BBMP
Loading ...

KSLECA

Greater Bengaluru News9: ವಿದ್ಯುತ್​ ಗುತ್ತಿಗೆದಾರರ ಸಂಘದ ಕೇಂದ್ರ ಸಮಿತಿಗೆ ಆಡಳಿತಾಧಿಕಾರಿ ನೇಮಕ ಮಾಡಿರುವುದಕ್ಕೆ ಹೈಕೋರ್ಟ್​ ಇಂದು ತಡೆಯಾಜ್ಞೆ ನೀಡಿದ್ದು, ಪ್ರಸ್ತುತ ಕೇಂದ್ರ ಸಮಿತಿಯೇ ಮುಂದುವರಿಯಲಿದೆ. ಅಲ್ಲದೆ, ಚುನಾವಣಾಧಿಕಾರಿ ಸೂಚನೆಯಂತೆ ಮುಂದಿನ 6 ತಿಂಗಳ ಒಳಗೆ ಚುನಾವಣೆ ನಡೆಸಲಿದೆ.

ಸಂಘದ ಕೇಂದ್ರ ಸಮಿತಿಯ ಅವಧಿ ಮುಗಿಯುವ ಮುನ್ನವೇ ಸಮಿತಿಗೆ ಚುನಾವಣೆ ನಡೆಸಲು ಚುನಾವಣಾಧಿಕಾರಿಯನ್ನು ನೇಮಿಸಿ, ಚುನಾವಣೆ ನಡೆಸಿಕೊಡಲು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿದ ಉಚ್ಛ ನ್ಯಾಯಾಲಯ ಕರ್ನಾಟಕ ಸರ್ಕಾರ ನೇಮಿಸಿದ ಆಡಳಿತಾಧಿಕಾರಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಹೀಗಾಗಿ, ಪ್ರಸ್ತುತ ಆಡಳಿತಾಧಿಕಾರಿ ನೇಮಕಕ್ಕೆ ತಡೆಯಾಗಿದ್ದು, ಹೊಸ ಚುನಾವಣಾಧಿಕಾರಿ ಕೂಡ ನೇಮಕವಾಗಲಿದೆ. ಮುಂದಿನ 6 ತಿಂಗಳಲ್ಲಿ ಚುನಾವಣೆ ನಡೆಯಲಿದೆ.

ಸಂಘದ ವತಿಯಿಂದ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳ ಖರ್ಚು-ವೆಚ್ಚಗಳಲ್ಲಿ ಪಾರದರ್ಶಕವಾಗಿರುವುದಿಲ್ಲ ಹಾಗೂ ಸಂಘದ ಖಾತೆಗೆ ತೆಗೆದುಕೊಂಡಿರುವುದಿಲ್ಲ ಎಂಬ ಆರೋಪ ಮಾಡಲಾಗಿತ್ತು. ಅಲ್ಲದೆ, ಸಂಘದ ಆಡಳಿತ ಮಂಡಳಿಯ ಅವಧಿಯು ಮುಕ್ತಾಯಗೊಂಡಿದ್ದರೂ ನಿಗದಿತ ಸಮಯದಲ್ಲಿ ಸಂಘದ ಚುನಾವಣೆಯನ್ನು ನಡೆಸಲು ಆಡಳಿತ ಮಂಡಳಿಯ ವಿಫಲವಾಗಿ, ಸಂಘದ ಆಡಳಿತದಲ್ಲಿ ಶೂನ್ಯತೆ ಉಂಟಾಗಿದ್ದು, ಅವಧಿ ಮುಗಿದಿರುವ ಆಡಳಿತ ಮಂಡಳಿಯೇ ಮುಂದುವರೆದಿರುವ ಹಿನ್ನಲೆಯಲ್ಲಿ ಸಂಘದ ಹಿತದೃಷ್ಟಿಯಿಂದ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲು ಮನವಿ ಮಾಡಲಾಗಿತ್ತು. ಅದರಂತೆ ಸರ್ಕಾರಿ ಆಡಳಿತಾಧಿಕಾರಿಯನ್ನು ನೇಮಿತ್ತು. ಆದರೆ, ಅದಕ್ಕೆ ಹೈಕೋರ್ಟ್​ ತಡೆ ನೀಡಿದೆ.

