ಬೆಂಗಳೂರು: ಇದೇ ಮಂಗಳವಾರ (ಫೆ.25) ಕರ್ನಾಟಕ ರಿಗ್ ಓನರ್ಸ್ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ನಡೆಯಲಿದ್ದು, ದಿಶಾ ಸಮಿತಿ ಸದಸ್ಯರಾದ ಎಸ್. ಶಿವಣ್ಣ ಹಾಗೂ ಅವರ ತಂಡಕ್ಕೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಜಯಶಾಲಿಯನ್ನಾಗಿ ಮಾಡಬೇಕೆಂದು ಕೋರಲಾಗಿದೆ.
ನಗರದ ಮಲ್ಲತ್ತಹಳ್ಳಿಯ 60 ಅಡಿ ಲೇಕ್ ರಸ್ತೆಯಲ್ಲಿರುವ ಎನ್‌ಜಿಇಎಫ್ ಲೇಔಟ್ನ ಪಾಂಚಜನ್ಯ ಕುಟೀರದಲ್ಲಿರುವ ಕರ್ನಾಟಕ ರಿಗ್ ಓನರ್ಸ್ ಸಂಘ ಕಚೇರಿಯಲ್ಲಿ ಮಂಗಳವಾರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ನಡೆಯಲಿದೆ. ರಾಮನಗರ ಜಿಲ್ಲೆಯ ದಿಶಾ ಸಮಿತಿ ಸದಸ್ಯರಾದ ಎಸ್. ಶಿವಣ್ಣ ಅವರು ಕೂಡ ಸ್ಪರ್ಧಿಸಿದ್ದು, ಅವರ ಕ್ರಮಸಂಖೆ 22ಕ್ಕೆ ಅಮೂಲ್ಯವಾದ ಮತ ನೀಡಲು ಮನವಿ ಮಾಡಲಾಗಿದೆ.
ಅಲ್ಲದೆ, ಎಸ್. ಶಿವಣ್ಣ ಹಾಗೂ ಅವರ ತಂಡದ ಕೆಳಕಂಡ ಅಭ್ಯರ್ಥಿಗಳಿಗೆ ನಿಮ್ಮ ಮತವನ್ನು ನೀಡಿ ಸಂಘವನ್ನು ಶ್ರೇಯೋಭಿವೃದ್ಧಿ ಪಥದಲ್ಲಿ ನಡೆಸಲು ಸಹಕಾರಿಗಳಾಗಬೇಕಾಗಿ ಎಸ್. ಶಿವಣ್ಣ ಹಾಗೂ ಅವರ ತಂಡದ ವಿನಂತಿಸಿಕೊಂಡಿದೆ.



