BBMP
Loading ...

Karnataka Bandu

ಬೆಳಗಾವಿಯಲ್ಲಿ ಎಂಇಎಸ್‌ ಪುಂಡರ ದೌರ್ಜನ್ಯ, ಕನ್ನಡ ಭಾಷಿಕರ ಮೇಲೆ ಮರಾಠಿಗರ ದೌರ್ಜನ್ಯ ಖಂಡಿಸಿ ವಾಟಾಳ್ ನಾಗರಾಜ್ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಕೆಲ ಸಂಘಟನೆಗಳು ಬಂದ್‌ಗೆ ಬೆಂಬಲ ಕೊಟ್ಟಿವೆ.

ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಕೆಲ ಪ್ರಮುಖ ಸಂಘಟನೆಗಳೇ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸದೇ ದೂರ ಉಳಿದಿವೆ. ಇದರ ಮಧ್ಯೆ ಓಲಾ, ಉಬರ್ ಸೇರಿದಂತೆ ಹಲವು ವಾಹನಗಳ ಒಕ್ಕೂಟಗಳು ಬಂದ್‌ಗೆ ಬೆಂಬಲಿಸಿವೆ. ಈ ಹಿನ್ನೆಲೆಯಲ್ಲಿ ಇಂದು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು, ನಮ್ಮ ಮೆಟ್ರೋ ಸಂಚರಿಸುತ್ತಾ ಎಂಬ ಗೊಂದಲ ಬೆಂಗಳೂರು ಸೇರಿದಂತೆ ರಾಜ್ಯದ ಜನರನ್ನು ಕಾಡುತ್ತಿವೆ.

ಬೆಂಗಳೂರಿನಲ್ಲಿ ಬೆಳಗ್ಗೆ ಎಂದಿನಂತೆ ಪ್ರಯಾಣಿಕರ ಓಡಾಟ, ವಾಹನ ಸಂಚಾರ ನಡೆಯುತ್ತಿದೆ. ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಪ್ರಯಾಣಿಕರ ಸಂಚಾರವಿದೆ, ಆಟೋ, ಓಲಾ, ಉಬರ್ ವಾಹನಗಳ ಸಂಚಾರ ಕೂಡ ಇದೆ. ವೀಕೆಂಡ್ ಹಿನ್ನಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ಹೋಗುತ್ತಿರುವ ಪ್ರಯಾಣಿಕರು ಎಂದಿನಂತೆ ಪ್ರಯಾಣಿಸುತ್ತಿದ್ದಾರೆ. ರೈಲ್ವೆ ನಿಲ್ದಾಣದ ಬಳಿ ವಾಹನಗಳು ಸಾಲಾಗಿ ನಿಂತಿವೆ.

ಇಂದಿನ ಕರ್ನಾಟಕ ಬಂದ್‌ಗೆ ಖಾಕಿ ಕಟ್ಟೆಚ್ಚರ ಇರುತ್ತದೆ. ರಸ್ತೆಯಲ್ಲಿ ಮೆರವಣಿಗೆ ಅಥವಾ ಪ್ರತಿಭಟನೆ ಇಲ್ಲ, ಪ್ರೀಡಂ ಪಾರ್ಕ್‌ನಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಬಲವಂತವಾಗಿ ಬಂದ್ ಮಾಡಿದರೆ ಶಿಸ್ತುಕ್ರಮದ ಎಚ್ಚರಿಕೆ ನೀಡಿರುವ ಪೊಲೀಸ್ ಕಮಿಷನರ್. ಈಗಾಗಲೇ ಬಂದ್ ನೇತೃತ್ವ ವಹಿಸಿರುವ ವಾಟಾಳ್ ನಾಗರಾಜ್‌ಗೆ ಸುಪ್ರಿಂ ಕೋರ್ಟ್ ಗೈಡ್ ಲೈನ್ಸ್ ಮನವರಿಕೆ ಮಾಡಲಾಗಿದೆ.

ಇಂದಿನ ಬಂದ್‌ನಲ್ಲಿ ಹೇಗಿರುತ್ತದೆ ಎಂದು ತಿಳಿಯಲು: ಕೇಂದ್ರ ಮತ್ತು ಪಶ್ಚಿಮ ವಿಭಾಗದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಇರಲಿದೆ. ಟೌನ್ ಹಾಲ್, ಮೈಸೂರ್ ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್ ಭಾಗಗಳಲ್ಲಿ ವಿಸ್ತಾರವಾದ ಖಾಕಿ ಅಲರ್ಟ್. ಕಮಿಷನರ್ ನೇತೃತ್ವದಲ್ಲಿ ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತರಿಂದ ಭದ್ರತೆ, ಆಯಾ ವಿಭಾಗಗಳಲ್ಲಿ ಡಿಸಿಪಿಗಳ ನೇತೃತ್ವದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪಶ್ಚಿಮ ಮತ್ತು ಕೇಂದ್ರ ವಿಭಾಗಗಳಲ್ಲಿ ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ಭದ್ರತೆ ಇರಲಿದೆ. 4 ಮಂದಿ ಎಸಿಪಿ, 11 ಮಂದಿ ಇನ್ಸ್ ಪೆಕ್ಟರ್‌ಗಳಿಂದ ಭದ್ರತೆ, ಪ್ರಮುಖ ಸ್ಥಳಗಳಲ್ಲಿ 65 ಪಿ.ಎಸ್.ಐ.ಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಒಟ್ಟು 700 ಮಂದಿ ಪೊಲೀಸ್ ಸಿಬ್ಬಂದಿಯನ್ನು (ಮಹಿಳಾ ಸಿಬ್ಬಂದಿ ಸೇರಿದಂತೆ) ನಿಯೋಜಿಸಲಾಗಿದೆ.