ಇನ್ನು ಅರ್ಜಿದಾರರ ಪ್ರಕರಣದ ಹೊರತಾಗಿಯೂ ಸೊಸೈಟಿಯ ನಿಧಿಯನ್ನು ಬಳಸಿಕೊಂಡು ಯಾವುದೇ ಕಾರ್ಯವನ್ನು ಆಯೋಜಿಸಲಾಗಿಲ್ಲ ಮತ್ತು ಕಾರ್ಯಗಳಿಗೆ ಪ್ರಾಯೋಜಕರು ಹಣಕಾಸು ಒದಗಿಸುತ್ತಾರೆ. ವಾರ್ಷಿಕ ಸಾಮಾನ್ಯ ಸಭೆಯ ಅಂತಿಮ ಅಧಿಕಾರವನ್ನು ಮೀರಿ ಹಿಂದಿನ ಸಮಿತಿಯು ವಿಷಯದ ಆಸ್ತಿಯನ್ನು ಖರೀದಿಸಿದ್ದರೂ, ಈ ಖರೀದಿಯ ವಿವರಗಳನ್ನು ಮುಂದಿನ ಸಾಮಾನ್ಯ ಸಭೆಗಳ ಮುಂದೆ ಇಡಲಾಗುತ್ತದೆ. ಪ್ರಸ್ತುತ ವ್ಯವಸ್ಥಾಪಕ ಸಮಿತಿಯು ಖರೀದಿಯೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ. ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪ್ರಸ್ತುತ ವ್ಯವಸ್ಥಾಪಕ ಸಮಿತಿಯು ಆರು ತಿಂಗಳ ಕಾಲ ಅಧಿಕಾರದಲ್ಲಿರಲು ಅರ್ಹವಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡನೆ ಮಾಡಿದರು. ಇದನ್ನು ಪುರಷ್ಕರಿಸಿದ ನ್ಯಾಯಾಲಯ ಆಡಳಿತಾಧಿಕಾರಿಯ ನೇಮಕವನ್ನು ರದ್ದು ಮಾಡಿದೆ. ಎಂದಿನಂತೆ ವಿದ್ಯುತ್​ ಗುತ್ತಿಗೆದಾರರ ಸಂಘದ ಕೇಂದ್ರ ಸಮಿತಿಯೇ ಅಧಿಕಾರದಲ್ಲಿ ಮುಂದುವರಿಯಲಿದೆ.

ಸಂಘದ ಪ್ರತಿಕ್ರಿಯೆ ಏನು?
ಈ ಬಗ್ಗೆ ವಿದ್ಯುತ್​ ಗುತ್ತಿಗೆದಾರರ ಸಂಘ ಪ್ರತಿಕ್ರಿಯೆ ನೀಡಿದ್ದು, ಪ್ರಸ್ತುತ ಕೇಂದ್ರ ಸಮಿತಿಗೆ ಆಡಳಿತಾಧಿಕಾರಿ ನೇಮಕ ವಿಚಾರದಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ಆಗಿದ್ದು, ಶೀಘ್ರದಲ್ಲೇ ಆಡಳಿತಾಧಿಕಾರಿಗಳಿಂದ ಅಧಿಕಾರ ವಹಿಸಿ ಕೊಳ್ಳಲಾಗುವುದು. ಮುಂದುವರೆದು ವಿದ್ಯುತ್ ಸಂಪರ್ಕಕ್ಕೆ ಅಡ್ಡಿಯಾಗಿರುವ ವಾಸದೃಡಿಕರಣ ಪತ್ರಕ್ಕೆ ವಿನಾಯಿತಿ ವಿಷಯದಲ್ಲಿ ಇಂದಿನ ಸಂಪುಟ ಸಭೆಯಲ್ಲಿ ಚರ್ಚೆ ನಡೆದು, ಮುಂದಿನ ಸಭೆಯಲ್ಲಿ ಸಾಧಕ ಬಾಧಕಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳುವ ಉದ್ದೇಶದಿಂದ ಮುಂದೂಡಲಾಗಿದೆ. ಪ್ರಸ್ತುತ ಸ್ವಾಧೀನಾನುಭವ ಪತ್ರದ ವಿಷಯದಲ್ಲಿ ಕಡಿಮೆ ಅವಧಿಯಲ್ಲಿ ಈ ಹಂತ ತಲುಪಿರುವುದು ಒಂದು ಸಾಧನೆಯೇ ಸರಿ ಮತ್ತು ಈ ವಿಷಯದ ಸಂಬಂಧವಾಗಿ ವಾಟ್ಸಾಪ್ ಗುಂಪುಗಳಲ್ಲಿ ಚರ್ಚಿಸುವ ಮಿತ್ರರಿಗೆ ನಮ್ಮ ಸಾಧನೆಗಳ ಮೂಲಕವೇ ಉತ್ತರ ನೀಡಲಾಗುವುದು ಎಂದು ಕೇಂದ್ರ ಸಮಿತಿ ಮತ್ತು ಬೆಂಗಳೂರು ನಗರ ಜಿಲ್ಲಾ ಸಮಿತಿ ಹೇಳಿದೆ.

ಹೊಸ ಚುನಾವಣಾಧಿಕಾರಿ ನೇಮಕ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ತ ಗುತ್ತಿಗೆದಾರರ ಸಂಘ ರಿ. ನಂ.33, ಅವಿನ್ಯೂ ರಸ್ತೆ, ಬೆಂಗಳೂರು-02 ಈ ಸಂಘದ ಚುನಾವಣೆಯನ್ನು ನಡೆಸಲು ಹೊಸ ಚುನಾವಣಾಧಿಕಾರಿ ನೇಮಕವಾಗಲಿದ್ದಾರೆ. ಈ ಕುರಿತು ಈ ಹಿಂದೆಯೇ ವಿದ್ಯುತ್​ ಗುತ್ತಿಗೆದಾರರ ಸಂಘ ಮನವಿ ಮಾಡಿದ್ದು, ಶ್ರೀಧ್ರದಲ್ಲೇ ಹೊಸ ಚುನವಣಾಧಿಕಾರಿ ನೇಮಕವಾಗಲಿದ್ದಾರೆ. ಮುಂದಿನ 6 ತಿಂಗಳ ಒಳಗೆ ಚುನಾವಣೆ ನಡೆಯಲಿದೆ.

Leave a Reply

Your email address will not be published. Required fields are marked *