BBMP
Loading ...

ಬೆಂಗಳೂರು: ರಾಜ್ಯದ 8 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಆದಾಯಕ್ಕಿಂತಲೂ ಅಧಿಕ ಗಳಿಕೆ, ಭ್ರಷ್ಟಾಚಾರ ಸೇರಿದಂತೆ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಆನೇಕಲ್, ಗದಗ, ಧಾರವಾಡ, ಕಲಬುರಗಿ ಹಾಗೂ ಬೆಳಗಾವಿಯ ವಿವಿಧೆಡೆ ಶೋಧ ಕಾರ್ಯ ಮುಂದುವರೆದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಮಾರು 12ಕ್ಕೂ ಹೆಚ್ಚು ಜಿಲ್ಲೆಗಳ 40ಕ್ಕೂ ಹೆಚ್ಚು ಕಡೆ ದಾಳಿ ನಡೆದಿದೆ.

ಯಾರ ಮೇಲೆ ದಾಳಿ
* ಪ್ರಕಾಶ್, ಬಿಬಿಎಂಪಿ ಕಾರ್ಯ ನಿರ್ವಾಹಕ ಇಂಜಿನಿಯರ್, ಬೆಂಗಳೂರು
* ಡಾ. ಎಸ್. ಪ್ರದೀಪ್, ಅಸೋಸಿಯೇಟ್ ರಿಸರ್ಚ್ ಡೈರೆಕ್ಟರ್, ಸಾವಯವ ಕೃಷಿ ವಿಭಾಗ, ಶಿವಮೊಗ್ಗ
* ಲತಾ ಮಣಿ, ಲೆಕ್ಕಾಧಿಕಾರಿ, ಪಟ್ಟಣ ಪುರಸಭೆ, ಚಿಕ್ಕಮಗಳೂರು
* ಕೆ.ಜಿ. ಅಮರನಾಥ್, ಮುಖ್ಯಾಧಿಕಾರಿ ಪಟ್ಟಣ ಪುರಸಭೆ, ಆನೇಕಲ್
* ಧೃವರಾಜ್, ಪಟ್ಟಣ ಪೊಲೀಸ್ ನಿರೀಕ್ಷಕರು, ಗದಗ
* ಅಶೋಕ್ ವಲ್ಸಂದ್, ಇಂಜಿನಿಯರ್, ಮಲಪ್ರಭಾ ಪ್ರಾಜೆಕ್ಟ್, ಧಾರವಾಡ
* ಮಲ್ಲಿಕಾರ್ಜುನ ಅಲಿಪುರ, ಮಾಜಿ ಎಂಜಿನಿಯರ್, ಆರ್‌ಡಿಪಿಆರ್, ಕಲ್ಬುರ್ಗಿ
* ರಾಮಚಂದ್ರ ಪಿಡಿಒ ಕಲ್ಬುರ್ಗಿ

ಈ ಮೇಲಿನ ಅಧಿಕಾರಿಗಳಿಗೆ ಸಂಬಂಧಿಸಿದ ಕಚೇರಿ ಹಾಗೂ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ಅಧಿಕಾರಿಗಳ ಬ್ಯಾಂಕ್​ ಖಾತೆಗಳನ್ನು ಸಹ ಪರಿಶೀಲಿಸಲಾಗುತ್ತಿದೆ.

VIDEO| ಗೋವಿಂದರಾಜನಗರ ವಿಭಾಗದ ಬಿಬಿಎಂಪಿ ಎಂಜಿನಿಯರ್ ಪ್ರಕಾಶ್ ಮನೆ ಮೇಲೆ ಲೋಕಾಯುಕ್ತ ದಾಳಿ!

Leave a Reply

Your email address will not be published. Required fields are marked *