BBMP
Loading ...

Loka-Raid-1

Greater Bengaluru News9: ಸಚಿವ ಜಮೀರ್ ಅಹಮದ್ ಖಾನ್ ಆಪ್ತ ಸರ್ಫರಾಜ್ ಖಾನ್ ಮನೆಗಳಲ್ಲಿ ನಡೆದ ಲೋಕಾಯುಕ್ತ ದಾಳಿಯಲ್ಲಿ ಪತ್ತೆಯಾದ ಆಸ್ತಿಗಳ ಮೌಲ್ಯದ ವಿವರ ಬಹಿರಂಗವಾಗಿದೆ. ಒಟ್ಟು 14.38 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಮಾಧ್ಯಮ ಪ್ರಕಟಣೆಯಲ್ಲಿ ಲೋಕಾಯುಕ್ತ ಇಲಾಖೆ ಮಾಹಿತಿ ನೀಡಿದೆ.
ದಾಳಿಯ ವೇಳೆ ಸರ್ಫರಾಜ್ ಖಾನ್‌ಗೆ ಸೇರಿದ 4 ಮನೆಗಳು, 8 ಕೋಟಿ ರೂ. ಮೌಲ್ಯದ 37 ಎಕರೆ ವ್ಯವಸಾಯ ಭೂಮಿ ಸಂಬಂಧಿತ ದಾಖಲೆಗಳು, 66,500 ರೂ. ನಗದು, 2.99 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಐಷಾರಾಮಿ ಕಾರುಗಳು, ಮತ್ತು 1 ಕೋಟಿ 29 ಸಾವಿರ ರೂ. ಠೇವಣಿ ಖಾತೆ ವಿವರಗಳು ಪತ್ತೆಯಾಗಿವೆ.

ಡಿಸೆಂಬರ್ 12 ರಂದು ಲೋಕಾಯುಕ್ತ ಅಧಿಕಾರಿಗಳು ಸರ್ಫರಾಜ್ ಖಾನ್‌ಗೆ ಸೇರಿರುವ ಒಟ್ಟು 13 ಸ್ಥಳಗಳಲ್ಲಿ ದಾಳಿ ನಡೆಸಿದ್ದರು.
ಇತ್ತೀಚೆಗೆ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯತ್ ವ್ಯಾಪ್ತಿಯ ವಣಚಲಿನಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡಿರುವ ಆರೋಪವೂ ಸರ್ಫರಾಜ್ ಖಾನ್ ವಿರುದ್ಧ ಕೇಳಿಬಂದಿತ್ತು. ಈ ಹಿನ್ನೆಲೆ ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.Greater Bengaluru News9: ಸಚಿವ ಜಮೀರ್ ಅಹಮದ್ ಖಾನ್ ಆಪ್ತ ಸರ್ಫರಾಜ್ ಖಾನ್ ಮನೆಗಳಲ್ಲಿ ನಡೆದ ಲೋಕಾಯುಕ್ತ ದಾಳಿಯಲ್ಲಿ ಪತ್ತೆಯಾದ ಆಸ್ತಿಗಳ ಮೌಲ್ಯದ ವಿವರ ಬಹಿರಂಗವಾಗಿದೆ. ಒಟ್ಟು 14.38 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಮಾಧ್ಯಮ ಪ್ರಕಟಣೆಯಲ್ಲಿ ಲೋಕಾಯುಕ್ತ ಇಲಾಖೆ ಮಾಹಿತಿ ನೀಡಿದೆ.

ದಾಳಿಯ ವೇಳೆ ಸರ್ಫರಾಜ್ ಖಾನ್‌ಗೆ ಸೇರಿದ 4 ಮನೆಗಳು, 8 ಕೋಟಿ ರೂ. ಮೌಲ್ಯದ 37 ಎಕರೆ ವ್ಯವಸಾಯ ಭೂಮಿ ಸಂಬಂಧಿತ ದಾಖಲೆಗಳು, 66,500 ರೂ. ನಗದು, 2.99 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಐಷಾರಾಮಿ ಕಾರುಗಳು, ಮತ್ತು 1 ಕೋಟಿ 29 ಸಾವಿರ ರೂ. ಠೇವಣಿ ಖಾತೆ ವಿವರಗಳು ಪತ್ತೆಯಾಗಿವೆ.

ಡಿಸೆಂಬರ್ 12 ರಂದು ಲೋಕಾಯುಕ್ತ ಅಧಿಕಾರಿಗಳು ಸರ್ಫರಾಜ್ ಖಾನ್‌ಗೆ ಸೇರಿರುವ ಒಟ್ಟು 13 ಸ್ಥಳಗಳಲ್ಲಿ ದಾಳಿ ನಡೆಸಿದ್ದರು.
ಇತ್ತೀಚೆಗೆ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯತ್ ವ್ಯಾಪ್ತಿಯ ವಣಚಲಿನಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡಿರುವ ಆರೋಪವೂ ಸರ್ಫರಾಜ್ ಖಾನ್ ವಿರುದ್ಧ ಕೇಳಿಬಂದಿತ್ತು. ಈ ಹಿನ್ನೆಲೆ ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. 

Leave a Reply

Your email address will not be published. Required fields are marked *