BBMP
Loading ...

Festival

ಬೆಂಗಳೂರು: ಡಿಸೆಂಬರ್​ 27ರ ಶನಿವಾರದಿಂದ ಡಿಸೆಂಬರ್ 31ರ ಬುಧರವಾರದವರೆಗೆ 19ನೇ ವರ್ಷದ ವಾರ್ಷಿಕ ಬ್ರಹೊತ್ಸವ ಮತ್ತು ಕುಂಭಾಬಿಷೇಕ, ಡಿಸೆಂಬರ್​ 30ರ ಮಂಗಳವಾರ ಬೆಳಗ್ಗೆ 4.30 ರಿಂದ ರಾತ್ರಿ 11.00 ರವರೆಗೆ ವೈಕುಂಠ ಏಕಾದಶಿ ಪೂಜಾ ಮಹೋತ್ಸವ ಮತ್ತು ವೈಕುಂಠ ಮಹಾದ್ವಾರ ಪ್ರವೇಶ ಹಾಗೂ ಡಿಸೆಂಬರ್​ 31ರ ಬುಧವಾರ ಬೆಳಿಗ್ಗೆ 8.00 ರಿಂದ ಶ್ರೀನಿವಾಸ ಕಲ್ಯಾಣೋತ್ಸವ ಮಧ್ಯಾಹ್ನ 12.30ಕ್ಕೆ ಅನ್ನದಾನ ಹಾಗೂ ಸಂಜೆ 5.00 ರಿಂದ ಅದ್ದೂರಿ ಪಲ್ಲಕ್ಕಿ ಉತ್ಸವವನ್ನು ಕಾಮಾಕ್ಷಿಪಾಳ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ವಿಜಯನಗರದ ಜನಪ್ರಿಯ ಶಾಸಕರಾದ ಶ್ರೀ ಕೃಷ್ಣಪ್ಪನವರು ಮತ್ತು ಅವರ ಶ್ರೀಮತಿ ಪ್ರಿಯದರ್ಶಿನಿ, ಗೋವಿಂದರಾಜನಗರ ಶಾಸಕರಾದ ಪ್ರಿಯಕೃಷ್ಣ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಶ್ರೀಮತಿ ಜಯಲಕ್ಷ್ಮೀ ಮತ್ತು ಶ್ರೀ ಚನ್ನಕೇಶವಚಾರ್ಯ, ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಕಾರ್ಯದರ್ಶಿಗಳಾದ ರವಿಕಲಾ ಮತ್ತು ಎಂ ವಿ ಹನುಮೇಗೌಡರು ಆಗಮಿಸಲಿದ್ದಾರೆ.

