ಬೆಂಗಳೂರು: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಬಾಗಲಕೋಟ ಜಿಲ್ಲಾ ಭಾಗದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ವಿದ್ಯುತ್ ಪ್ರಥಮದರ್ಜೆ ಗುತ್ತಿಗೆದಾರರು ಶ್ರೀ ಮಹೇಶ ಲಕ್ಷಣ ಪರೀಟ ಅವರು ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಕೊಡಮಾಡುವ ಸುವರ್ಣ ಕನ್ನಡಿಗ -2025 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
“ಸುವರ್ಣ ಕನ್ನಡಿಗ – 2025” ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇಂದು (ಫೆಬ್ರವರಿ 14) ಯಶವಂತಪುರದ ತುಮಕೂರು ರಸ್ತೆಯಲ್ಲಿರುವ ಪಂಚತಾರ ಹೋಟೆಲ್ ತಾಜ್ ನಲ್ಲಿ ಸಂಜೆ 4 ಗಂಟೆಗೆ ನಡೆಯಿತು.
ಮಹೇಶ ಅವರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಜನರಿಗೆ ದಾರಿದೀಪವಾಗಿದ್ದಾರೆ. ಮಾನವೀಯ ಗುಣವುಳ್ಳ ಮಹೇಶ್ ಅವರಿಗೆ ಸುವರ್ಣ ಕನ್ನಡಿಗ ಪ್ರಶಸ್ತಿ ಲಭಿಸಿರುವುದು ನಿಜಕ್ಕೂ ಖುಷಿಯ ಸಂಗತಿಯಾಗಿದೆ. ಅರ್ಹ ವ್ಯಕ್ತಿಗೆ ಪ್ರಶಸ್ತಿ ಸಿಕ್ಕಿದೆ. ಮಹೇಶ್ ಅವರಿಗೆ ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘ ಹಾಗೂ ಬಿಬಿಎಂಪಿ ನ್ಯೂಸ್ 9 ವತಿಯಿಂದ ಅಭಿನಂದನೆಗಳು.


