಸುಪ್ರಿಂಕೋರ್ಟ್ ಆದೇಶದಂತೆ ಇನ್ನು ಮುಂದೆ ವಿದ್ಯುತ್ ಸಂಪರ್ಕ ಪಡೆಯಲು ವಾಸಯೋಗ್ಯ ಪ್ರಮಾಣ ಪತ್ರ ನೀಡುವುದನ್ನು ರಾಜ್ಯ ಸರ್ಕಾರದ ವಿದ್ಯುತ್ ಪರಿವೀಕ್ಷಣಾಲಯ ಕಡ್ಡಾಯಗೊಳಿಸಿದೆ.
ವಿದ್ಯುತ್, ನೀರು ಸರಬರಾಜು, ಒಳಚರಂಡಿ ಸಂಪರ್ಕ ಮುಂತಾದ ಎಲ್ಲಾ ಅಗತ್ಯ ಸೇವಾ ಸಂಪರ್ಕಗಳನ್ನು ಸೇವಾ ಪೂರೈಕೆದಾರರು/ಮಂಡಳಿಯು ಕಟ್ಟಡಗಳಿಗೆ ಪೂರ್ಣಗೊಳಿಸುವಿಕೆ/ವಾಸಯೋಗ್ಯ ಪ್ರಮಾಣಪತ್ರವನ್ನು ಹಾಜರುಪಡಿಸಿದ ನಂತರವೇ ನೀಡಬೇಕು ಎಂದು ವಿದ್ಯುತ್ ಪರಿವೀಕ್ಷಣಾಲಯ ಸೂಚನೆ ನೀಡಿದೆ.
ಅದರಂತೆ ಉಲ್ಲೇಖಿತ ಪತ್ರದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಇಂಧನ ಇಲಾಖೆ, ಬೆಂಗಳೂರು ಇವರು ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲು ಸಂ: 14604/2024ರಲ್ಲಿ ದಿ: 17-12-2024ರಂದು ನೀಡಿರುವ ತೀರ್ಪನ್ನು ಅಡಕಗೊಳಸಿ ನಿಯಾಮಾನುಸಾರ ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗಿದೆ.

ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ದಿನಾಂಕ ಫಿಕ್ಸ್: ಏಪ್ರಿಲ್ 4ರಿಂದ ಶುರು, 11 ದಿನ ಕರಗ ಶಕ್ತ್ಯೋತ್ಸವ