ಭಕ್ತಾದಿಗಳೇ, ಈ ಮೇಲ್ಕಂಡ ವಿಳಾಸದಲ್ಲಿ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ, ಶ್ರೀ ಸಂಕಷ್ಟಹರ ವಿಜಯ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ ಅಮ್ಮನವರು, ಶ್ರೀ ಸತ್ಯನಾರಾಯಣ ಸ್ವಾಮಿಯವರು, ಶ್ರೀ ಮಹಾ ಸುದರ್ಶನ, ಶ್ರೀ ಅಭಯ ಆಂಜನೇಯ, ಗರುಡ ದೇವರು, ನವಗ್ರಹ ಮೂರ್ತಿಗಳ ಸುಂದರ ಶಿಲಾ ಮೂರ್ತಿಗಳು ಪ್ರತಿಷ್ಠಾಪನೆಯಾಗಿದ್ದು ಹದಿನೆಂಟು ವರ್ಷಗಳು ಪೂರ್ಣಗೊಂಡಿರುತ್ತದೆ. ಅಂದಿನಿಂದ ಶ್ರೀ ಸ್ವಾಮಿಯವರಿಗೆ ಬೆಳಗ್ಗೆ 5.30ರಿಂದ ನಿತ್ಯ ಆರಾಧನೆ, ಪಂಚಾಮೃತ ಅಭಿಷೇಕ, ತೊಮಾಲೆ ಸೇವೆ, ವಿವಿಧ ಅಲಂಕಾರ ಸೇವೆಗಳು, ಪ್ರಸಾದ ವಿನಿಯೋಗ ಹೀಗೆ ಅನೇಕ ಸೇವೆಗಳು ಭಕ್ತಾದಿಗಳ ಸಹಾಯದಿಂದ ನಡೆಯುತ್ತದೆ. ಭಗವಂತನು ಇಲ್ಲಿ ನೆಲೆಸಿದ್ದು ಭಕ್ತರ ಇಷ್ಟಾರ್ಥಗಳನ್ನು ಕೊಡುತ್ತಾ ಜಗನ್ನೋಹನ ಮೂರ್ತಿಯಾಗಿ ನೆಲೆಸಿದ್ದಾನೆ. ಆದ್ದರಿಂದ ಶ್ರೀ ಸ್ವಾಮಿಯವರ ಹತ್ತೊಂಬತ್ತನೇ ವರ್ಷದ ವಾರ್ಷಿಕ ಬ್ರಹ್ಮತ್ಸವ, ಅಷ್ಟೋತ್ತರ, ಕುಂಭಾಭಿಷೇಕ ಮತ್ತು ವೈಕುಂಠ ಏಕಾದಶಿ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಪೂಜಾ ಕಾರ್ಯಕ್ರಮಗಳನ್ನು ಪಾಂಚರಾತ್ರಾಗಮ ರೀತ್ಯಾ ಇದೇ ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1948ಕ್ಕೆ ಸರಿಯಾದ ಶ್ರೀ ವಿಶ್ವಾವಸುನಾಮ ಸಂವತ್ಸರೇ ದಕ್ಷಿಣಾಯನೇ ಪುಷ್ಯ ಮಾಸ ಹಿಮಂತ ಋತು ಅಷ್ಟಮಿ ತಾ॥ 27-12-2025ರ ಶನಿವಾರದಿಂದ ತಾ|| 31-12-2025ರ ಬುಧವಾರದವರೆಗೆ ನಡೆಸಲು ಸಮಿತಿಯ ಭಕ್ತರ ಮತ್ತು ಎಲ್ಲಾ ಗ್ರಾಮಸ್ಥರ ಪ್ರೇರಣೆಯಾಗಿರುತ್ತದೆ. ತಾವುಗಳು ಈ ಶುಭ ಸಮಾರಂಭಕ್ಕೆ ಆಗಮಿಸಿ ಹೆಚ್ಚಿನ ರೀತಿಯಲ್ಲಿ ತನುಮನ ಧನಧಾನ್ಯ ರೂಪದಲ್ಲಿ ಸಹಕರಿಸಿ ಪೂಜೆಯಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ವಿಶೇಷ ಸೂಚನೆ: ಪ್ರತೀ ಹುಣ್ಣಿಮೆಯಂದು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಪ್ರತೀ ಚತುರ್ಥಿಯಂದು ಶ್ರೀ ಸಂಕಷ್ಟಹರ ಚತುರ್ಥಿ ಪೂಜೆಗಳು ಹಾಗೂ ಅಮಾವಾಸ್ಯೆಯಂದು ಶ್ರೀ ಮಹಾಲಕ್ಷ್ಮೀ ಅಮ್ಮನವರ ಸಹಸ್ರನಾಮ ಪೂಜೆಗಳು ಬಹಳ ವಿಜೃಂಭಣೆಯಿಂದ ನಡೆಯುತ್ತವೆ.

