BBMP
Loading ...

M Krishnappa

ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಬಾಳ್ವೆ ನಡೆಸಬೇಕು…ಈ ಯುಗಾದಿ ನಿಮ್ಮ ಜೀವನದ ಕಹಿ ದೂರ ಮಾಡಲಿ, ಸಿಹಿ ಹೆಚ್ಚಿಸಲಿ ಎಂದು ರಾಜ್ಯ ಸಮಸ್ತ ಜನತೆಗೆ ವಿಜಯನಗರ ಕಾಂಗ್ರೆಸ್​ ಶಾಸಕರಾದ ಎಂ ಕೃಷ್ಣಪ್ಪ ಹಾಗೂ ಅವರ ಪುತ್ರ ಹಾಗೂ ಗೋವಿಂದರಾಜನಗರದ ಕಾಂಗ್ರೆಸ್​ ಶಾಸಕರಾದ ಪ್ರಿಯಾಕೃಷ್ಣ ಬಿಬಿಎಂಪಿ ನ್ಯೂಸ್​ 9 ಮೂಲಕ ಶುಭಕೋರಿದ್ದಾರೆ.

ನಿಮ್ಮ ಜೀವನದ ನೋವೆಲ್ಲಾ ಬತ್ತು ಹೋಗಿ ಸಂತೋಷದ ಕಾರಂಜಿ ಚಿಮ್ಮಲಿ, ಈ ಯುಗಾದಿಯು ನಿಮ್ಮ ಬಾಳಲ್ಲಿ ಹೊಸ ಅವಕಾಶಗಳನ್ನು, ಪ್ರಗತಿಯನ್ನು ಮತ್ತು ಸಕಾರಾತ್ಮಕ ಶಕ್ತಿಯನ್ನು ತರಲಿ…. ನಿಮ್ಮ ಬದುಕಿನಿಂದ ಕಹಿಯೆಂಬ ಕಷ್ಟಗಳೆಲ್ಲಾ ದೂರಾಗಲಿ..ಬರೀ ಖುಷಿಯ ಸಿಹಿಯಷ್ಟೇ ತುಂಬಿರಲಿ..ಯುಗಾದಿಯಿಂದ ಆರಂಭವಾಗುವ ಹಿಂದೂ ಹೊಸ ವರ್ಷ ನಿಮ್ಮೆಲ್ಲಾ ಕನಸುಗಳನ್ನು ನನಸು ಮಾಡಲಿ..ನಿಮಗೆ ಸಕಲ ಶಕ್ತಿ, ಐಶ್ವರ್ಯ, ಸಂಪತ್ತು, ಸಮೃದ್ಧಿ ನೀಡಿ ಆಶೀರ್ವದಿಸಲಿ ಎಂದು ನಾಡಿನ ಸಮಸ್ತ ಜನೆತೆಗೆ ಎಂ ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ಶುಭ ಹಾರೈಸಿದ್ದಾರೆ.

ಯುಗಾದಿ ಎಂದೂ ಕರೆಯಲ್ಪಡುವ ಯುಗಾದಿ, ತೆಲುಗು, ಕರ್ನಾಟಕದ ಹೊಸ ವರ್ಷದ ಆರಂಭವನ್ನು ಸೂಚಿಸುವ ಹಬ್ಬವಾಗಿದೆ. ಯುಗಾದಿ ಎನ್ನುವ ಈ ಪದದಲ್ಲಿ ಯುಗ ಎಂದರೆ ಹೊಸ ಯುಗ ಮತ್ತು ಆದಿ ಎಂದರೆ ಆರಂಭ ಎಂಬುದನ್ನು ಸೂಚಿಸುತ್ತದೆ. ಈ ಹಬ್ಬವು ಹೊಸ ಸಂವತ್ಸರದ ಆರಂಭವನ್ನು ಸೂಚಿಸುತ್ತದೆ, ಇದು 60 ವರ್ಷಗಳ ಚಕ್ರವಾಗಿದೆ, ಪ್ರತಿಯೊಂದೂ ವಿಶಿಷ್ಟ ಹೆಸರಿನಿಂದ ಕರೆಯಲ್ಪಡುತ್ತದೆ. 2025ರ ಯುಗಾದಿ ಹಬ್ಬವನ್ನು ಮಾರ್ಚ್‌ 30 ರಂದು ಭಾನುವಾರ ಆಚರಿಸಲಾಗುವುದು.

ನಿಮ್ಮ ಪಾಲಿಗೆ ಸಮೃದ್ಧಿಯ ವರ್ಷವಾಗಲಿ: ಯುಗಾದಿಗೆ ನಂಜಾವಧೂತ ಶ್ರೀಗಳು, KSLECA ಅಧ್ಯಕ್ಷ ರಮೇಶ್​ರಿಂದ ಶುಭಾಶಯ​

Leave a Reply

Your email address will not be published. Required fields are marked *