ಬೆಂಗಳೂರು: ಶ್ರೀ ಸ್ಪಟಿಕಾಪುರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿಗಳು ನೂತನ ಮಲ್ಲೇಶ್ವರ ಕೆಫೆಯನ್ನು ತಮ್ಮ ಅಮೃತ ಹಸ್ತದಿಂದ ಇಂದು (ಜೂನ್ 20) ಉದ್ಘಾಟಿಸಿದರು.
ಬೆಂಗಳೂರಿನ ಮಂಗನಹಳ್ಳಿ ಕ್ರಾಸ್ನಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಎದುರು ಇರುವ ಎಸ್ಎಲ್ವಿ ಪ್ಲಾಜಾದಲ್ಲಿ ಇಂದು ಬೆಳಗ್ಗೆ 9.30ಕ್ಕೆ ನಂಜಾವಧೂತ ಸ್ವಾಮೀಜಿಗಳು ಉದ್ಘಾಟನೆ ಮಾಡಿದರು.

ಟೇಪ್ ಕತ್ತರಿಸುವ ಮೂಲಕ ನೂತನ ಮಲ್ಲೇಶ್ವರ ಕೆಫೆಯನ್ನು ಉದ್ಘಾಟಿಸಿದ ನಂಜಾವಧೂತ ಶ್ರೀಗಳು ಗಲ್ಲಾ ಪೆಟ್ಟಿಗೆಗೆ ಹಣ ಹಾಕುವ ಮೂಲಕ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಮಲ್ಲೇಶ್ವರ ಕೆಫೆ ಮಾಲೀಕರು ಮತ್ತು ಆಪ್ತರು ಹಾಗೂ ಬಂಧುಬಗಳದವರು ಶ್ರೀಗಳಿಗೆ ಗೌರವ ಸಲ್ಲಿಸಿ, ಆಶೀರ್ವಾದ ಪಡೆದರು.
ಜಮೀನಲ್ಲಿ ಕರೆಂಟ್ ಕಂಬ ಹಾಕಿಸಿದ್ದರೆ ಪರಿಹಾರ ಸಿಗುತ್ತೆ ಎಂಬ ಸುದ್ದಿ ಸುಳ್ಳು: ಸ್ಪಷ್ಟನೆ ನೀಡಿದ ಬೆಸ್ಕಾಂ


