ಬೆಂಗಳೂರು: ಕೆಆರ್ ಪುರಂ ಸಬ್ ಡಿವಿಷನ್ನ ಮುನೇಶ್ವರ ಬಡವಾಣೆಯಲ್ಲಿ ಕಳೆದ ಮೂರು ವರ್ಷಗಳಿಂದ ಅಕ್ರಮ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಒಂದೇ ಮೀಟರ್ನಿಂದ 16 ಮನೆಗಳಿಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದು ಬೆಸ್ಕಾಂಗೆ ಲಕ್ಷಾಂತರ ರೂ. ನಷ್ಟ ಉಂಟು ಮಾಡುತ್ತಿದ್ದಾರೆ. ಈ ವಿಷಯ ಬೆಸ್ಕಾಂ (BESCOM) ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಸ್ತಿ ತಲೆ ಕೆಡಿಸಿಕೊಂಡಿಲ್ಲ.
ಒಂದೇ ಮೀಟರ್ ಅಳವಡಿಸಿ, ಅದಕ್ಕೆ ಹೆಚ್ಚುವರಿ ಕೇಬಲ್ನಿಂದ ಉಳಿದ ಶೀಟ್ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಥೆರೆಸಾ ಅನ್ನೋ ಮನೆ ಮಾಲಕಿಗೆ ಈ ಹಿಂದೆ ಬೆಸ್ಕಾಂ ಅಧಿಕಾರಿಗಳು ವಾರ್ನ್ ಮಾಡಿ, ಎರಡು ಬಾರಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ರೂ ಮತ್ತೆ ಸಂಪರ್ಕ ಪಡೆದಿದ್ದಾರೆ. ಟಿವಿ, ಫ್ಯಾನ್, ಫ್ರಿಡ್ಜ್, ಲೈಟ್ ಉರಿಯುತ್ತಿದ್ದು, ಬೆಸ್ಕಾಂಗೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಕೆ.ಪುರಂನಲ್ಲಿ ಹೈಟೆನ್ಶನ್ ವೈಯರ್ ತಗುಲಿ ನೇಪಾಳ ಮೂಲದ ಬಾಲಕ ಮೃತಪಟ್ಟಿದ್ದ. ಅದೇ ಮನೆ ಮಾಲೀಕನ ಸಹೋದರಿಯಿಂದಲೇ ವಿದ್ಯುತ್ ಕಳ್ಳತನ ಆಗಿದೆ.
ಇನ್ನು ಈ ವಿಚಾರವಾಗಿ ನಿಮ್ಮ ಪಬ್ಲಿಕ್ ಟಿವಿ ವಿಸ್ತೃತ ವರದಿ ಬಿತ್ತರಿಸಿತ್ತು. ಈ ಬೆನ್ನಲ್ಲೇ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಅಲ್ಲದೇ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಮನೆ ಮಾಲೀಕರ ಮೇಲೆ ಎಫ್ಐಆರ್ ದಾಖಲು ಮಾಡಲು ಮುಂದಾಗಿದ್ದಾರೆ. ಬೆಸ್ಕಾಂ ವಿಜಿಲೆನ್ಸ್ ವಿಭಾಗ ಹಾಗೂ ಕೆಆರ್ ಪುರಂ ಸಬ್ ಡಿವಿಷನ್ ಅಧಿಕಾರಿಗಳು ಎಫ್ಐಆರ್ ಮಾಡಲು ನಿರ್ಧರಿಸಿದ್ದಾರೆ.
ಬೆಸ್ಕಾಂ ವಿದ್ಯುತ್ ಸಂಪರ್ಕ: ಜುಲೈ 1 ರಿಂದ ಮಹತ್ವದ ಬದಲಾವಣೆ; ಹೊಸ ಕನೆಕ್ಷನ್ಗೆ ಸ್ಮಾರ್ಟ್ ಮೀಟರ್ ಕಡ್ಡಾಯ!


