BBMP
Loading ...

Bike

ಬೆಂಗಳೂರು : ಬೈಕ್​ ಸವಾರನ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ಗಾಯಗೊಂಡ ಬೈಕ್​ ಸವಾರ ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ವಿರುದ್ದ ದೂರು ದಾಖಲಿಸಿದ್ದಾನೆ. ದೂರು ದಾಖಲಿಸಿಕೊಂಡಿರುವ ಜಯನಗರ ಪೊಲೀಸರು ಆರೋಪಿಗಳ ವಿರುದ್ದ FIR ದಾಖಲಿಸಿದ್ದಾರೆ.

ಜಯನಗರದ ನಾಲ್ಕನೇ ಬ್ಲಾಕ್​ನ ಸ್ವರ್ಣ ಬಿಲ್ಡಿಂಗ್ ಬಳಿ ಘಟನೆ ನಡೆದಿದ್ದು. ಬೈಕ್​ ಸವಾರ ಮೊಹಮ್ಮದ್​ ಜುಹೇಬ್​ ಎಂಬಾತನ ಮೇಲೆ ಬೃಹತ್​ ಗಾತ್ರದ ಮರ ಬಿದ್ದು ಗಾಯಗೊಂಡಿದ್ದು. ಮರ ಬಿದ್ದ ಪರಿಣಾಮ ಮೊಹಮ್ಮದ್​ನ ಕೈ-ಕಾಲು ಮತ್ತು ತಲೆಗೆ ತೀವ್ರವಾಗಿ ಗಾಯವಾಗಿದೆ. ಆದರೆ ಈ ಮೊದಲೇ ಆ ಮರದ ಬುಡ ಹುಳು ತಿಂದು ಕೊಳೆತು ಹೋಗಿದ್ದು, ಅದನ್ನು ತೆರವು ಮಾಡಬೇಕು ಎಂದು ಬಿಬಿಎಂಪಿಗೆ ದೂರು ನೀಡಲಾಗಿತ್ತು. ಆದರೆ ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ಮರವನ್ನು ತೆರವುಗೊಳಿಸದೆ ನಿರ್ಲಕ್ಷ ತೋರಿತ್ತು ಎಂದು ಆರೋಪಿಸಲಾಗಿದೆ.

ಮರಬಿದ್ದು ಗಾಯಗೊಂಡಿರುವ ಮೊಹಮ್ಮದ್​ ಜುಹೇಬ್​ ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ವಿರುದ್ದ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು. ದೂರು ದಾಖಲಿಸಿಕೊಂಡಿರುವ ಪೊಲೀಸರು ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ವಿರುದ್ದ ಎಫ್​ಐಆರ್​ ದಾಖಲಿಸಿದ್ದಾರೆ. ಎಫ್​ಐಆರ್​ ಪ್ರಕಾರ ಬಿಬಿಎಂಪಿಯನ್ನು ಎ1 ಆರೋಪಿ ಮಾಡಲಾಗಿದ್ದು. ಅರಣ್ಯ ಇಲಾಖೆ ಎ2 ಆರೋಪಿಯಾಗಿದೆ.

ಇನ್ನು ಗಾಯಾಳು ಮಹಮ್ಮದ್​ಗೆ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು. ಪೊಲೀಸರು ಆಸ್ಪತ್ರೆಗೆ ಹೋಗಿ ಯುವಕನ ಬಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ರೆಬಲ್ಸ್‌ಗೆ ಶಾಕ್‌ ಕೊಟ್ಟ ಬಿಜೆಪಿ: S.T.ಸೋಮಶೇಖರ್‌, ಶಿವರಾಮ್‌ ಹೆಬ್ಬಾರ್‌ ಪಕ್ಷದಿಂದ ಉಚ್ಛಾಟನೆ!

Leave a Reply

Your email address will not be published. Required fields are marked *