Greater Bengaluru News9 : ಭ್ರಷ್ಟಾಚಾರ, ಲಂಚಬಾಕ ತನಕ್ಕೆ ಬ್ರೇಕ್ ಬೀಳೋದೆ ಇಲ್ವಾ? ಸರ್ಕಾರಿ ಕೆಲಸ ಆಗ್ಬೇಕು ಅಂದ್ರು ಹಣ ಕೊಡ್ಬೇಕು. ತಮ್ಮ ಕೆಲಸದ ಸಂಬಳ ಪಡೆಯೋಕೂ ಮೇಲಾಧಿಕಾರಿಗಳ ಮುಂದೆ ಕೈ ಕಟ್ಟಿ ನಿಲ್ಬೇಕು. ಯಾವುದೇ ಇಲಾಖೆಗೆ ಹೋದ್ರು ಟೇಬಲ್ ಕೆಳಗೆ ಹಣ ಕೊಟ್ರೆನೇ ಕೆಲಸ. ಯಾವುದೇ ಸರ್ಕಾರ ಬಂದ್ರೂ ಇಂಥ ಆರೋಪಗಳು ಸಾಮಾನ್ಯವಾಗಿಬಿಟ್ಟಿದೆ. ಕೈದಿಗಳಿಗೆ ಸರಿ-ತಪ್ಪಿನ ಪಾಠ ಹೇಳಬೇಕಿದ್ದ ಜೈಲರ್, ಕೈದಿಗೆ ಸರ್ಕಾರ ಕೊಡುವ ಹಣಕ್ಕೆ ಕೈಚಾಚಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಬಲೆಗೆ ಬಿದ್ದ ಜೈಲರ್
ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಜೈಲಿನಲ್ಲಿ ಕೆಲಸ ಮಾಡಿದ್ದ ರಾಜ್ಕುಮಾರ್ ಎಂಬುವರರಿಗೆ ಸರ್ಕಾರದಿಂದ 1.75 ಲಕ್ಷ ಬಿಡುಗಡೆಯಾಗಿತ್ತು. ಕೈದಿಗೆ ಸರ್ಕಾರದಿಂದ ಬಂದ ಹಣ ನೀಡಲು ಜೈಲರ್ ಕಲ್ಲಪ್ಪ ಗಸ್ತಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಲ್ಲದೇ ಹಂತ ಹಂತವಾಗಿ ಹಣ ಪಡೆದು ಸಿಕ್ಕಿಬಿದ್ದಿದ್ದಾರೆ.
60 ಸಾವಿರ ಲಂಚಕ್ಕೆ ಬೇಡಿಕೆ
ಲೋಕಾಯುಕ್ತ ಬಲೆಗೆ ಬಿದ್ದ ಹಳಿಯಾಳ ಸಬ್ ಜೈಲಿನ ಕಲ್ಲಪ್ಪ ಗಸ್ತಿ, ಕೈದಿ ಬಳಿ 60 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ. ಸರ್ಕಾರ ಕೈದಿಗೆ ಮಂಜೂರು ಮಾಡಿದ್ದ ಹಣ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜೈಲರ್ ಕಲ್ಲಪ್ಪ ಗಸ್ತಿ ಮುಂಗಡವಾಗಿಯೇ ಫೋನ್ ಪೇ ಮೂಲಕ 10 ಸಾವಿರ ಹಣ ಪಡೆದಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಸಬ್ ಜೈಲಿನಲ್ಲಿ ಕೆಲಸ ಮಾಡಿದ್ದ ಕೈದಿ ರಾಜ್ಕುಮಾರ್ಗೆ ಸರ್ಕಾರದಿಂದ 1.75 ಲಕ್ಷ ಬಿಡುಗಡೆಯಾಗಿತ್ತು. ಕೈದಿ ಹಣಕ್ಕೆ ಕನ್ನ ಹಾಕಲು ಹೋದ ಜೈಲರ್ ಸಿಕ್ಕಿಬಿದ್ದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರವಾರ ಲೋಕಾಯುಕ್ತ ಡಿ.ಎಸ್ಪಿ ಧನ್ಯಾ ನಾಯಕ್ ಹಾಗೂ ಇನ್ಸ್ಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದಲ್ಲಿ ದಾಳಿ ನಡೆದಿದ್ದು, ಕಲ್ಲಪ್ಪ ಗಸ್ತಿಯನ್ನ ವಶಕ್ಕೆ ಪಡೆದ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.


