BBMP
Loading ...

Victoria Hospital

Greater Bengaluru News9 : ಇತ್ತೀಚಿಗೆ ಬಿಎಂಟಿಸಿ ಕಂಡಕ್ಟರ್ ಗಳು ಸಂಸ್ಥೆಯ ಸ್ಕ್ಯಾನರ್ ಬದಲು ತಮ್ಮ ಸ್ಕ್ಯಾನರ್ ಹಾಕಿ ಲಕ್ಷಾಂತರ ರೂಪಾಯಿ ವಂಚನೆ ಎಸಗಿದ್ದ ಪ್ರಕರಣದ ಬೆನ್ನೆಲೆ ಇದೀಗ ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಕೂಡ ಸಿಬ್ಬಂದಿಗಳು ಯುಪಿಐ ಸ್ಕ್ಯಾನರ್ ಮೂಲಕ 23 ಲಕ್ಷಕ್ಕೂ ಹೆಚ್ಚು ಹಣ ವಂಚನೆ ಎಸಗಿದ್ದು ಬೆಳಕಿಗೆ ಬಂದಿದೆ.

ಹೌದು ರೋಗಿಗಳ ಅನುಕೂಲಕ್ಕಾಗಿ ಪರಿಚಯಿಸಲಾಗಿದ್ದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಂಡು, ಆಸ್ಪತ್ರೆಯ ಕೆಲ ಕಳ್ಳ ಸಿಬ್ಬಂದಿಗಳು ಸುಮಾರು 23 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ಅಕ್ರಮವಾಗಿ ದೋಚಿರುವುದು ಬಹಿರಂಗವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಅವರು ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇತ್ತೀಚಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಶುಲ್ಕ ಪಾವತಿಸಲು ಅನುಕೂಲ ಆಗಲಿ ಎಂದು ಯುಪಿಐ ವ್ಯವಸ್ಥೆ ಅಳವಡಿಸಲಾಗಿತ್ತು. ಸ್ಕ್ಯಾನರ್ ಲ್ಯಾಬ್ ಟೆಸ್ಟಿಂಗ್ ಸೇರಿದಂತೆ ಆಸ್ಪತ್ರೆಯ ಎಲ್ಲಾ ವೈದ್ಯಕೀಯ ಸೇವೆಗಳಿಗೆ ಶುಲ್ಕ ಪಾವತಿಸಲು ಯುಪಿಐ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಇದನ್ನೇ ದುರುಪಯೋಗಪಡಿಸಿಕೊಂಡ ಸಿಬ್ಬಂದಿಗಳು ಅಧಿಕೃತ ಕ್ಯೂಆರ್ ಕೋಡ್ ಬದಲು ತಮ್ಮದೇ ವೈಯಕ್ತಿಕ ಯುಪಿಐ ಕ್ಯೂಆರ್ ಸ್ಕ್ಯಾನ್‌ಗಳನ್ನು ವಿವಿಧ ವಿಭಾಗಗಳಲ್ಲಿ ಅಳವಡಿಸಿದ್ದರು. ರೋಗಿಗಳು ಹಾಗೂ ಸಂಬಂಧಿಕರು ಇದನ್ನು ಗಮನಿಸದೆ ಹಣ ಪಾವತಿ ಮಾಡಿದ ಪರಿಣಾಮ, ಹಣ ನೇರವಾಗಿ ಸಿಬ್ಬಂದಿಗಳ ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಆಗುತ್ತಿತ್ತು.

Leave a Reply

Your email address will not be published. Required fields are marked *