ಎರಡು ವಿಭಾಗಗಳಲ್ಲಿ ಒಟ್ಟು 1200 ಮಂದಿ ಪೊಲೀಸರನ್ನು ನಿಯೋಜನೆ, ಕೆ ಎಸ್ ಆರ್ ಪಿ 46, ಸಿ ಎ ಆರ್ 30, ಎರಡು ವಾಟರ್ ಜೆಟ್ ಇರಲಿದೆ. ಸಂಘಟನೆಯ ಪ್ರಮುಖರ ಮನೆಗಳ ಬಳಿಯೇ ಪೊಲೀಸರು ಅಲರ್ಟ್. ಹಿಂದಿನ ಬಾರಿಯ ಕನ್ನಡಪರ ಸಂಘಟನೆಗಳ ಹೋರಾಟದಲ್ಲಿ ನಾಮಫಲಕ ಪುಡಿ ಮಾಡಿದ ಘಟನೆಗಳು ಈ ಬಾರಿ ನಡೆಯದಂತೆ ಎಚ್ಚರಿಕೆ. ಹಿರಿಯ ಅಧಿಕಾರಿಗಳು ಎಲ್ಲಾ ಇನ್ಸ್ ಪೆಕ್ಟರ್‌ಗಳಿಗೆ ಜವಾಬ್ದಾರಿ ನೀಡಿದ್ದಾರೆ.

ಏನಿರುತ್ತೆ?
* ಹಾಲು, ದಿನಪತ್ರಿಕೆ, ಮೆಡಿಕಲ್

* ವೈದ್ಯಕೀಯ ಸೇವೆ ಎಂದಿನಂತೆ ಇರಲಿದೆ.

* ಮೆಟ್ರೋ ಸಂಚಾರ, BMTC,KSRTC,ರೈಲು

* ಶಾಲಾ ವಾಹನದ ವ್ಯವಸ್ಥೆ,ಖಾಸಗಿ ಬಸ್

* ಆ್ಯಂಬುಲೆನ್ಸ್ ,ಹೋಲ್ ಸೆಲ್ ಬಟ್ಟೆ ಅಂಗಡಿ

* ತರಕಾರಿ,ಹೂ, ಹಣ್ಣುಗಳು, ಸೂಪರ್ ಮಾರ್ಕೆಟ್

* ಹೋಟೆಲ್ ಗಳ ಎಂದಿನಂತೆ ಓಪನ್ ಇರಲಿದೆ

* ಬಾರ್ ಗಳು ಓಪನ್,ಏರ್ ಪೋರ್ಟ್ ಟ್ಯಾಕ್ಸಿ ಸೇವೆ

* 65% ಆಟೋಗಳ ಸೇವೆ ಬಂದ್ ದಿನ ಇರಲಿದೆ

==========

ಏನಿರಲ್ಲ?

* ಮಧ್ಯಾಹ್ನತನಕ ಥಿಯೇಟರ್ ಗಳು ಬಂದ್
* ಓಲಾ-ಊಬರ್ ಸೇವೆಯಲ್ಲಿ ವ್ಯತ್ಯಯ

* 35% ಆಟೋ ಸೇವೆಯಲ್ಲಿ ತುಸು ವ್ಯತ್ಯಯ

* ಗೂಡ್ಸ್ ವಾಹನಗಳ ಸೇವೆಯಲ್ಲಿ ವ್ಯತ್ಯಯ

ಕರ್ನಾಟಕ ಬಂದ್ ಗೆ ಬೆಂಬಲ..?

-ಕನ್ನಡ ಪರ ಸಂಘಟನೆಗಳ ಒಕ್ಕೂಟ -ಕರ್ನಾಟಕ ನ್ನಡ ಸೇನೆ

-ಒಲಾ ಉಬರ್ ಟ್ಯಾಕ್ಸಿ ಅಸೋಸಿಯೇಷನ್

-ಎಪಿಎಂಸಿ ಕಾರ್ಮಿಕರ ಸಂಘ

-ಕರ್ನಾಟಕ ಕಾರ್ಮಿಕ ಪರಿಷತ್

-ಡಾ.ವಿಷ್ಣು ಅಭಿಮಾನಿ ಬಳಗ

-ಬೆಂಗಳೂರು ಓಲಾ ಊಬರ್ ಅಸೋಸಿಯೇಷನ್

-ಬೆಂಗಳೂರು ಆದರ್ಶ ಆಟೋ ಚಾಲಕರ ಸಂಘಟನೆ

ಕರ್ನಾಟಕ ಬಂದ್ ಗೆ ಬೆಂಬಲ ಇಲ್ಲ?
ಕರವೇ ನಾರಾಯಣ ಗೌಡ ಬಣ

-ರಾಜ್ಯ ಹೊಟೇಲ್ ಮಾಲೀಕರ ಸಂಘ

-ಖಾಸಗಿ ಶಾಲೆಗಳ ಒಕ್ಕೂಟ

-ಬೆಂಗಳೂರು ಹೊಟೇಲ್ ಮಾಲೀಕರ ಸಂಘ

-ರಾಜ್ಯ ಪೋಷಕರ ಸಂಘ

-ಬೀದಿ ಬದಿ ವ್ಯಾಪಾರಿಗಳ ಸಂಘ

-ಬಾರ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಶನ್

ಭಾರೀ ನಷ್ಟದಲ್ಲಿ ಬಿಎಂಟಿಸಿ, ಬೆಸ್ಕಾಂ! ನಿವ್ವಳ ಮೌಲ್ಯ ಸಂಪೂರ್ಣವಾಗಿ ಕುಸಿತ: ಸಿಎಜಿ ವರದಿ

Leave a Reply

Your email address will not be published. Required fields are marked *