BBMP
Loading ...

Loka Raid

ಬೆಂಗಳೂರು:- ರಾಜ್ಯದ ಹಲವೆಡೆ ನಿನ್ನೆ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ನಿನ್ನೆ ಲೋಕಾಯುಕ್ತ ಶಾಕ್ ಕೊಟ್ಟಿದ್ದು, ಬೆಂಗಳೂರು, ಗದಗ ಸೇರಿ ರಾಜ್ಯದ 8 ಕಡೆಗಳಲ್ಲಿ ದಾಳಿ ಮಾಡಿ ಪರಿಶೀಲನೆ ಮಾಡಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಎಂಟು ಸರ್ಕಾರಿ ಅಧಿಕಾರಿಗಳ ಮನೆ ಸೇರಿದಂತೆ 38 ಕಡೆಗಳಲ್ಲಿ ಲೋಕಾಯುಕ್ತ ದಾಳಿ ಮಾಡಿ, ಭರ್ಜರಿ ಬೇಟೆಯಾಡಿದ್ದಾರೆ. ಸ್ಥಿರ ಆಸ್ತಿ, ಚರಾ ಆಸ್ತಿ, ಸೇರಿದಂತೆ ಒಡವೆ ವಾಹನಗಳ ದಾಖಲೆಗಳನ್ನು ಪರಿಶೀಲನೆ ಮಾಡಿದ್ದು, ಕೊಟ್ಯಂತರ ರೂ ಪತ್ತೆ ಆಗಿದೆ.

ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಶೋಭಾಗೆ ಸೇರಿದ ಚಂದ್ರಲೇಔಟ್ ದೀಪಾಂಜಲಿನಗರದಲ್ಲಿರುವ ನಿವಾಸ, ಸಕಲೇಶಪುರದಲ್ಲಿರುವ ಮನೆ ಮೇಲೆ ದಾಳಿ ಮಾಡಿ ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಡಿವೈಎಸ್ ಪಿ ಗಿರೀಶ್, ಇನ್ಸ್ ಪೆಕ್ಟರ್ ಬಸವರಾಜ ಪುಲಾರಿ ನೇತೃತ್ವದ 15 ಜನ ಅಧಿಕಾರಿ ಸಿಬ್ಬಂದಿ ತಂಡ ದಾಳಿ ಮಾಡಿತ್ತು.

15 ಪೊಲೀಸರನ್ನ ಕಂಡು ಶೋಭಾ ಏಕಾಏಕಿ ಗಾಬರಿಗೊಂಡಿದ್ದರು. ತಮ್ಮ ವೈಯಕ್ತಿಕ ವಿಚಾರಗಳನ್ನ ಹೇಳ್ಕೊಂಡು ಕಣ್ಣೀರಿಟ್ಟಿದ್ದಾರೆ. 2 ತಿಂಗಳ ಹಿಂದೆ ಶೋಭಾರ 20 ವರ್ಷದ ಪುತ್ರಿ ಸಾವನ್ನಪ್ಪಿದ್ದರೆ, ಪತಿ ಕೂಡ ಮೃತಪಟ್ಟಿದ್ದಾರೆ. ಲೋಕಾಯುಕ್ತ ದಾಳಿಯಿಂದ ಶೋಭಾ ಮಾನಸಿಕವಾಗಿ ಆಘಾತಗೊಂಡಿದ್ದಾರೆ.

ಅದರಂತೆ ಗದಗ ಬೆಟಗೇರಿ ನಗರಸಭೆಯ ಕಾರ್ಯನಿರ್ವಾಹಕ ಇಂಜಿನಿಯರ್ ಹುಚ್ಚೇಶ್ ಬಂಡಿವಡ್ಡರ್​ಗೆ ಸೇರಿದ ಮನೆ ಮತ್ತು ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಹುಚ್ಚೇಶ್ ಬಂಡಿವಡ್ಡರ್ ಅವರ​ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಲೋಕಾಯುಕ್ತ ಎಸ್​ಪಿ ಹನಂಮತರಾಯ್, ಡಿವೈಎಸ್​ಪಿ ವಿಜಯ್ ಬಿರಾದಾರ್, ಪಿಎಸ್​ಐ ಎಸ್ ಎಸ್ ತೇಲಿ ಸೇರಿದಂತೆ ಲೋಕಾಯುಕ್ತ ಸಿಬ್ಬಂದಿ ಈ ದಾಳಿ ಮಾಡಿತ್ತು. ದಾಳಿ ವೇಳೆ ಹಲವು ಮಹತ್ತರ ದಾಖಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಹೌದು, ಗದಗ ಬೆಟಗೇರಿ ನಗರಸಭೆ ಇಂಜಿನಿಯರ್ ಹುಚ್ಚೇಶ ಬಂಡಿವಡ್ಡರ ನಿವಾಸಗಳ ಮೇಲೆ ಮೇಲೆ ನಿನ್ನೆ ಬೆಳಿಗ್ಗೆ ದಾಳಿ ನಡೆಸಿದ ಲೋಕಾಯಕ್ತರಿಗೆ 1.50 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಬಂಡಿವಡ್ಡರ್ ಗೆ ಸಂಬಂಧಿಸಿದಂತೆ ಗದಗ, ಗಜೇಂದ್ರಗಡ, ಬಾಗಲಕೋಟೆ ಸೇರಿದಂತೆ ಒಟ್ಟು ಐದು ಕಡೆ ಏಕಕಾಲಕ್ಕೆ ದಾಳಿ ನಡೆಸಿ ಲೋಕಾಯುಕ್ತ ಟೀಂ ಪರಿಶೀಲನೆ ನಡೆಸಿದರು. ಈ ವೇಳೆ, ಲೋಕಾಯುಕ್ತರಿಗೆ 2 ಮನೆ, 1 ನಿವೇಶನ, 1 ಜೆಸಿಬಿ, 1 ಕಾರ್, 1 ದ್ವಿಚಕ್ರ ವಾಹನ, ಟ್ರ್ಯಾಕ್ಟರ್ ಹಾಗೂ ಟ್ಯಾಂಕರ್ ಪತ್ತೆಯಾಗಿವೆ.

