BBMP
Loading ...

ರಾಮನಗರ : ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ರಾಮನಗರ ಜಿಲ್ಲೆಯ ದಯಾನಂದ್ ಸಾಗರ ಆಸ್ಪತ್ರೆಯಲ್ಲಿ ತಾಯಿ ಒಬ್ಬಳು ಕ್ರೂರವಾಗಿ ವರ್ತಿಸಿದ್ದು ಎರಡು ದಿನದ ಮಗುವನ್ನು ಟಾಯ್ಲೆಟ್ ನಲ್ಲಿ ಹಾಕಿ ಫ್ಲಶ್ ಒತ್ತಿರುವ ಅಮಾನವೀಯ ಘಟನೆ ರಾಮನಗರ ಜಿಲ್ಲೆಯ ದಯಾನಂದ್ ಸಾಗರ ಆಸ್ಪತ್ರೆಯಲ್ಲಿ ನಡೆದಿದೆ.

ಹೌದು ರಾಮನಗರದಲ್ಲಿ ಅಮಾನವೀಯ ಘಟನೆ ನಡೆದಿದ್ದು, ಹೆತ್ತ ತಾಯಿ ಕ್ರೂರಿಯಾಗಿ ವರ್ತಿಸಿದ ಘಟನೆ ನಡೆದಿದೆ. ಹುಟ್ಟಿದ ಮಗುವನ್ನೇ ಟಾಯ್ಲೆಟ್ ಗೆ ಹಾಕಿ ಫ್ಲೆಶ್ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಈ ಒಂದು ಕೃತ್ಯ ನಡೆದಿದೆ. ಟಾಯ್ಲೆಟ್ ಪರಿಶೀಲನೆ ಮಾಡುವ ವೇಳೆ ಗಂಡು ಶಿಶು ಪತ್ತೆಯಾಗಿದೆ.

ಎರಡು ದಿನದ ನವಜಾತ ಕಂಡು ಶಿಶು ಪತ್ತೆಯಾಗಿದೆ. ಪತ್ತೆಯಾದ ನವಜಾತ ಶಿಶುವಿನ ನೋಡಿ ಆಸ್ಪತ್ರೆಯ ಸಿಬ್ಬಂದಿಗಳೇ ಶಾಕ್ ಆಗಿದ್ದಾರೆ. ರಾಮನಗರ ಜಿಲ್ಲೆಯ ದನ ದಯಾನಂದ್ ಸಾಗರ ಆಸ್ಪತ್ರೆಯಲ್ಲಿ ಈ ಒಂದು ಅಮಾನವೀಯ ಘಟನೆ ನಡೆದಿದೆ. ಆದರೆ ಈ ಒಂದು ನವಜಾತ ಶಿಶು ಯಾರದ್ದು, ಯಾರು ಈ ಕೃತ್ಯ ಎಸಗಿದ್ದು ಎನ್ನುವುದು ಇನ್ನು ತನಿಖೆಯ ವೇಳೆ ಪತ್ತೆಯಾಗಬೇಕಿದೆ.ಘಟನೆಗೆ ಸಂಬಂಧಿಸಿದಂತೆ ಹಾರೋಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಬಳ್ಳಾರಿಯಲ್ಲಿ ಐವರು ಬಾಣಂತಿಯರ ಸರಣಿ ಸಾವು: ಜಿಲ್ಲೆಯತ್ತ ತಲೆಯೂ ಹಾಕದ ಸಚಿವ ಜಮೀರ್ ಅಹ್ಮದ್

Leave a Reply

Your email address will not be published. Required fields are marked *