ದಿನಾಂಕ 27-12-2025ರ ಶನಿವಾರ
ಬೆಳಗ್ಗೆ 06.30 ರಿಂದ ದೀಪಾರಾಧನೆ, ಸುಪ್ರಭಾತ ಸೇವೆ, ವಿಷ್ಣಕ್ಷೇನಾರಾಧನೆ. ಧ್ವಜಾರೋಹಣ, ಮಹಾಮಂಗಳಾ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ…. ಸಂಜೆ 05-00 ರಿಂದ ದೀಪಾರಾಧನೆ. ಸ್ವಸ್ತಿವಾಚನ. ಮಹಾಗಣಪತಿ ಪೂಜೆ, ಭಗವದ್ ವಾಸುದೇವ ಪುಣ್ಯಾಹ. ರಕ್ಷಾಬಂಧನ. ಆಚಾರ್ಯಾದಿ ಋತ್ವಿಗರುಣ, ವೇದ ಪಾರಾಯಣ ಮತ್ಸಂಗಹಣ, ಅಂಕುರಾರ್ಪಣ. ಉದಕ ಶಾಂತಿ, ಯಾಗಶಾಲ ಪ್ರವೇಶ, ಮಹಾಗಣಪತಿ ಹೋಮ, ವಾಸ್ತು ರಾಕ್ಷೆಘ್ನ ಹೋಮ, ಅಂಕುರಾರ್ಪಣಾಂಗ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ….

ದಿನಾಂಕ 28-12-2025ರ ಭಾನುವಾರ
ಬೆಳಗ್ಗೆ 06.15 ರಿಂದ ಸುಪ್ರಭಾತ ಸೇವೆ, ಸ್ವಸ್ತಿವಾಚನ. ವಿಷ್ಣಕ್ಷೇನಾರಾಧನೆ. ಪಂಚಗವ್ಯ ಸ್ನಪನ. ದ್ವಾರತೋರಣ ಪೂಜೆ, ಅಷ್ಟೋತ್ತರ ಕಳಶರಾಧನೆ, ಕುಂಭ-ಉಪಕುಂಭ, ಪ್ರಧಾನ ಕುಂಭಾರಾದನೆ, ನವಗ್ರಹ ಪೂಜೆ. ಸುದರ್ಶನ ಚಕ್ರರಾಧನೆ, ವೇದ ಪಾರಾಯಣ, ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಅರುಣ ಹೋಮಾದಿಗಳು, ಪೂರ್ಣಾಹುತಿ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ…. ಸಂಜೆ 05.00 ರಿಂದ ವಿಶ್ವಸೇನಾರಾಧನೆ. ವೇದಪಾರಾಯಣ, ಪ್ರಾಣಾದಿತತ್ವ ನ್ಯಾಸ ಹೋಮಗಳು, ಮಹಾ ಸುದರ್ಶನ ಹೋಮ, ಲಕ್ಷ್ಮೀ-ನಾರಾಯಣ ಹೃದಯ ಹೋಮ ಮತ್ತು ಉಪಯುಕ್ತ ಹೋಮಗಳು, ಪೂರ್ಣಾಹುತಿ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ….

ದಿನಾಂಕ 29-12-2025ರ ಸೋಮವಾರ
ಬೆಳಗ್ಗೆ 06.30ರಿಂದ ಸ್ವಸ್ತಿವಾಚನ. ಸುಪ್ರಭಾತ ಸೇವೆ, ವಿಷ್ಣಕ್ಷೇನಾರಾಧನೆ. ವೇದ ಪಾರಾಯಣ, ಪಂಚಸೂಕ್ತ ಹೋಮ, ಪರಿವಾರ ಹಾಗೂ ಪ್ರಾಯಶ್ಚಿತ್ತ ಹೋಮ. ಬೆಳಗ್ಗೆ 10.00 ಕ್ಕೆ ಮಹಾಮಂಗಳಾರತಿ ಕುಂಭೋಧ್ವಾಸನೆ, ಕುಂಭಾಭಿಷೇಕ, ಅಷ್ಟೋತ್ತರ ಕಳಶಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ. ನಿವೇದನೆ, ಮಹಾಮಂಗಳಾರತಿ, ಅಷ್ಟಾವದಾನ ಸೇವೆ, ರಾಷ್ಟ್ರಾಶಿರ್ವಾದ, ಶಾತ್ತುಮೂರೈ, ತೀರ್ಥಪ್ರಸಾದ ವಿನಿಯೋಗ….

