ಬೆಂಗಳೂರು: ಕರ್ನಾಟಕ ರಿಗ್ ಓನರ್ಸ್ ಸಂಘದ ಕಾರ್ಯಕಾರಿ ಸಮಿತಿಗೆ ಫೆಬ್ರವರಿ 25 ರಂದು ನಡೆದ ಚುನಾವಣೆಯ ಫಲಿತಾಂಶ ಇಂದು (ಏಪ್ರಿಲ್ 17) ಹೊರಬಿದ್ದಿದ್ದು, ರಾಮನಗರ ಜಿಲ್ಲೆಯ ದಿಶಾ ಸಮಿತಿ ಸದಸ್ಯರಾದ ಎಸ್. ಶಿವಣ್ಣ ಹಾಗೂ ಅವರ ತಂಡ ಭರ್ಜರಿ ಗೆಲುವು ದಾಖಲಿಸಿದೆ.
ನಗರದ ಮಲ್ಲತ್ತಹಳ್ಳಿಯ 60 ಅಡಿ ಲೇಕ್ ರಸ್ತೆಯಲ್ಲಿರುವ ಎನ್‌ಜಿಇಎಫ್ ಲೇಔಟ್ನ ಪಾಂಚಜನ್ಯ ಕುಟೀರದಲ್ಲಿರುವ ಕರ್ನಾಟಕ ರಿಗ್ ಓನರ್ಸ್ ಸಂಘ ಕಚೇರಿಯಲ್ಲಿ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಫೆಬ್ರವರಿ 25 ರಂದು ನಡೆದಿತ್ತು.
ಚುನಾವಣೆ ಬಳಿಕ ಮತಪೆಟ್ಟಿಗೆಗಳನ್ನು ಜಿಲ್ಲಾ ಖಜಾನೆ ವಿಧಾನ ಸೌಧ, ಬೆಂಗಳೂರು-560001 ಇಲ್ಲಿ ಭದ್ರತೆಗಾಗಿ ಇಡಲಾಗಿತ್ತು. ಇಂದು ಮತಪೆಟ್ಟಿಗೆಯನ್ನು ವಾಪಸ್ ಪಡೆದು ಮತಗಳ ಎಣಿಕೆಯ ನಂತರ ಕೆಳಕಂಡ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆಂದು ಚುನಾವಣಾಧಿಕಾರಿ ಪಿ. ಮುನಿರಾಜ ಘೋಷಿಸಿದ್ದಾರೆ.




