BBMP
Loading ...

KSRTC

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ(KSRTC) ಪ್ರಯಾಣಿಸುವವರೇ ಗಮನಿಸಿ. ಶನಿವಾರ ಮಧ್ಯರಾತ್ರಿಯಿಂದಲೇ ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪರಿಷ್ಕೃತ ಟಿಕೆಟ್ ದರ ಜಾರಿಗೆ ಬರಲಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್‌ನಲ್ಲಿ ಶೇ.15ರಷ್ಟು ಟಿಕೆಟ್ ದರ ಏರಿಕೆಗೆ ಅನುಮೋದನೆ ಸಿಕ್ಕಿದ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳು ದರವನ್ನು ಏರಿಕೆ ಮಾಡಿದೆ. ಪಬ್ಲಿಕ್ ಟಿವಿಗೆ ಸಿಕ್ಕಿರುವ ಸಾಮಾನ್ಯ ಬಸ್ಸುಗಳ ಟಿಕೆಟ್ ದರದಲ್ಲಿ ಬೆಂಗಳೂರಿನಿಂದ ರಾಮನಗರಕ್ಕೆ ಕನಿಷ್ಠ 7 ರೂಪಾಯಿಯಿಂದ ಬೀದರ್‌ಗೆ ಗರಿಷ್ಠ 115 ರೂಪಾಯಿ ಹೆಚ್ಚಾಗಲಿದೆ.

ಎಲ್ಲಿಂದ ಎಲ್ಲಿಗೆ? ಎಷ್ಟು ದರ?
ಬೆಂಗಳೂರಿನಿಂದ ಬೀದರ್‌ಗೆ 821 ರೂ. ದರ ಇದ್ದರೆ ಇನ್ನು ಮುಂದೆ 936 ರೂ. ಏರಿಕೆಯಾಗಲಿದೆ. ಒಟ್ಟು 115 ರೂ. ದರ ಹೆಚ್ಚಳವಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಮೊದಲು 398 ರೂ. ದರ ಇತ್ತು. ಈಗ 454 ರೂ.ಗೆ ಏರಿಕೆಯಾಗಿದೆ. ಬೆಂಗಳೂರಿನಿಂದ ದಾವಣಗೆರೆಗೆ 320 ರೂ. ದರ ಇತ್ತು. ಇನ್ನು ಮುಂದೆ 362 ರೂ. ಆಗಲಿದ್ದು, 42 ರೂ. ಹೆಚ್ಚಳವಾಗಲಿದೆ. ಬೆಂಗಳೂರಿನಿಂದ ಮೈಸೂರಿಗೆ 141 ರೂ. ಇತ್ತು. ಭಾನುವಾರದಿಂದ 162 ರೂ. ಆಗಲಿದ್ದು 21 ರೂ. ಏರಿಕೆ ಕಾಣಲಿದೆ.

bus fare

ಕ್ಯಾನ್ಸರ್‌ ಗೆದ್ದ ಬಳಿಕ ಶಿವಣ್ಣ ಡಿಸ್ಚಾರ್ಜ್‌: ಆಸ್ಪತ್ರೆ ಪಕ್ಕ ಜಾಲಿಮೂಡ್‌ನಲ್ಲಿ ಹ್ಯಾಟ್ರಿಕ್‌ ಹೀರೋ

Leave a Reply

Your email address will not be published. Required fields are marked *