ಇದಷ್ಟೇ ಅಲ್ಲದೇ, ಗಜೇಂದ್ರಗಡ ಪಟ್ಟಣದಲ್ಲಿ, 22 ಲಕ್ಷ ಮೌಲ್ಯದ ಶಾಪಿಂಗ್ ಕಾಂಪ್ಲೆಕ್ಸ್, 17 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ ಸೇರಿದಂತೆ ಬ್ಯಾಂಕಿನಲ್ಲಿ 22 ಲಕ್ಷ ನಗದು ಸೇರಿ, ಒಟ್ಟು 1.50 ಕೋಟಿ ಅಕ್ರಮ‌ ಆಸ್ತಿ ಪತ್ತೆಯಾಗಿದ್ದು, ಹಲವು ದಾಖಲೆಗಳು ಸಿಕ್ಕಿವೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕರ್ನಾಟಕ ಲೋಕಾಯುಕ್ತ ಗದಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ನಗರಸಭೆ ಇಂಜಿನಿಯರ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆದ ಬೆನ್ನಲ್ಲೇ ಇದೀಗ ನಗರಸಬೆ ಇನ್ನುಳಿದ ಅಧಿಕಾರಿಗಳಿಗೂ ನಡುಕು ಶುರುವಾಗಿದೆ. ದಾಳಿ ಮಾಹಿತಿಯಿಂದ ಬುಧವಾರ ನಗರಸಭೆ ಬಿಕೋ ಎನ್ನುತ್ತಿತ್ತು. ಹಲವು ಅಧಿಕಾರಿಗಳು ಕಚೇರಿಯತ್ತ ಮುಖ ಮಾಡಿರಲಿಲ್ಲ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಯಿತು.

ಇನ್ನು ಮುಖ್ಯವಾಗಿ ಬಂಡಿವಡ್ಡರ್ ಅವರ ಶೈಕ್ಷಣಿಕ ಅರ್ಹತೆ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ. ಮೂಲತಃ ಪಿಯುಸಿ ಸಮಾನವಾಗಿರುವ ಜೆಓಡಿಸಿ ಶೈಕ್ಷಣಿಕ ಅರ್ಹತೆಯನ್ನ ಪಡೆದಿದ್ದಾರೆ. ಆದರೆ ನಗರಸಭೆ ಇಂಜಿನೀಯರ್ ಹುದ್ದೆ ಅಲಂಕರಿಸಿರುವದು ಯಾವ ಆಧಾರದ ಮೇಲೆ? ಅನ್ನೋ ಸರಿ ತಪ್ಪು ಚರ್ಚೆಗಳು ಕೇಳಿಬಂದಿವೆ. ಒಟ್ನಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದು, ತನಿಖೆ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ.

1) ಜಂಟಿ ಆಯುಕ್ತೆ ಎಂ ಶೋಭಾ ಮನೆ ಸೇರಿ 6 ಕಡೆಗಳಲ್ಲಿ ತಲಾಶ್
ನಿವೇಶನ, ಮನೆ, 21 ಎಕರೆ ಜಮೀನು ಸೇರಿ ಸ್ಥಿರಾಸ್ತಿ ಮೌಲ್ಯ 45,35000
35,300 ನಗದು, 60 ಲಕ್ಷ ಮೌಲ್ಯದ ಚಿನ್ನಾಭರಣ
20 ಲಕ್ಷ ರೂ ಬೆಲೆಬಾಳುವ ವಾಹನ, 1 ಕೋಟಿ 60 ಲಕ್ಷ ಬ್ಯಾಂಕ್ ಠೇವಣಿ
LIC, 23,50,000 ಬೆಲೆ ಬಾಳುವ ಗೃಹಪಯೋಗಿ ವಸ್ತು ಸೇರಿದಂತೆ
ಒಟ್ಟು ಆಸ್ತಿ ಮೌಲ್ಯವೇ 3,09,21,300.