ದಿನಾಂಕ 30-12-2025ರ ಮಂಗಳವಾರ
ವೈಕುಂಠ ಏಕಾದಶಿ ಪ್ರಯುಕ್ತ ಬೆಳಗಿನ ಜಾವ 01.15ರಿಂದ ಸ್ವಾಮಿಯವರ ಅಭಿಷೇಕ, ಅಲಂಕಾರ, ಸಹಸ್ರನಾಮಾರ್ಚನೆ, ಅಷ್ಠಾವದಾನ ಸೇವೆ, ವೈಕುಂಠದ್ವಾರ ಪೂಜೆ. ದ್ವಾರ ಪ್ರವೇಶ, ಮಹಾಮಂಗಳಾರತಿ, ತೀರ್ಥ-ಉಚಿತ ಲಾಡು ಪ್ರಸಾದ ವಿನಿಯೋಗ ಬೆಳಿಗ್ಗೆ 8.00ರಿಂದ 12.00ರವರೆಗೆ ವಿದ್ವಾನ್ ಎನ್. ಮುರಳಿ ಕೃಷ್ಣ & ವಿಧೂಷಿ ಧನಲಕ್ಷ್ಮೀ ತಂಡದವರಿಂದ ಭಕ್ತಿಗೀತೆ ಗಾಯನ ಮಧ್ಯಾಹ್ನ 12.30 ರಿಂದ 5.00 ರವರೆಗೆ ಅನ್ನಮಯ್ಯ ಕೀರ್ತನೆಗಳು & ಸುಗುಮ ಸಂಗೀತ ವಿದ್ವಾನ್ ಕೆ. ಬಾಲಾಜಿ & ತಂಡದವರಿಂದ (ಶ್ರೀನಗರ) ಸಂಜೆ 5.30 ರಿಂದ ಶ್ರೀಮತಿ ವಿದ್ವಾನ್ ಧನುಶ್ರೀ ಎಸ್ ರವರಿಂದ ಕೀರ್ತನೆಗಳು & ಸುಗುಮ ಸಂಗೀತ

ದಿನಾಂಕ 31-12-2025ರ ಬುಧವಾರ
ಮುಕ್ಕೋಟಿ ದ್ವಾದಶಿ ಪ್ರಯುಕ್ತ ಬೆಳಗ್ಗೆ 08.00ರಿಂದ ಶ್ರೀ ಭೂನೀಳಾ ಸಮೇತ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯವರ ತಿರು-ಕಲ್ಯಾಣ ಮಹೋತ್ಸವ ಮತ್ತು ಮಧ್ಯಾಹ್ನ 12-30 ರಿಂದ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ.

ಸಂಗೀತ ಕಾರ್ಯಕ್ರಮ: ವಿದ್ವಾನ್ ಕೃಷ್ಣ & ಸಂಗಡಿಗರು (ಹೊಸೂರು) ವಾದ್ಯಗೋಷ್ಠಿ: ವಿದ್ವಾನ್ ಮಂಜುನಾಥ್ & ಸಂಗಡಿಗರು (ಆನೇಕಲ್), ವಿದ್ವಾನ್ ನಂಜುಂಡಪ್ಪ & ಸಂಗಡಿಗರು (ಕಾಮಾಕ್ಷಿಪಾಳ್ಯ) ಸಂಜೆ 05-30ರಿಂದ ಮಹೇಶ್ & ತಂಡದವರಿಂದ ವೀರಗಾಸೆ ಕುಣಿತ & ಪೂಜಾ ಕುಣಿತ ಮತ್ತು ಶ್ರೀ ಮುನಿಯಪ್ಪ & ತಂಡದವರಿಂದ ತಮಟೆ ವಾದ್ಯ (ಕತ್ರಿಗುಪ್ಪೆ) ಹಾಗೂ ಗ್ರಾತಿ 09-30ರಿಂದ ಸ್ವಾಮಿಯವರ ಶಯನೋತ್ಸವ ಪೂಜೆ ನಡೆಯುತ್ತದೆ.

Leave a Reply

Your email address will not be published. Required fields are marked *