2) ಬೆಳಗಾವಿ ಜಿಲ್ಲೆ ಖಾನಾಪುರ ತಹಶೀಲ್ದಾರ್ ಪ್ರಕಾಶ್ ಶ್ರೀಧರ್ ಗಾಯಕವಾಡ್
ಖಾನಾಪುರ ತಹಶೀಲ್ದಾರ್‌ಗೆ ಸೇರಿದ 8 ಕಡೆ ಲೋಕಾ ದಾಳಿ ನಡೆದಿತ್ತು
ತಹಶೀಲ್ದಾರ್ ಪ್ರಕಾಶ್ ಬಳಿ 4,41,12,585 ರೂ. ಮೌಲ್ಯದ ಆಸ್ತಿ ಪತ್ತೆ
2 ನಿವೇಶನ, 3 ವಾಸದ ಮನೆ , 28 ಎಕರೆ ಕೃಷಿ ಭೂಮಿ ಸೇರಿದಂತೆ ಒಟ್ಟು 3 ಕೋಟಿ 58 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಪತ್ತೆ.
ನಗದು, ಚಿನ್ನಾಭರಣ ಸೇರಿ 83,12,585 ರೂ. ಮೌಲ್ಯದ ಚರಾಸ್ತಿ ಪತ್ತೆ

3) ಚಿಕ್ಕಮಗಳೂರು ಜಿಲ್ಲೆಯ ಕಡೂರು ಟಿಹೆಚ್‌ಒ ಎಸ್‌.ಎನ್.ಉಮೇಶ್
1 ವಾಸದ ಮನೆ, 2 ನಿವೇಶನ, 8 ಎಕರೆ ಕೃಷಿ ಜಮೀನು ಸೇರಿದಂತೆ ಒಟ್ಟು ಉಮೇಶ್ ಸ್ಥಿರ ಆಸ್ತಿ ಅಂದಾಜು ಮೌಲ್ಯ- 56,78,000.
ಚರ ಆಸ್ತಿ ರೂ 8,430 ನಗದು
12,50,000 ಬೆಲೆ ಬಾಳುವ ಚಿನ್ನಾಭರಣ
ರೂ 45,83,000 ಬೆಲೆಬಾಳುವ ವಾಹನಗಳು
ರೂ 10 ಲಕ್ಷ ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು
ರೂ 68,41,430 ರೂ ಮೌಲ್ಯ
ಒಟ್ಟು ಆಸ್ತಿ: 1,25,19,430

4) ಬೀದರ್ ಜಿಲ್ಲೆ ಬಸವಕಲ್ಯಾಣ ಉಪವಿಭಾಗದ ಎಇ-2​ ರವೀಂದ್ರ
ಒಟ್ಟು 5 ಕಡೆಗಳಲ್ಲಿ ಶೋಧ
ರವೀಂದ್ರ ಸ್ಥಿರಾಸ್ತಿ ಒಟ್ಟು ಮೌಲ್ಯ
5 ನಿವೇಶನ, 2 ವಾಸದ ಮನೆ, 7 ಎಕರೆ ಕೃಷಿ ಜಮೀನು, ಸೇರಿದಂತೆ ರೂ. 1,72,04,000 ನಗದು
ಚಿನ್ನಾಭರಣ, ವಾಹನ, ಇತರೆ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಒಟ್ಟು ರೂ 53,60,275 ಮೌಲ್ಯ, ಒಟ್ಟು ಆಸ್ತಿ ಅಂದಾಜು ಮೌಲ್ಯ ರೂ 2,25,64,275.

5) ರಾಯಚೂರಿನ ಜೆಸ್ಕಾಂ ಜೆಇ ಹುಲಿರಾಜ್
ಈವರೆಗೆ ಹುಲಿರಾಜ ಮನೆಯಲ್ಲಿ 1.38 ಕೋಟಿ‌ ರೂ. ಆಸ್ತಿ ಪತ್ತೆ
1.20 ಕೋಟಿ ರೂ. ಮೌಲ್ಯದ 2 ಮನೆ, ಮೂರು ನಿವೇಶನ ಹಾಗೂ‌ 24 ಎಕರೆ ಕೃಷಿ ಜಮೀನಿರುವುದು ಲೋಕಾ ದಾಳಿ ವೇಳೆ ಪತ್ತೆ
17.88 ಲಕ್ಷ ಹಣ, 4.3 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು
12.5 ಲಕ್ಷ ರೂಪಾಯಿ ಮೌಲ್ಯದ ವಾಹನಗಳು ಪತ್ತೆಯಾಗಿದೆ.
ತಲೆಮರೆಸಿಕೊಂಡಿರುವ ಜೆಇ ಹುಲಿರಾಜ್​ ಪತ್ತೆಗೆ ಹುಡುಕಾಟ

ಪ್ರಯಾಣಿಕರಿಗೆ ಬಿಗ್ ಶಾಕ್: ಬಸ್ ಟಿಕೆಟ್ ದರ ಹೆಚ್ಚಳ ಬೆನ್ನಲ್ಲೇ ಬಿಎಂಟಿಸಿ ಪಾಸ್‌ಗಳ ದರ ಏರಿಕೆ!

Leave a Reply

Your email address will not be published. Required fields are marked *